ನಾಪೆÇೀಕ್ಲು, ಜ. 13: ವಿದ್ಯಾರ್ಥಿಗಳು ಪೆÇೀಷಕರು, ಶಿಕ್ಷಕರು ಮತ್ತು ಸಮಾಜದ ಮೇಲೆ ಕೃತಜ್ಞತಾ ಭಾವವನ್ನು ಹೊಂದಿರಬೇಕು. ಆಗ ಮಾತ್ರ ಮಾನಸಿಕ ನೆಮ್ಮದಿ ಪಡೆಯಲು ಸಾಧ್ಯ ಎಂದು ಶಕ್ತಿ ದಿನಪತ್ರಿಕೆಯ ಪ್ರಧಾನ ವ್ಯವಸ್ಥಾಪಕ ಜಿ.ಚಿದ್ವಿಲಾಸ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ನಾಪೆÇೀಕ್ಲು ಕೊಡವ ಸಮಾಜದಲ್ಲಿ ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಿನ, ಕ್ರೀಡಾ ವಾರ್ಷಿಕೋತ್ಸವ ಮತ್ತು ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣಾಕಾರರಾಗಿ ಅವರು ಮಾತನಾಡಿದರು. ಕೊಡಗಿನಲ್ಲಿಯೂ ವೃದ್ಧ ಪೆÇೀಷಕರನ್ನು ವೃದ್ಧಾಶ್ರಮಗಳಿಗೆ ಸೇರಿಸುತ್ತಿರುವ ಬಗ್ಗೆ ವಿಷಾಧ ವ್ಯಕ್ತಪಡಿಸಿದ ಅವರು, ಪೆÇೀಷಕರ ಪ್ರೀತಿಯ ಋಣ ತೀರಿಸುವ ಕನಿಷ್ಟ ಜ್ಞಾನ ವಿದ್ಯಾರ್ಥಿಗಳಿರಬೇಕು. ಹಾಗೆಯೇ ಭೂಮಿಯ ಋಣ ತೀರಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದು ಸಲಹೆ ನೀಡಿದರು.

ಕೊಡಗಿನಲ್ಲಿ ಏನೂ ಇಲ್ಲ ಎಂಬ ತಾತ್ಸಾರ ಭಾವನೆ ಹಲವರಲ್ಲಿದೆ. ಮೊದಲು ನಮ್ಮ ನೆಲ, ಜಲ, ನೀರು, ಗಾಳಿ, ಪ್ರಾಣಿ, ಪಕ್ಷಿಗಳನ್ನು ನಾವು ಪ್ರೀತಿಸಬೇಕು. ಆಗ ನಮ್ಮ ನೆಲದ ಬಗೆಗಿನ ಕೀಳರಿಮೆ ತೊಡೆದು ಹಾಕಲು ಸಾಧ್ಯ. ಸಮಯ ಪ್ರಜ್ಞೆ ಮನುಷ್ಯನಿಗೆ ಅತ್ಯಮೂಲ್ಯವಾದುದು ಇದರಿಂದ ಮಾತ್ರ ನೆಮ್ಮದಿಯ ಬದುಕು, ಶಾಂತಿಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಕಿವಿ ಮಾತು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಮಾತನಾಡಿ ವಿದ್ಯಾ ಸಂಸ್ಥೆಗೆ ಸ್ಥಳ ದಾನ ಮಾಡಿರುವ ದಾನಿಗಳ ಕುಟುಂಬವನ್ನು ಗೌರವಿಸುವ ಕಾರ್ಯವಾಗಬೇಕು. ಎಲ್ಲರೂ ಭವಿಷ್ಯದತ್ತ ಚಿಂತನೆ ಮಾಡಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಕಠಿಣ ಪರಿಶ್ರಮ ಅಗತ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಬೆಂಗಳೂರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ .