ಮಡಿಕೇರಿ, ಸೆ. 1: ಇತ್ತೀಚೆಗೆ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವೀರಾಜಪೇಟೆ ಕಾವೇರಿ ಪ್ರೌಢಶಾಲಾ ವಿದ್ಯಾರ್ಥಿ ಗಳು ಪಾಲ್ಗೊಂಡು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡರು.
ಶಟಲ್ ಬ್ಯಾಡ್ಮಿಂಟನ್‍ನಲ್ಲಿ ವಿದ್ಯಾರ್ಥಿನಿಯರು ಪ್ರ್ರಥಮ ಸ್ಥಾನಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಥ್ರೋಬಾಲ್ ದ್ವಿತೀಯ ಸ್ಥಾನ, ಭಾರದ ಗುಂಡು ಎಸೆತದಲ್ಲಿ ಕೆ.ಬಿ. ದಿಶಾ ದ್ವಿತೀಯ, ಪಿ.ಪಿ. ತಂಗಮ್ಮ ಮತ್ತು ಮುಬಾಶಿರ್ ತೃತೀಯ. ಜಾವಲಿನ್ ಎಸೆತ ಮುಬಾಶಿರ್ ತೃತೀಯ, ತಟ್ಟೆ ಎಸೆತ ತಂಗಮ್ಮ ತೃತೀಯ ಸ್ಥಾನಗಳಿಸಿದ್ದಾರೆ.
ಮುಖ್ಯ ಶಿಕ್ಷಕಿಯರಾದ ಸಿ.ಎ. ಚಿನ್ನಮ್ಮ, ಪಿ.ಎಸ್. ವಿಮಲ ಮತ್ತು ದೈಹಿಕ ಶಿಕ್ಷಕರಾದ ಆಶಿಕ್ ಮನ್ನತ್ ಹಾಜರಿದ್ದರು.