ಮಡಿಕೇರಿ, ಆ. 15: ಗುಡ್ಡೆಹೊಸೂರು ಸಮೀಪ ಆಟೋ ಚಾಲಕನೋರ್ವನ ಹತ್ಯೆ ನಡೆದ ಬೆನ್ನಲ್ಲೆ ಸಂಜೆ ವೇಳೆ ಕುಶಾಲನಗರ ಕನ್ನಿಕಾಪರಮೇಶ್ವರಿ ದೇವಾಲಯ ಎದುರು ವ್ಯಕ್ತಿಯೋರ್ವ ಚಾಕು ಇರಿತಕ್ಕೊಳಗಾಗಿದ್ದಾನೆ.ಮೂಲತಃ ಉತ್ತರಪ್ರದೇಶ, ಮುರುಂದಾಬಾದ್‍ನ ನಿವಾಸಿ ಯಾಗಿದ್ದು, ವಸತಿ ಶಾಲೆಗಳಿಗೆ ದೇಣಿಗೆ ಸಂಗ್ರಹಿಸಲೆಂದು ಕುಶಾಲನಗರಕ್ಕೆ ಬಂದಿದ್ದ ಅಬ್ದುಲ್ ಖುದ್ದೂಸ್ (40) ಎಂಬಾತನಿಗೆ ಕುಶಾಲನಗರದ ಆಟೋ ಚಾಲಕ ನಾರಾಯಣ ಎಂಬಾತ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಅಬ್ದುಲ್ ಖುದ್ದೂಸ್‍ಗೆ ಕುಶಾಲನಗರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸಲಾಗಿದೆ. ಆರೋಪಿ ನಾರಾಯಣನನ್ನು ಪೊಲೀಸರು ಬಂಧಿಸಿದ್ದು, ಘಟನೆಗೆ ಕಾರಣ ತಿಳಿದುಬಂದಿಲ್ಲ.

ಈ ನಡುವೆ ಮಾಧ್ಯಮದವರಿಗೆ ಸ್ಥಳದಲ್ಲಿ ವರದಿಯ ಚಿತ್ರೀಕರಣಕ್ಕೆ ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಮಾಧ್ಯಮದವರು ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ ಘಟನೆಯು ನಡೆಯಿತು.

ಹೆಚ್ಚುವರಿ ಭದ್ರತೆ

ಕುಶಾಲನಗರ ವ್ಯಾಪ್ತಿಯಲ್ಲಿ ಸಂಜೆಯ ಬಳಿಕ ಪೊಲೀಸ್ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ದೇವಾಲಯ, ಪ್ರಾರ್ಥನಾ ಮಂದಿ ರಗಳೂ ಸೇರಿದಂತೆ ನಗರ ವ್ಯಾಪ್ತಿಯಲ್ಲಿ ಪೊಲೀಸ್ ಸರ್ಪಗಾವಲನ್ನು ನಿಯೋಜಿಸಲಾಗಿದೆ. -ಕೆ.ಕೆ.ಎನ್.