ಮಡಿಕೇರಿ, ನ. 19: ನದಿಗಳ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ರಿವರ್ ಬೋರ್ಡ್ ಆಕ್ಟ್ 1956 ರ ಕಾಯ್ದೆ ರೂಪಿಸಿದ್ದು, ದೇಶದ ಹಲವು ರಾಜ್ಯಗಳಲ್ಲಿ ಇದು ಅನುಷ್ಠಾನ ಗೊಂಡಿದೆ. ಆದರೆ, ಕರ್ನಾಟಕ ರಾಜ್ಯದಲ್ಲಿ ಈ ಕಾಯ್ದೆ ಜಾರಿಗೊಳ್ಳದೆ ಇರುವದರಿಂದ ನದಿ ಹಾಗೂ ಜಲ ಮೂಲಕ್ಕೆ ಧಕ್ಕೆಯಾಗಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ಕಳೆದ ಹತ್ತು ವರ್ಷಗಳಿಂದ ಸಮಿತಿಯು ಕಾವೇರಿ ನದಿ ಸಂರಕ್ಷಣೆಗಾಗಿ ಹಲವು ಜನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುವ ಮೂಲಕ ಜಿಲ್ಲಾಡಳಿ ಹಾಗೂ ಸರ್ಕಾರದ ಗಮನ ಸೆಳೆದಿದೆ. ಆದರೆ, ಇದು ಪ್ರಬಲವಾಗಿ ನಡೆಸಿದರೆ ಮತ್ತು ನದಿ ಕಲುಷಿತ ಗೊಳಿಸುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಂಡರೆ ನದಿಯನ್ನು ಸುಲಭವಾಗಿ ಸಂರಕ್ಷಿಸಬಹುದೆಂದು ತಿಳಿಸಿದರು. ಅ.17 ರಂದು ಅಂಚೆ ಕಾರ್ಡ್ ಅಭಿಯಾನವನ್ನು ಆರಂಭಿಸ ಲಾಗಿದ್ದು, ಈಗಾಗಲೆ ಸುಮಾರು 60 ಸಾವಿರದಷ್ಟು ಕಾರ್ಡ್‍ಗಳು ಸಹಿ ಸಹಿತ ಸಿದ್ಧಗೊಂಡಿದೆ. ಉಳಿದ 40 ಸಾವಿರ ಅಂಚೆ ಕಾರ್ಡ್‍ಗಳಿಗೆ ಸಂಘ ಸಂಸ್ಥೆ ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ಸಹಿ ಪಡೆದು ನ್ಯಾಯಾಧೀಶರಿಗೆ ಕಳುಹಿಸಿಕೊಡಲಾ ಗುವದೆಂದು ರೀನಾ ಪ್ರಕಾಶ್ ತಿಳಿಸಿದರು.

ಸುದ್ದಿಗೊಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಡಿ.ಆರ್. ಸೋಮಶೇಖರ್, ಕೆ.ಆರ್. ಶಿವಾನಂದನ್, ಬಿ.ಡಿ. ಅಣ್ಣಯ್ಯ ಹಾಗೂ ಆಶಾ ಸುಬ್ಬಯ್ಯ ಉಪಸ್ಥಿತರಿದ್ದರು.