ಕೂಡಿಗೆ, ಡಿ. 28: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೋಮವಾರಪೇಟೆ ಇವರ ಮಾರ್ಗದರ್ಶನದಲ್ಲಿ ಕೂಡಿಗೆ ವಲಯದ ಸ್ಥಳೀಯ ಸಂಘ -ಸಂಸ್ಥೆಗಳ ಸಹಕಾರದೊಂದಿಗೆ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಅವರ ಮಾರ್ಗದರ್ಶನ ಗಳೊಂದಿಗೆ ಕೃಷಿ ವಿಚಾರ ಸಂಕೀರ್ಣ ಕೂಡ್ಲೂರಿನ ಕೆ.ಎಸ್. ರಾಜಾಚಾರ್ ಅವರ ಕೃಷಿ ಭೂಮಿಯಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆ ಯನ್ನು ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಟಿ ಅರುಣ್‍ಕುಮಾರ್ ನೆರವೇರಿಸಿ ನಂತರ ಮಾತನಾಡುತ್ತಾ, ಗ್ರಾಮಾಂತರ ಪ್ರದೇಶದ ರೈತರು ಸ್ವಾವಲಂಬಿ ಬದುಕು ಸಾಗಿಸಲು ಹೊಸ ರೀತಿಯ ಕೃಷಿಯಲ್ಲಿ ತೊಡಗುವದು ಮುಖ್ಯ ಎಂದರು. ಮುಖ್ಯ ಅತಿಥಿ ಗಳಾಗಿ ಆಗಮಿಸಿದ ಕೂಡು ಮಂಗಳೂರಿನ ರಾಷ್ಟ್ರಪತಿ ಪದಕ ವಿಜೇತ, ನಿವೃತ್ತ ಪೊಲೀಸ್ ಅಧಿಕಾರಿ ಕೆ.ಸಿ. ಪರಶಿವ ಮಾತನಾಡಿ, ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಉನ್ನತ್ತೀಕರಣ ಕಾಣಲು ತಮ್ಮ ಜಮೀನುಗಳ ಅನುಗುಣದ ಬಗ್ಗೆ ಅರಿತು ಅದರನ್ವಯ ಕೃಷಿಯಲ್ಲಿ ತೊಡಗುವದು ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ನಾಗ ರಾಜು ಪ್ರಾಸ್ತಾವಿಕ ಮಾತನಾಡಿದರು. ವಿಚಾರಗೋಷ್ಠಿಯಲ್ಲಿ ಮಲ್ಲೇನಹಳ್ಳಿ ಗ್ರಾಮದ ಪ್ರಗತಿಪರ ರೈತ ಓ.ಟಿ. ಬೋಪಯ್ಯ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಚೆಟ್ಟಳ್ಳಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ. ವೆಂಕಟರಮಣಪ್ಪ, ಮತ್ತು ಡಾ. ಮುರುಳೀಧÀರ್ ಹಾಗೂ ಕೂಡಿಗೆ ಕಾರ್ಪೋರೇಶನ್ ಬ್ಯಾಂಕ್ ಸ್ವ- ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ನಾಗೇಂದ್ರ ಉಪಸ್ಥಿತರಿದ್ದರು. ಗುಮ್ಮನಕೊಲ್ಲಿಯ ಪ್ರಗತಿಪರ ಕೃಷಿಕ ಟಿ.ಕೆ ಕುಮಾರ್ ಅವರು ಕೃಷಿ ಅನುಭವವನ್ನು ಹಂಚಿಕೊಂಡರು.

ಅಲ್ಪಾವಧಿ ಬೆಳೆಗಳು, ತರಕಾರಿ ಕೃಷಿಯ ಸಮಗ್ರ ನಿರ್ವಹಣೆ ಮತ್ತು ಸ್ವ-ಉದ್ಯೋಗದಿಂದ ಸ್ವಾವಲಂಬನೆ ಸಾಧಿಸುವದು ಕಾರ್ಯಕ್ರಮದ ಮುಖ್ಯ ವಿಷಯವಾಗಿತ್ತು. ವಿಚಾರ ಸಂಕೀರ್ಣದ ವೇದಿಕೆಯ ಅಧ್ಯಕ್ಷತೆ ಯನ್ನು ಕೂಡ್ಲೂರಿನ ಹಿರಿಯ ಕೃಷಿಕ ಕೆ.ಎಸ್. ರಾಜಾಚಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಗತಿ ಬಂಧು ಸ್ವ- ಸಹಾಯ ಸಂಘಗಳ ಒಕ್ಕೂಟದ ಕೂಡಿಗೆ ವಲಯ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಮಹಿಳೆಯರು ಭಾಗವಹಿಸಿದ್ದರು. ಮೇಲ್ವಿಚಾರಕಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿ, ಸೇವಾ ಪ್ರತಿನಿಧಿ ಸುವರ್ಣ ಸ್ವಾಗತಿಸಿ, ನಿರ್ಮಲ ವಂದಿಸಿದರು.