*ಗೋಣಿಕೊಪ್ಪಲು, ಡಿ. 23: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ತೆರಾಲು, ನಿಟ್ಟ್‍ಕುಂದ್ ಲಿಂಕ್ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾಗುಂಡಿ ಸೇತುವೆಯನ್ನು ಶಾಸಕ ಕೆ.ಜಿ. ಬೋಪಯ್ಯ ಲೋಕಾರ್ಪಣೆ ಗೊಳಿಸಿದರು.

ನಂತರ ಮಾತನಾಡಿದ ಶಾಸಕರು, ನಬಾರ್ಡ್ ಯೋಜನೆಯಡಿ ಸುಮಾರು 80 ಲಕ್ಷ ವೆಚ್ಚದಲ್ಲಿ ಸೇತುವೆ ಕಾಮಗಾರಿ ಕೈಗೊಳ್ಳಲಾಗಿದ್ದು, 2015ರಲ್ಲಿ ಪ್ರಾರಂಭಗೊಂಡ ಸೇತುವೆ ಕಾಮಗಾರಿ 2016ರಲ್ಲಿ ಲೋಕಾರ್ಪಣೆಗೊಂಡಿದೆ. ಯಾವದೇ ಸೇತುವೆ ಕಾಮಗಾರಿ ಕಡಿಮೆ ಸಮಯದಲ್ಲಿ ಪೂರ್ಣ ಕಾಮಗಾರಿ ನಡೆದಿಲ್ಲ. ಹಲವು ಅಡಚಣೆಗಳ ನಡುವೆಯೂ ಸೇತುವೆ ಕಾಮಗಾರಿ ಪೂರ್ಣಗೊಂಡಿದೆ.

ಈ ಸಂದರ್ಭ ಬಿಟ್ಟಂಗಾಲ ಕ್ಷೇತ್ರ ಜಿ.ಪಂ. ಸದಸ್ಯೆ ಅಪ್ಪಡೇಂರಂಡ ಭವ್ಯ, ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ಬುಟ್ಟಿಯಂಡ ನಾಣಯ್ಯ, ಸದಸ್ಯರುಗಳಾದ ಕಾಯಪಂಡ ಸುನಿಲ್, ಗಿರೀಶ್ ಪೆಮ್ಮಯ್ಯ, ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ರಾಯ್ ಚಿನ್ನಪ್ಪ, ಕಾರ್ಯದರ್ಶಿ ಗಿರೀಶ್, ಮಾಜಿ ತಾ.ಪಂ. ಸದಸ್ಯ ರಾಜು ಗುತ್ತಿಗೆದಾರ ಚೇತನ್, ತಾಲೂಕು ಫೆಡರೇಶನ್ ಉಪಾಧ್ಯಕ್ಷ ಮಲ್ಲಂಡ ಮದು ದೇವಯ್ಯ, ಸೇರಿದಂತೆ ಗ್ರಾಮಸ್ಥರಾದ ಬೋಪಣ್ಣ, ಹರೀಶ್, ಪೂಣಚ್ಚ, ಅರುಣ್, ಸುಂಗದ್ ಹಾಜರಿದ್ದರು.