ಮಡಿಕೇರಿ ಜು.5 : ಶಾಂತಿ ಪ್ರಧಾನವಾಗಿರುವ ಕೊಡಗು ಜಿಲ್ಲೆಯನ್ನು ಅಕ್ರಮವಾಗಿ ಪ್ರವೇಶಿಸಿರುವ ಬಾಂಗ್ಲಾ ದೇಶಿಗರನ್ನು ಜಿಲ್ಲಾಡಳಿತ ಪತ್ತೆಹಚ್ಚಿ ತಕ್ಷಣ ಹೊರಗಟ್ಟಬೇಕೆಂದು ಕೊಡಗು ಸುರಕ್ಷಾ ಸಮಿತಿ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಅಕ್ರಮ ವಲಸಿಗರಿಂದಾಗಿ ಜಿಲ್ಲೆಗೆ ಅಪಾಯ ಕಾದಿದೆ ಎಂದು ಆತಂಕ ವ್ಯಕ್ತಪಡಿಸಿದರು. ತಕ್ಷಣ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸೂಕ್ತ ತನಿಖೆಯ ಮೂಲಕ ಬಾಂಗ್ಲಾ ದೇಶಿಗರನ್ನು ಪತ್ತೆಹಚ್ಚಿ ಜಿಲ್ಲೆಯಿಂದ ಹೊರ ಹಾಕಬೇಕೆಂದು ಒತ್ತಾಯಿಸಿದರು.
ಕೊಡಗು ಜಿಲ್ಲೆಯನ್ನು ಸುಮಾರು 50 ಸಾವಿರ ಬಾಂಗ್ಲಾ ದೇಶಿಗರು ಅಕ್ರಮವಾಗಿ ಪ್ರವೇಶಿಸಿರುವ ಬಗ್ಗೆ ಮಾಹಿತಿ ದೊರಕಿದ್ದು, ಇವರಲ್ಲಿ ಭಯೋತ್ಪಾದನಾ ತರಬೇತಿ ಪಡೆದವರೂ ಇದ್ದಾರೆ ಎನ್ನುವ ಆತಂಕಕಾರಿ ವಿಚಾರ ತಿಳಿದು ಬಂದಿದೆ ಎಂದು ಆರೋಪಿಸಿದರು.
ತೋಟ, ವಾಣಿಜ್ಯೋದ್ಯಮಗಳು ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಕಾರ್ಮಿಕರಂತೆ ದುಡಿಯುತ್ತಿರುವ ಬಾಂಗ್ಲಾ ದೇಶಿಗರು ಅಕ್ರಮವಾಗಿ ಗುರುತಿನ ಚೀಟಿಗಳನ್ನು ಪಡೆದು ಕೊಂಡಿದ್ದಾರೆ. ಅಕ್ರಮ ವಲಸಿಗರ ಬಗ್ಗೆ ಮಾಹಿತಿ ದೊರೆತಿದ್ದರೂ ಜಿಲ್ಲಾಡಳಿತ ಯಾವದೇ ಕ್ರಮ ಕೈಗೊಳ್ಳದೆ ಇರುವದರಿಂದ ಕೊಡಗು ಸುರಕ್ಷಾ ಸಮಿತಿ ಮೂಲಕ ಜಿಲ್ಲೆಯಲ್ಲಿ ಜನ ಜಾಗೃತಿ ಮೂಡಿಸಲಾಗುವದೆಂದು ಎಸ್.ಜಿ. ಮೇದಪ್ಪ ತಿಳಿಸಿದರು.
ಪ್ರತಿ ಗ್ರಾಮ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಅಕ್ರಮ ವಲಸಿಗರ ಬಗ್ಗೆ ನಿಗಾ ಇಡುವಂತೆ ತಿಳಿಸಲಾಗುವದು. ಅಲ್ಲದೆ, ಬೆಳೆಗಾರರ ಸಭೆ ನಡೆಸಿ ಬಾಂಗ್ಲಾ ದೇಶಿಗರನ್ನು ಕಾರ್ಮಿಕರನ್ನಾಗಿ ದುಡಿಸಿಕೊಳ್ಳದಂತೆ ಮನವಿ ಮಾಡಿಕೊಳ್ಳಲಾಗುವದು. ಅಕ್ರಮವಾಗಿ ಪ್ರವೇಶಿಸಿರುವವರ ಬಗ್ಗೆ ಪೆÇಲೀಸರಿಗೆ ಮಾಹಿತಿ ನೀಡುವಂತೆ ಮನವೊಲಿಸ ಲಾಗುವದೆಂದು ತಿಳಿಸಿದರು. ಜಿಲ್ಲೆಯಲ್ಲಿ ನೆಲೆ ನಿಂತಿರುವ ಬಾಂಗ್ಲಾ ದೇಶಿಗರು ತಾವು ಅಸ್ಸಾಮಿನವರೆಂದು ಪ್ರತಿಬಿಂಬಿಸಿಕೊಳ್ಳುತ್ತಾ ನಕಲಿ ಗುರುತಿನ ಚೀಟಿ ಪ್ರದರ್ಶಿಸುತ್ತಿದ್ದಾರೆ. ಈ ಪ್ರಕರಣವನ್ನು ಪೆÀÇಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಮುಂದೊಂದು ದಿನ ಜಿಲ್ಲೆಗೆ ಅಪಾಯ ಕಾದಿದೆಯೆಂದು ಮೇದಪ್ಪ ಅಭಿಪ್ರಾಯ ಪಟ್ಟರು.
