ಕುಶಾಲನಗರ, ನ. 18: ಅನಿಯಮಿತ ಮೋಟಾರು ಬೋಟು ಗಳ ಸಂಚಾರ ಹಿನೆÀ್ನಲೆಯಲ್ಲಿ ವಿಶ್ವವಿಖ್ಯಾತ ಪ್ರವಾಸಿತಾಣ ದುಬಾರೆಯ ಕಾವೇರಿ ದಂಡೆ ಕೊರೆತದೊಂದಿಗೆ ಅಪಾಯಕಾರಿ ಸ್ಥಿತಿ ಸೃಷ್ಟಿಯಾಗಿದೆ. ದಿನನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಪ್ರವಾಸಿ ಕೇಂದ್ರದಲ್ಲಿ ಈ ಮೂಲಕ ಪ್ರವಾಸಿ ತಾಣದ ಮೂಲರೂಪಕ್ಕೆ ಧಕ್ಕೆ ಉಂಟಾಗುತ್ತಿದೆ. ದುಬಾರೆ ಕೇಂದ್ರದ ಪ್ರವಾಸಿ ದ್ವಾರದಲ್ಲಿ ಮಾತ್ರ ನದಿ ಕೊರೆತದಿಂದ ಭಾರೀ ಗಾತ್ರದ ಮರ ಗಳು ಅಪಾಯಕಾರಿ ಹಂತ ತಲಪಿದ್ದು, ಯಾವದೇ ಸಂದರ್ಭ ಬೀಳುವದರೊಂದಿಗೆ ಭಾರೀ ಅನಾಹುತದ ಮುನ್ಸೂಚನೆ ಕಂಡು ಬಂದಿದೆ. ಜಿಲ್ಲಾಡಳಿತ ಸಂಪೂರ್ಣ ಮೌನದಿಂದ ವಾರ್ಷಿಕ ಲಕ್ಷಗಟ್ಟಲೆ ಹಣ ಸರಕಾರದ ಬೊಕ್ಕಸಕ್ಕೆ ವಂಚನೆ ಯಾಗುತ್ತಿರುವದು ಬೆಳಕಿಗೆ ಬಂದಿದೆ. ಕಳೆದ ಕೆಲ ವರ್ಷಗಳಿಂದ ದುಬಾರೆ ಸಾಕಾನೆ ಶಿಬಿರದ ಎದುರುಗಡೆ ನದಿಯಲ್ಲಿ ಅತಿಯಾದ ಮೋಟಾರ್ ಬೋಟುಗಳ ಓಡಾಟ, ರ್ಯಾಫ್ಟಿಂಗ್ ಬೋಟ್‍ಗಳ ಅಡ್ಡಾಟ ಗಳಿಂದ ಭಾರೀ ಪ್ರಮಾಣದ ಅಲೆಗಳು ಸೃಷ್ಟಿಯಾಗುವದರೊಂದಿಗೆ ನದಿಯ ಇಕ್ಕೆಲಗಳಲ್ಲಿ ಕೊರೆತ ಉಂಟಾಗಿ ಮಣ್ಣು ನದಿ ಪಾಲಾಗುತ್ತಿದೆ.
