ಮಡಿಕೇರಿ, ನ. 23: ಕೊಡವ ಅಕಾಡೆಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಕಾಸರಗೋಡು ಘಟಕ ಕಾಸರಗೋಡು ಮಂಜೇಶ್ವರದಲ್ಲಿ ಏರ್ಪಡಿಸಿದ್ದ ಗಡಿನಾಡ ಜಾನಪದ ಮತ್ತು ಕೊಡವ ನೃತ್ಯಗಳ ಪ್ರದರ್ಶನ ಸಭಿಕರನ್ನು ಆಕರ್ಷಿಸಿತು.
ಶ್ರೀ ಕೃಷ್ಣ ಶಿವಕೃಪಾ ಅವರು ಕಾರ್ಯಕ್ರಮ ಉದ್ಘಾಟಿಸಿ ಇಡೀ ವಿಶ್ವವೇ ಒಂದು ದೇವರ ಕೋಣೆಯಂತಿದ್ದು, ಅದನ್ನು ಉಳಿಸಿ ಬೆಳೆಸುವದು ಎಲ್ಲರ ಕರ್ತವ್ಯ ಎಂದರು. ಕಲಾವಿದ ರಾಮಕೃಷ್ಣ ಅವರು ಮಾತನಾಡಿ, ಕಲೆಯನ್ನು ಉಳಿಸಿ-ಬೆಳೆಸಬೇಕೆಂದರು.
ಮುಖ್ಯ ಅತಿಥಿ ಜಾನಪದ ಪರಿಷತ್ ಕೊಡಗು ಘಟಕಾಧ್ಯಕ್ಷ ಬಿ.ಜಿ. ಅನಂತಶಯನ ಅವರು ಮಾತನಾಡಿ, ಮಾನವೀಯ ಸಂವೇದನೆ ಅರಿಯಲು ಜಾನಪದ ಕಲೆಯನ್ನು ಅರ್ಥೈಸಿಕೊಳ್ಳಬೇಕೆಂದರು. ಪ್ರೊ. ಶ್ರೀನಾಥ್ ಅವರು ಮಾತನಾಡಿ, ಆತಿಥ್ಯಕ್ಕೆ ಹೆಸರಾದ ತುಳುನಾಡಿನಲ್ಲಿ ಕಲೆಯನ್ನು ಆರಾಧಿಸಲಾಗುತ್ತದೆ ಎಂದರು.
ವೇದಿಕೆಯಲ್ಲಿ ಜಾನಪದ ಪರಿಷತ್ ಕಾಸರಗೋಡು ಘಟಕಾಧ್ಯಕ್ಷ ಕೇಶವ ಪ್ರಸಾದ್ ನಾಣಿತ್ತಿಲು, ಕೊಡವ ಅಕಾಡೆಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ದಿ. ರಮಾನಾಥ ಹೊನ್ನಾಳಿ, ಸೈಫುಲ್ಲಾ ತಂಗಳ್, ಗಣೇಶ್ ಪ್ರಸಾದ್ ಉಪಸ್ಥಿತರಿದ್ದರು.