ಮಡಿಕೇರಿ, ಜೂ. 17: ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕುಂಜಿಲ, ಯವಕಪಾಡಿ, ಮರಂದೋಡ ಮತ್ತು ನಾಲಡಿ ಗ್ರಾಮಗಳ 2016-17ನೇ ಸಾಲಿಗೆ ನಮ್ಮ ಗ್ರಾಮ ನಮ್ಮ ಯೋಜನೆಯಡಿ ಐದು ವರ್ಷಗಳ ಅಭಿವೃದ್ಧಿ ಮುನ್ನೋಟ ತಯಾರಿಸುವ ಸಲುವಾಗಿ ವಾರ್ಡ್ ಸಭೆಗಳನ್ನು ಆಯಾ ವಾರ್ಡಿನ ಸದಸ್ಯರ ಅಧ್ಯಕ್ಷತೆಯಲ್ಲಿ ನಡೆಸುವಂತೆ ನಿಶ್ಚಯಿಸಲಾಗಿದೆ.

ಆಯಾ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ತಮ್ಮ ಗ್ರಾಮಗಳ ವಾರ್ಡ್ ಸಭೆಗೆ ಆಗಮಿಸಿ ಸಭೆಯನ್ನು ಯಶಸ್ವಿಯಾಗಿ ನಡೆಸಲು ಸಹಕರಿಸುವಂತೆ ಕೋರಲಾಗಿದೆ.

ತಾ. 20ರಂದು ಕಕ್ಕಬೆ ವಿ.ಎಸ್.ಎಸ್.ಎನ್. ಸಭಾಂಗಣದಲ್ಲಿ ಕುಂಜಿಲ -ಎ ಗ್ರಾಮದ ವಾರ್ಡ್‍ಸಭೆ ಪೂರ್ವಾಹ್ನ 11 ಗಂಟೆಗೆ ಬಾಚಮಂಡ ಭರತ್ ಪೂವಣ್ಣ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ತಾ. 23ರಂದು ಕಕ್ಕಬೆ ವಿ.ಎಸ್.ಎಸ್.ಎನ್. ಸಭಾಂಗಣದಲ್ಲಿ ಯವಕಪಾಡಿ ಗ್ರಾಮದ ವಾರ್ಡ್‍ಸಭೆ ಪೂರ್ವಾಹ್ನ 11 ಗಂಟೆಗೆ ಅಪ್ಪಾರಂಡ ವಿಜು ಪೂಣಚ್ಚ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ತಾ. 23ರಂದು ಮರಂದೋಡ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಮರಂದೋಡ ಗ್ರಾಮದ ವಾರ್ಡ್‍ಸಭೆ ಅಪರಾಹ್ನ 2 ಗಂಟೆಗೆ ಪುಷ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ತಾ. 25ರಂದು ನಾಲಡಿ ಅಂಬಲ ಶಾಲೆಯ ಸಭಾಂಗಣದಲ್ಲಿ ನಾಲಡಿ ಗ್ರಾಮದ ವಾರ್ಡ್‍ಸಭೆ ಪೂರ್ವಾಹ್ನ 11 ಗಂಟೆಗೆ ಕುಡಿಯರ ಬೋಜಕ್ಕಿ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ತಾ. 25ರಂದು ಕೆ.ಪಿ. ಬಾಣೆ ಶಾಲೆಯ ಸಭಾಂಗಣದಲ್ಲಿ ಕುಂಜಿಲ-ಬಿ ಮತ್ತು ಸಿ ಗ್ರಾಮಗಳ ವಾರ್ಡ್‍ಸಭೆ ಅಪರಾಹ್ನ 2.30 ಗಂಟೆಗೆ ನಾಸಿರ್ ಮಕ್ಕಿ ಅಧ್ಯಕ್ಷತೆಯಲ್ಲಿ ನಡೆಯಲಿದೆ.

5 ವರ್ಷಗಳ ಅಭಿವೃದ್ಧಿ ಮುನ್ನೋಟ ತಯಾರಿಕೆಯ ವಿಶೇಷ ಗ್ರಾಮಸಭೆ ತಾ. 27ರಂದು ಪೂರ್ವಾಹ್ನ 11 ಗಂಟೆಗೆ ಕರ್ತಂಡ ಶೈಲಾ ಕುಟ್ಟಪ್ಪ ಅವರ ಅಧ್ಯಕ್ಷತೆಯಲ್ಲಿ ಕಕ್ಕಬೆ ವಿ.ಎಸ್.ಎಸ್.ಎನ್. ಸಭಾಂಗಣದಲ್ಲಿ ನಡೆಯಲಿದೆ.