ಚೆಟ್ಟಳ್ಳಿ, ಡಿ. 27: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯ ಸಮಿತಿ ವತಿಯಿಂದ ಕೊಡಗರಹಳ್ಳಿಯಲ್ಲಿ ಮಂದ್ ತೆರೆಯುವ ಮತ್ತು ಆಟ್ ಪಾಟ್ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಮಾತನಾಡಿ, ಸಂಸ್ಕೃತಿಯಲ್ಲಿ ಮಂದ್‍ನಲ್ಲಿ ಗಂಡಸರಿಗೆ ಅಧಿಕಾರ. ಆದರೆ ಹೆಂಗಸರಿಗೆ ಮುಂದ್ ಅಂದರೆ ಮನೆಯಲ್ಲಿ ಅಧಿಕಾರವಿರುತ್ತದೆ. ಊರು ಮಂದ್‍ನಲ್ಲಿ ಅವನು ದೊಡ್ಡವ ಇವನು ಸಣ್ಣವನು, ಆ ಜಾತಿ ಈ ಜಾತಿ ಎಂಬ ಬೇಧ ಭಾವವಿರುವದಿಲ್ಲ ಎಂದರು.

ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಮಾತನಾಡಿದರು. ನಾಗಶೆಟ್ಟಿರ ಸುಪ್ತ ಬೋಜಮ್ಮ ಪ್ರಾರ್ಥಿಸಿ, ಡಾ. ಅಕ್ಕಪಂಡ ತಮ್ಮಯ ಸ್ವಾಗತಿಸಿದರು. ಮುಂಡಚಾಡಿರ ರಿನ್ನಿ ಮತ್ತು ತಂಡದಿಂದ ಕೋಲಾಟ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮ, ಕೊಡಗರಳ್ಳಿ ತಂಡದಿಂದ ಉಮ್ಮತ್ತಾಟ್ ಮತ್ತು ಮುದ್ದಪ್ಪ ತಂಡದಿಂದ ಕತ್ತಿ ಆಟ್ ಕಾರ್ಯಕ್ರಮ ಮನಸೆಳೆಯಿತು.

ಕಾರ್ಯಕ್ರಮದಲ್ಲಿ ಅಕ್ಕಪಂಡ ಕಾವೇರಿಯಮ್ಮ, ಕೊಡವ ಪದ್ಧತಿ ಪರಂಪರೆ ಬಗ್ಗೆ ವಿಚಾರಮಂಡನೆ ಮಾಡಿದರೆ, ವೇದಿಕೆಯಲ್ಲಿ ದೇವಾಲಯದ ಅಧ್ಯಕ್ಷ ಕೊಕ್ಕಲೇರ ಪೂಣಚ್ಚ, ಜಗ್ಗರಂಡ ಕಾರಿಯಪ್ಪ, ಪತ್ರಕರ್ತರಾದ ಬಿ.ಸಿ. ದಿನೇಶ, ಪೋರಿಮಂಡ ದಿನಮಣಿ, ತಮ್ಮಯ, ಪೋರಿಮಂಡ ರವಿ ನಾಣಯ್ಯ, ಮಂಜಿರ ಸಾಬೂ ತಿಮ್ಮಯ, ಕುಶಾಲನಗರ ಕೊಡವ ಸಮಾಜ ಅಧ್ಯಕ್ಷ ಬೋಸ್ ಉಪಸ್ಥಿತರಿದ್ದರು. ಮಾದೇಟ್ಟಿರ ಬೆಳ್ಳಿಯಪ್ಪ ವಂದಿಸಿದರು.