ವಿಶ್ವವಿಖ್ಯಾತ ದುಬಾರೆ ಸಾಕಾನೆ ಶಿಬಿರಕ್ಕೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ನದಿ ದಾಟಲು ದೋಣಿಗಳನ್ನು ಅವಲಂಬಿಸಬೇಕಾಗಿದೆ. ದಿನಕ್ಕೆ ನೂರಾರು ಬಾರಿ ಮೋಟಾರು ಬೋಟುಗಳು ಚಲಿಸುವ ಸಂದರ್ಭ ಭಾರೀ ಗಾತ್ರದ ಅಲೆಗಳು ಸೃಷ್ಟಿ ಯಾಗುತ್ತವೆ. ಇವುಗಳು ನದಿ ತಟಕ್ಕೆ ಅಪ್ಪಳಿಸುವದರೊಂದಿಗೆ ಇಡೀ ಪ್ರದೇಶ ಕೊರೆತದೊಂದಿಗೆ ನದಿ ಪಾಲಾಗಿರುವ ದೃಶ್ಯ ಕಂಡು ಬಂದಿದೆ. ಮೋಟಾರು ಬೋಟುಗಳು ನಿಗದಿ ಪಡಿಸಿದಕ್ಕಿಂತ ಅಧಿಕ ವೇಗದಲ್ಲಿ ನದಿಯಲ್ಲಿ ಚಾಲಿಸುತ್ತಿರುವದೇ ಈ ಅವಾಂತರಕ್ಕೆ ಕಾರಣ ಎನ್ನುವ ದೂರುಗಳು ಕೇಳಿಬಂದಿವೆ. ಅಕ್ರಮ ವಾಗಿ ಯಾವದೇ ದಾಖಲೆಗಳಿಲ್ಲದೆ ಕೆಲವು ವ್ಯಕ್ತಿಗಳು ಬೋಟ್‍ಗಳನ್ನು ಬಳಸಿಕೊಂಡು ಸರಕಾರದ ಆದಾಯಕ್ಕೆ ಕುತ್ತು ತರುವದರೊಂದಿಗೆ ವಂಚನೆಯಲ್ಲಿ ತೊಡಗಿರುವದು ಬೆಳಕಿಗೆ ಬಂದಿದೆ. ಸಮರ್ಪಕ ವ್ಯವಸ್ಥೆಗಳಿಲ್ಲದೆ ಪ್ರವಾಸಿಗರ ಜೀವದೊಂದಿಗೆ ಚೆಲ್ಲಾಟವಾಡುತ್ತಿರು ವದು ಇತ್ತೀಚಿನ ಬೆಳವಣಿಗೆಯಾಗಿದೆ. ಇದರೊಂದಿಗೆ ಮೋಟಾರು ಬೋಟುಗಳಿಂದ ನದಿಯಲ್ಲಿ ಹೊರ ಸೂಸಲ್ಪಡುವ ಬೋಟ್ ಇಂಧನ ದಿಂದ ನದಿ ನೀರು ಕಲುಷಿತ ಗೊಳ್ಳುವದರೊಂದಿಗೆ ಜಲಚರಗಳಿಗೆ ಕೂಡ ಭಾರೀ ಹಾನಿಯಾಗುತ್ತಿರು ವದು ಅಪಾಯಕಾರಿಯಾಗಿದೆ. ನದಿ ಬದಿಗಳ ಕೊರೆತದಿಂದ ಬದಿಯಲ್ಲಿ ರುವ ಬೃಹತ್ ಮರಗಳು ಅಸ್ತಿತ್ವ ಕಳೆದುಕೊಂಡು ಬುಡ ಮೇಲಾಗಿ ಯಾವದೇ ಸಂದರ್ಭ ನದಿ ಪಾಲಾಗುವದರೊಂದಿಗೆ ಭಾರೀ ಅಪಾಯ ಉಂಟಾಗುವ ಸಾಧ್ಯತೆಗಳು ಅಧಿಕವಾಗಿದೆ.
