ಮಡಿಕೇರಿ, ಸೆ. 18: ರಾಜ್ಯ ಸರಕಾರ ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಟಿಪ್ಪು ಜಯಂತಿ ಆಚರಣೆಗೆ ಮುಂದಾದ ಪರಿಣಾಮ ಜಿಲ್ಲೆಯಲ್ಲಿ ಹಲವಾರು ಅಹಿತಕರ ಘಟನೆಗಳು ನಡೆಯುವಂತಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಕರ ವಿರೋಧ ವಿರುವ ಟಿಪ್ಪು ಜಯಂತಿಯನ್ನು ಈ ವರ್ಷ ಕೊಡಗಿನಲ್ಲಿ ಆಚರಿಸಲೇಬಾರದು. ಈ ಬಗ್ಗೆ ಮಡಿಕೇರಿ ಕೊಡವ ಸಮಾಜದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗುವದು ಎಂದು ಕೊಡವ ಸಮಾಜದ ಅಧ್ಯಕ್ಷ ಕೊಂಗಾಂಡ ಎಸ್. ದೇವಯ್ಯ ಅವರು ಹೇಳಿದರು.

ಮಡಿಕೇರಿ ಕೊಡವ ಸಮಾಜದ ವತಿಯಿಂದ ಇಂದು ನಡೆದ ಕೈಲ್ ಪೊಳ್ದ್ ಸಂತೋಷ ಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದ ದೇವಯ್ಯ ಅವರು ಟಿಪ್ಪು ಜಯಂತಿ ಆಚರಣೆಯನ್ನು ಕೊಡವ ಸಮಾಜ ವಿರೋಧಿಸುವ ಕುರಿತು ಪ್ರಸ್ತಾಪಿಸಿದರು.

ಕೊಡವ ಸಮಾಜದ ಮೂಲಕ ನಡೆಸಲ್ಪಡುತ್ತಿರುವ ಜನರಲ್ ತಿಮ್ಮಯ್ಯ ವಿದ್ಯಾಸಂಸ್ಥೆಯಲ್ಲಿ ಮುಂದಿನ ವರ್ಷದಿಂದ ಪಿಯುಸಿ ಶಿಕ್ಷಣ ಪ್ರಾರಂಭಿಸುವ ಅಭಿಲಾಷೆಯನ್ನು ಹೊಂದಲಾಗಿದೆ. ಸಮಾಜದ ಅಧೀನದಲ್ಲಿರುವ ಈ ಹಿಂದಿನ ಕೊಡಗು ಪ್ರೆಸ್ ಜಾಗದಲ್ಲಿ ಪಿಯುಸಿ ವಿಭಾಗ ಆರಂಭಿಸಲು ಪ್ರಯತ್ನ ನಡೆಸಲಾಗುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಇದನ್ನು ಪ್ರಾರಂಭಿ ಸಲು ಪ್ರಯತ್ನ ನಡೆಸಲಾಗು ತ್ತಿದೆ ಎಂದು ತಿಳಿಸಿದರು.

ಕೊಡವ ಸಮಾಜದ ಅಭಿವೃದ್ಧಿಯ ಚಿಂತನೆಗೆ ಸರ್ವರ ಸಹಕಾರ ಅಗತ್ಯವಿದ್ದು, ಜನಾಂಗ ದವರು ಕೈ ಜೋಡಿಸುವಂತೆ ಕೋರಿದ ಅವರು ಸದಸ್ಯತ್ವ ಆಂದೋಲನದ ಬಗ್ಗೆಯೂ ಸ್ಪಂದಿಸಲು ಮನವಿ ಮಾಡಿದರು.

ಬಲಹೀನರಲ್ಲ : ಸುಬ್ಬಯ್ಯ

ಅತಿಥಿಗಳಾಗಿದ್ದ ಕೊಡವ ಸಮಾಜದ ನಿರ್ಗಮಿತ ಅಧ್ಯಕ್ಷ ಮೂವೇರ ಶಂಭು ಸುಬ್ಬಯ್ಯ ಅವರು ಕೊಡವರು ಯಾವದೇ ಕಾರಣಕ್ಕೂ ಬಲಹೀನರಾಗಿಲ್ಲ. ಆದರೆ ಇತ್ತೀಚಿನ ಕೆಲವು ವರ್ಷದಿಂದ ಉದಾಸೀನ ಮನೋಭಾವನೆಯಿಂದ ಕೆಲವು ತೊಡಕಾಗಿದೆ. ಆದರೆ ಇದೀಗ ಕೊಡವತನ ಚೇತರಿಕೆ ಕಾಣುತ್ತಿದೆ. ಜನಾಂಗಕ್ಕೆ ಪ್ರಧಾನವಾಗಿರುವದು ನಮ್ಮ ಸಂಸ್ಕøತಿ, ಆಚಾರ - ವಿಚಾರವಾಗಿದ್ದು, ಇದರಲ್ಲಿ ಅನುಕೂಲ ಸಿಂಧು ನಡೆ ಅನುಸರಿಸಬಾರದು. ಹಿರಿಯರು ಹುಟ್ಟು ಹಾಕಿರುವ ವಿಶಿಷ್ಟವಾದ ಶ್ರೀಮಂತ ಸಂಸ್ಕøತಿ, ಆಚಾರ - ವಿಚಾರವನ್ನು ಯಥಾವತ್ತಾಗಿ ಉಳಿಸಿ ಬೆಳೆಸಬೇಕು. ಇದರಲ್ಲಿ ಯಾವದೇ ತಿದ್ದುಪಡಿ ಯಾಗಬಾರದು ಈ ಜವಾಬ್ದಾರಿ ಜನಾಂಗದ ಪ್ರತಿಯೊಬ್ಬ ರಿಗೆ ಇರಬೇಕೆಂದು ಸಲಹೆಯಿತ್ತರು.

