ಗೋಣಿಕೊಪ್ಪಲು, ಆ. 11: ಕಿರುಗೂರು ಗ್ರಾಮದ ಹೊನ್ನಿಕೊಪ್ಪಲು ಶ್ರೀ ಕ್ಷೇತ್ರ ಮೂಲ ಶನಿದೇವರ ದೇವಸ್ಥಾನದ ಆಶ್ರಯದಲ್ಲಿ ತಾ. 6 ರಿಂದ ತಾ. 27 ರವರೆಗೆ ಪವಿತ್ರ 4 ಶ್ರಾವಣ ಪೂಜೆಗಳನ್ನು ವಿಜೃಂಭಣೆ ಯಿಂದ ಆಚರಿಸಲಾಗುತ್ತಿದ್ದು, ಮೊದಲ ಶ್ರಾವಣ ಶನಿವಾರವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಶ್ರಾವಣ ಶನಿವಾರ ದಿನ ಬೆಳಿಗ್ಗೆ 9 ಗಂಟೆಗೆ ಗಣಪತಿ ಹೋಮ, 10 ಗಂಟೆಗೆ ಶನಿಶಾಂತಿ ಪೂಜೆ, 11 ಗಂಟೆಗೆ ನವಗ್ರಹ ಪೂಜೆ ಹಾಗೂ 12 ಗಂಟೆಗೆ ಮಹಾಪೂಜೆ ಮತ್ತು ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.
ಶ್ರಾವಣ ಶನಿವಾರದಂದು ನವಗ್ರಹ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಕ್ತಾದಿಗಳು ತಮ್ಮ ಹೆಸರನ್ನು ಅರ್ಚಕ ರಾಮು ಅವರಲ್ಲಿ ನೋಂದಾಯಿಸಿಕೊಳ್ಳಲು ತಿಳಿಸಿದ್ದಾರೆ. ತಾ. 13 ರ ಶ್ರಾವಣ ಶನಿವಾರದಂದು ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದ್ದು, ಹೆಚ್ಚಿನ ವಿವರಗಳಿಗೆ 9686139668, 94483315165 ಸಂಖ್ಯೆಗೆ ಕರೆ ಮಾಡಲು ಕೋರಿದ್ದಾರೆ.
ಇದೇ ಸಂದರ್ಭ ಟ್ರಸ್ಟ್ ಅಧ್ಯಕ್ಷೆ ಸಿ.ಜಿ. ಲಲಿತಾ ಮಾತನಾಡಿ, ಶ್ರಾವಣ ಶನಿವಾರ ಆಚರಣೆ ಬಗ್ಗೆ ಗೊಂದಲ ಮೂಡಿದ್ದು ನಿಜ. ಆದರೆ, ಭಕ್ತಾದಿಗಳ ಇಚ್ಛೆ ಮೇರೆ ಈ ಬಾರಿಯೂ ಶ್ರಾವಣ ಶನಿವಾರ ಆಚರಣೆ ಮಾಡಲಾಗುತ್ತಿದೆ. 2002 ರಲ್ಲಿ ದೇವಸ್ಥಾನ ಅಭಿವೃದ್ಧಿಗೆ ಜಾಗ ಖರೀದಿಸಿ ದೇಗುಲವನ್ನು ಸುಮಾರು ರೂ. 15 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರ ಕೈಗೊಳ್ಳಲಾಗಿದೆ. ಭೋಜನ ಶಾಲಾ ನಿರ್ಮಾಣವನ್ನು ಮುಂದಿನ ಹಂತದಲ್ಲಿ ಕೈಗೊಳ್ಳ ಲಾಗುವದು ಎಂದು ಹೇಳಿದರು. ಗುಡಿಸಲಿನ ಮಾದರಿಯಲ್ಲಿದ್ದ ದೇವಸ್ಥಾನವನ್ನು ಭಕ್ತಾದಿಗಳ ವಂತಿಗೆ ಹಣದಿಂದ ಸುಂದರವಾಗಿ ನಿರ್ಮಿಸಲಾಗಿದ್ದು, ತಾ. 29.5.2004 ರಲ್ಲಿ ಸುಬ್ರಹ್ಮಣ್ಯ ಮಠದ ಸ್ವಾಮೀಜಿ ಮಧ್ವಾಚಾರ್ಯ, ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಪೆÇನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಹಿರಿಯರಾದ ಶ್ರೀ ಜಗದಾತ್ಮಾನಂದ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಉದ್ಘಾಟನೆ ನೆರವೇರಿಸಲಾಗಿತ್ತು.
ಶ್ರಾವಣ ಶನಿವಾರ ಕಾರ್ಯಕ್ರಮ ಮುಗಿದ ನಂತರ ಟ್ರಸ್ಟಿಗಳ ಸಭೆ ಕರೆಯಲಾಗಿದ್ದು, ಮುಂದಿನ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚಿಸಲಾಗುವದು ಎಂದು ಹೇಳಿದರು.
ಇಲ್ಲಿನ ಮುಖ್ಯ ಅರ್ಚಕ ರಾಮು ಅವರ ಮೈಮೇಲೆ ಶನಿದೇವರ ಆವಾಹನೆ ಆಗಲಿದ್ದು, ಈ ಬಾರಿ ಶ್ರಾವಣ ಶನಿವಾರದಂದೂ ಭಕ್ತಾದಿಗಳಿಗೆ ಪುಷ್ಪ ಹಾಗೂ ಅಕ್ಷತೆಯನ್ನು ನೀಡಿ ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರಾದ ಸರಚಂಗಪ್ಪ, ಚೆಪ್ಪುಡಿರ ಪೆÇನ್ನಪ್ಪ, ಚೆಪ್ಪುಡಿರ ಕಿರಣ್, ಟ್ರಸ್ಟಿಗಳಾದ ಶರೀನ್ ಮತ್ತು ಚಂದ್ರು ಮುಂತಾದವರು ಉಪಸ್ಥಿತರಿದ್ದರು.
- ಟಿ.ಎಲ್. ಶ್ರೀನಿವಾಸ್