ಕೂಡಿಗೆ, ಜು. 9: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿರುವ ಹಾರಂಗಿ ಅಚ್ಚುಕಟ್ಟು ಪ್ರದೇಶಗಳಾದ ಮದಲಾಪುರ, ಕೂಡಿಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ ವ್ಯಾಪ್ತಿಗಳ ರೈತರು ಈಗಾಗಲೇ ತಮ್ಮ ಜಮೀನುಗಳಲ್ಲಿ ಭತ್ತದ ಸಸಿ ಮಡಿಗಳ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಅಲ್ಲದೆ, ಈ ವ್ಯಾಪ್ತಿಯ ಮಣ್ಣಿನ ಗುಣಕ್ಕೆ ತಕ್ಕಂತೆ ಹೈಬ್ರಿಡ್ ಭತ್ತದ ತಳಿಗಳಾದ ಗಂಗಾ-ಕಾವೇರಿ, ಐಆರ್ 64, ತನು, ಬಾಂಗ್ಲಾರೈಸ್, ಏಕದಳ ಬಿತ್ತನೆ ಬೀಜದ ಬಿತ್ತನೆ ಕಾರ್ಯದಲ್ಲಿ ರೈತರು ಕಾರ್ಯೋನ್ಮುಖರಾಗಿದ್ದಾರೆ.