ಗೋಣಿಕೊಪ್ಪಲು, ಡಿ. 25 : ಕೊಡಗಿನಲ್ಲಿ ಬಾಂಗ್ಲಾದೇಶಿಗರ ಸಂಖ್ಯೆ ಹೆಚ್ಚಾಗುತ್ತಿರುವದರಿಂದ ಹಿಂದೂಗಳು ಜಿಲ್ಲೆಯಿಂದಲೇ ಹೊರ ಹೋಗುವ ದಿನ ಬರುವ ಆತಂಕವಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆತಂಕ ವ್ಯಕ್ತಪಡಿಸಿದರು.ಇತ್ತೀಚಿನ ದಿನಗಳಲ್ಲಿ ಬಾಂಗ್ಲಾ ಕಾರ್ಮಿಕರು ಜಿಲ್ಲೆಯಲ್ಲಿ ಕೆಲಸದ ನಿಮಿತ್ತ ಆವರಿಸಿಕೊಂಡಿದ್ದಾರೆ. ಇದನ್ನು ಹಿಂದೂ ಬಾಂಧವರು ಲಘುವಾಗಿ ಪರಿಗಣಿಸಿದರೆ ಹಿಂದೂಗಳಿಗೆ ಗಂಡಾಂತರವಾಗುವ ಸಾಧ್ಯತೆ ಹೆಚ್ಚಿದೆ. ಅವರನ್ನು ನಿಯಂತ್ರಿಸುವ ಕುರಿತು ಹಿಂದೂಗಳು ಗಂಭೀರ ಚಿಂತನೆ ನಡೆಸಬೇಕಿದೆ ಎಂದು ಸುದ್ದಿಗೋಷ್ಠಿ ಯಲ್ಲಿ ಸಲಹೆ ನೀಡಿದರು.

ರಾಜ್ಯದ ಅಲ್ಪಸಂಖ್ಯಾತ ಆಯೋಗಕ್ಕೆ 13 ಬಾರಿ ಒಂದೇ ಕೋಮಿನವರನ್ನು ಅಧ್ಯಕ್ಷರನ್ನಾಗಿ ಮಾಡಿರುವದು ಖಂಡನೀಯ. ಅಲ್ಪಸಂಖ್ಯಾತ ಆಯೋಗದಲ್ಲಿ ಮುಸ್ಲೀಂ, ಕ್ರೈಸ್ತ, ಬೌದ್ಧ, ಪಾರ್ಸಿ ಹಾಗೂ ಸಿಖ್ ಪಂಗಡಗಳು ಸೇರಲಿವೆ. ಆದರೆ ರಾಜ್ಯ ಸರ್ಕಾರ ಒಂದು ಕೋಮಿನವರನ್ನು ಓಲೈಸಿ ಮತಕ್ಕಾಗಿ ಮುಸ್ಲಿಂ ವರ್ಗದ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಉರ್ದು ಶಾಲೆಗಳಿಗೆ ಶುಕ್ರವಾರ ಅರ್ಧ ದಿನ ರಜೆ ನೀಡುವದರ ಮೂಲಕ ಪ್ರಾರ್ಥನೆಗೆ

(ಮೊದಲ ಪುಟದಿಂದ) ಅವಕಾಶ ಮಾಡಿಕೊಟ್ಟಿರುವ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗುವದು. ಇದು ಎಳೆಯ ವಯಸ್ಸಿನ ಮಕ್ಕಳಲ್ಲಿ ತಾರತಮ್ಯ ನೀತಿ ಮಾಡಿದಂತಾಗಿದೆ. ಇಂತಹ ಆದೇಶವನ್ನು ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಕಾಶ್ಮೀರದ ಹಿಂದೂ ಪಂಡಿತರ ಒಗ್ಗಟ್ಟಿಗಾಗಿ ಜನವರಿ 19 ರಂದು ಚಲೋ ಕಾಶ್ಮೀರ ಕಾರ್ಯಕ್ರಮದ ಪಂಡಿತರಿಗೆ ಆತ್ಮಬಲ ತುಂಬುವ ಪ್ರಯತ್ನ ಮಾಡಲಾಗು ವದು ಎಂದರು. ಗೋಷ್ಠಿಯಲ್ಲಿ ಶ್ರೀರಾಮಸೇನೆ ಜಿಲ್ಲಾ ಸಂಚಾಲಕ ಅಶೋಕ್, ರಾಜ್ಯ ಕಾರ್ಯದರ್ಶಿ ಅನಿಲ್, ಕಾರ್ಯಕರ್ತ ಗಣೇಶ್ ಹಾಜರಿದ್ದರು.