ಮಡಿಕೇರಿ ಕೊಡವ ಸಮಾಜದ ವತಿಯಿಂದ ಕೈಲ್ ಪೊಳ್ದ್ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಬೆಂಗಳೂರಿನ ಸೌತ್ ವೆಸ್ಟ್ ರೈಲ್ವೇಸ್‍ನಲ್ಲಿ ಸ್ಟ್ರೆಂತ್ ಅಂಡ್ ಕಂಡೀಷನಿಂಗ್ ಕೋಚ್ ಆಗಿರುವ ಕುಲ್ಲೇಟಿರ ಜೀತ್ ದೇವಯ್ಯ ಅವರು ದೈಹಿಕ ಸಾಮಥ್ರ್ಯ ಕಾಪಾಡಿಕೊಳ್ಳುವ ಕುರಿತು ಸಲಹೆಯಿತ್ತರು. ಪ್ರಸ್ತುತ ಯುವ ಜನಾಂಗ ತಮ್ಮ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ವಿಷಾದಿಸಿದ ಜೀತ್ ತಮ್ಮ ವೃತ್ತಿಗನುಸಾರ ಅಗತ್ಯ ನೆರವು ನೀಡಲು ಸಿದ್ಧವಿರುವದಾಗಿ ಹೇಳಿದರು.

ಸಭಾ ಕಾರ್ಯಕ್ರಮದಲ್ಲಿ ಸಮಾಜದ ಉಪಾಧ್ಯಕ್ಷ ಮಣವಟ್ಟೀರ ಚಿಣ್ಣಪ್ಪ , ಕಾರ್ಯದರ್ಶಿ ಅರೆಯಡ ರಮೇಶ್, ಜಂಟಿ ಕಾರ್ಯದರ್ಶಿ ಮಾದೇಟಿರ ಬೆಳ್ಯಪ್ಪ, ಕ್ರೀಡಾ ಸಮಿತಿ ಸಂಚಾಲಕ ನಂದೇಟಿರ ರಾಜಾ ಮಾದಪ್ಪ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಸಮಾಜದ ಹಿರಿಯರು ಪಾಲ್ಗೊಂಡಿದ್ದರು.

ಬೆಳಿಗ್ಗೆ ಆಯುಧ ಪೂಜೆ ಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ವಿವಿಧ ಕ್ರೀಡಾ ಪೈಪೋಟಿ, ಮನರಂಜನಾ ಸ್ಪರ್ಧೆಗಳು ಜರುಗಿತು. ವಿಶೇಷವಾಗಿ ಕಡಂಬಿಟ್ಟು - ಪಂದಿಕರಿ ತಿನ್ನುವ ಸ್ಪರ್ಧೆ ಗಮನ ಸೆಳೆಯಿತು. ಬೆಳಿಗ್ಗೆಯಿಂದ ಸಂಜೆತನಕವೂ ಜನಾಂಗ ಬಾಂಧವರು ವಿವಿಧ ಕಾರ್ಯಕ್ರಮಗಳ ಮೂಲಕ ಸಂಭ್ರಮಿಸಿದರು. ಸಮಾಜದ ನಿರ್ದೇಶಕ ಬೊಟ್ಟೋಳಂಡ ಕಾಶಿ ಅಚ್ಚಯ್ಯ ಪ್ರಾಥಿರ್ಸಿದರು. ಉಪಾಧ್ಯಕ್ಷ ಮಣವಟ್ಟಿರ ಚಿಣ್ಣಪ್ಪ ಸ್ವಾಗತಿಸಿ, ನಿರ್ದೇಶಕ ಬೊಳ್ಳಜೀರ ಅಯ್ಯಪ್ಪ ಅತಿಥಿ ಪರಿಚಯಿಸಿದರು. ಜಂಟಿ ಕಾರ್ಯದರ್ಶಿ ಮಾದೇಟಿರ ಬೆಳ್ಯಪ್ಪ ಕಾರ್ಯಕ್ರಮ ನಿರೂಪಿಸಿದರು.