ಬಿಜೆಪಿ ಪ್ರಮುಖರಾದ ಕೋಡಿ ಪೆÇನ್ನಪ್ಪ ಮಾತನಾಡಿ, ನಾಪೆÇೀಕ್ಲು ಹಾಗೂ ಕೊಟ್ಟಮುಡಿ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾಂಗ್ಲಾ ದೇಶಿಗರಿದ್ದು, ಸ್ಥಳೀಯರನ್ನು ವಿವಾಹವಾಗುವ ಮೂಲಕ ತಮ್ಮ ಅಸ್ತಿತ್ವವನ್ನು ಸಾಕ್ಷೀಕರಿಸುತ್ತಿದ್ದಾರೆ ಎಂದು ಆರೋಪಿಸಿದರು. ರಾಜ ಕಾರಣಿಗಳು ಮತಬ್ಯಾಂಕ್ ರಾಜ ಕಾರಣಕ್ಕಾಗಿ ಅಕ್ರಮ ವಲಸಿಗರಿಗೂ ಗುರುತಿನ ಚೀಟಿ ನೀಡಿದ್ದು, ಇದರ ಹಿಂದೆ ಕುಖ್ಯಾತ ಜಾಲವೊಂದು ಕಾರ್ಯ ನಿರ್ವಹಿಸುತ್ತಿದೆ. ಇದನ್ನು ಪತ್ತೆಹಚ್ಚಲು ತನಿಖಾಧಿಕಾರಿಗಳನ್ನು ನಿಯೋಜಿಸಿ ಸಮಗ್ರ ತನಿಖೆÉ ನಡೆಸಬೇಕೆಂದು ಕೋಡಿ ಪೆÇನ್ನಪ್ಪ ಒತ್ತಾಯಿಸಿದರು.
ತೋಟಗಳಲ್ಲಿ ಮಾತ್ರವಲ್ಲದೆ ಕಟ್ಟಡಗಳ ನಿರ್ಮಾಣದ ಪ್ರದೇಶಗಳಲ್ಲೂ ಕೂಲಿ ಕಾರ್ಮಿಕರಾಗಿ ವಲಸಿಗರು ದುಡಿಯುತ್ತಿದ್ದಾರೆ. ಸ್ಥಳೀಯರು ವೈಯಕ್ತಿಕ ಲಾಭಕ್ಕಾಗಿ ಬಾಂಗ್ಲಾ ದೇಶಿಗರನ್ನು ಕಾರ್ಮಿಕರ ನ್ನಾಗಿ ದುಡಿಸಿಕೊಳ್ಳುತ್ತಿದ್ದು, ಇದು ಜಿಲ್ಲೆಗೆ ಮಾರಕವಾಗಿದೆ ಎಂದು ಆರೋಪಿಸಿದರು. ಜಿಲ್ಲೆಯಲ್ಲಿರುವ ಎಲ್ಲಾ ವಲಸೆ ಕಾರ್ಮಿಕರ ಮಾಹಿತಿ ಯನ್ನು ಸಂಗ್ರಹಿಸುವ ಕಾರ್ಯಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೆÀÇಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋಡಿ ಪೆÇನ್ನಪ್ಪ ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಮಾಚಿಮಾಡ ರವೀಂದ್ರ ಮಾತನಾಡಿ, ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳುವದು ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲವೆಂದರು. ಜಿಲ್ಲೆಯ ಜನ ಹಾಗೂ ತೋಟ ಮಾಲೀಕರು ಕೂಡ ಜಾಗೃತರಾಗಿ ಅಕ್ರಮ ವಲಸಿಗರ ಬಗ್ಗೆ ಪೆÇಲೀಸರಿಗೆ ಮಾಹಿತಿ ನೀಡಬೇಕು. ಪ್ರತಿ ಗ್ರಾಮ ಮಟ್ಟದಲ್ಲಿ ಸುರಕ್ಷಾ ಸಮಿತಿಯ ಶಾಖೆÉಯನ್ನು ರಚಿಸಿ ಜನ ಜಾಗೃತಿ ಮೂಡಿಸಲಾಗುವದು. ಆ ಮೂಲಕ ಜನರಿಂದಲೇ ಜನರ ರಕ್ಷಣೆಗೆ ಮುಂದಾಗುವದಾಗಿ ರವೀಂದ್ರ ತಿಳಿಸಿದರು. ಕಾನೂರು ಗ್ರಾಮದಲ್ಲಿ ಸುಮಾರು 200 ಬಾಂಗ್ಲಾ ದೇಶಿಗರು ನೆಲೆಸಿದ್ದು, ಈ ಬಗ್ಗೆ ಪೆÇಲೀಸರಿಗೆ ಮಾಹಿತಿ ನೀಡಿದ್ದರೂ ಯಾವದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ತಾಕೇರಿ ಪೊನ್ನಪ್ಪ, ಬೆಟ್ಟದಳ್ಳಿ ಗ್ರಾ.ಪಂ ಹಾಗೂ ಮಾಜಿ ಸದಸ್ಯ ಪ್ರದಿ ಉಪಸ್ಥಿತರಿದ್ದರು.