ಮಡಿಕೇರಿ, ಸೆ. 23: ಹೊದ್ದೂರು ಕಬಡಕೇರಿ ಯುವಕ ಸಂಘ, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ತಾಲೂಕು ಯುವ ಒಕ್ಕೂಟ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ 45ನೇ ವಾರ್ಷಿಕ ಕೈಲು ಮುಹೂರ್ತ ಹಬ್ಬದ ಆಟೋಟಗಳ ಸ್ಪರ್ಧೆ ಸಂಘದ ಆಟದ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಎಂಬಿ. ಜೋಯಪ್ಪ ನೆರವೇರಿಸಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಿ.ಎಸ್. ಬಾಲಕೃಷ್ಣ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಪಿ. ಮುರುಳಿ ಕರುಂಬಮಯ್ಯ ಮತ್ತು ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಕುಮಾರ್ ಇವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ನಾಪಂಡ ಮುತ್ತಪ್ಪ, ಸಿ.ಟಿ. ಕಾರ್ಯಪ್ಪ, ಟಿ.ಆರ್. ಮಣಿ, ಕೆ. ವಿನೋದ್, ಸೀದಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಆಟೋಟಗಳ ವೀಕ್ಷಕ ವಿವರಣೆ ಮತ್ತು ಕಾರ್ಯಕ್ರಮದ ನಿರೂಪಣೆಯನ್ನು ಕೂಡಂಡ ಸಾಬ ಸುಬ್ರಮಣಿ ನಿರ್ವಹಿಸಿದರೆ, ತೀರ್ಪುಗಾರರಾಗಿ ಮೂಡೆರ ಡಿ. ಕಾಳಯ್ಯ, ಎಂ.ಕೆ. ಕಾವೇರಪ್ಪ, ಕೆ.ಎ. ಅಶ್ರಫ್, ಸಿ.ಎ. ದಿವಿ, ಬಿ. ಉಮೇಶ್, ಎಂ.ಬಿ. ಹಮೀದ್, ಎಂ.ಎಂ. ಸುನಿಲ್, ಎಂ.ಸಿ. ಗಣೇಶ್, ಕೆ.ಎ. ಬಷೀರ್ ಕಾರ್ಯನಿರ್ವಹಿಸಿದರು. ಅಲ್ಲದೆ ಸಂಘದ ಪದಾಧಿಕಾರಿಗಳಾದ ಟಿ.ಎಲ್. ಮೋನಿಶ್, ಎಂ.ಬಿ. ಪೆಮ್ಮಯ್ಯ, ಹೆಚ್.ಆರ್. ಸತೀಶ್, ಎಂ.ಆರ್. ಶರತ್ ಇದ್ದರು.