ಇದೀಗ ನದಿ ಕೊರೆತದಿಂದ ಪ್ರವಾಸಿಗರು ನದಿಗೆ ಇಳಿಯುವ ಮಾರ್ಗಗಳು ಕೂಡ ಅಪಾಯಕಾರಿ ಪ್ರದೇಶಗಳಾಗಿ ಮೂಡಿ ಬಂದಿದೆ. ಇತ್ತೀಚೆಗೆ ಈ ವ್ಯಾಪ್ತಿಯಲ್ಲಿ ನದಿ ಕೊರೆತದಿಂದ ಮರಗಳ ಹನನ ವಾಗುತ್ತಿದ್ದು, ನದಿಯಲ್ಲಿ ಭಾರೀ ಆಳದ ಕಂದಕಗಳು ಉಂಟಾಗುವದ ರೊಂದಿಗೆ ಅಪಾಯಗಳು ಕೂಡ ಉಂಟಾಗಿವೆ. ಪ್ರವಾಸಿಗರು ಮುಳುಗಿ ಮೃತಪಟ್ಟ ಘಟನೆಗಳು ನಿರಂತರವಾಗಿ ನಡೆಯುತ್ತಿರುವದೇ ಇದಕ್ಕೆ ಸಾಕ್ಷಿ ಎನ್ನಬಹುದು. ನದಿಯಿಂದ ಅಂದಾಜು 10 ಮೀಟರ್ ವ್ಯಾಪ್ತಿಯ ದಡ ಕೊರೆತಕ್ಕೆ ಬಲಿಯಾಗಿದ್ದು, ಮರಗಳು ಅಪಾಯವನ್ನು ಆಹ್ವಾನಿಸುವ ಸ್ಥಿತಿಯಲ್ಲಿ ಇರುವ ದೃಶ್ಯ ಕಾಣಬಹುದು.
ಈ ಅನಾಹುತಗಳನ್ನು ತಕ್ಷಣ ಸಂಬಂಧಿಸಿದವರು ಗಮನಿಸಿ ಕ್ರಮ ಕೈಗೊಂಡಲ್ಲಿ ಮುಂದೆ ಉಂಟಾಗಲಿ ರುವ ಭಾರೀ ಅಪಾಯವನ್ನು ತಪ್ಪಿಸಬಹುದು ಎಂದು ಸ್ಥಳೀಯ ಉದ್ಯಮಿ ರತೀಶ್ ತಿಳಿಸಿದ್ದಾರೆ. ನದಿ ಮದ್ಯದಲ್ಲಿರುವ ದ್ವೀಪಗಳಿಗೂ ಅಲೆಗಳ ಹೊಡೆತದಿಂದ ಮಣ್ಣು ಕೊರೆತ ಉಂಟಾಗುತ್ತಿದೆ ಎಂದಿದ್ದಾರೆ.
ದುಬಾರೆ ಸಾಕಾನೆ ಶಿಬಿರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಹಾಗೂ ಶಿಬಿರದಲ್ಲಿರುವ ನಿವಾಸಿಗಳಿಗೆ ಮತ್ತು ಇಲಾಖಾ ಸಿಬ್ಬಂದಿಗಳಿಗೆ ನದಿ ದಾಟಲು ತೂಗು ಸೇತುವೆ ನಿರ್ಮಾಣ ಮಾಡಿದ್ದಲ್ಲಿ ಈ ಅವಾಂತರಗಳಿಗೆ ಇತಿಶ್ರೀ ಹಾಡಬಹುದು ಎನ್ನುವದು ಅವರ ಅಭಿಪ್ರಾಯವಾಗಿದೆ.
ತೂಗು ಸೇತುವೆ ನಿರ್ಮಾಣಕ್ಕೆ ಇಲಾಖೆ ಮೂಲಕ ಖಾಸಗಿ ಸಹಭಾಗಿತ್ವ ಮೂಲಕ ಪ್ರಸ್ತಾವನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಈ ಹಿಂದೆ ದುಬಾರೆಗೆ ಭೇಟಿ ನೀಡಿದ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಮಾಹಿತಿ ನೀಡಿದ್ದರು. ಈ ಮೂಲಕ ಉಂಟಾಗಿರುವ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ ಎಂದು ಅವರ ಅಭಿಪ್ರಾಯವಾಗಿತ್ತು. ಆದರೆ ಕೆಲವು ಸ್ವಾರ್ಥ ಸಾಧಕ ಶಕ್ತಿಗಳಿಂದ ಈ ಯೋಜನೆ ನೆಲಕಚ್ಚಿದೆ ಎನ್ನುವದು ಸ್ಥಳೀಯರ ಆರೋಪವಾಗಿದೆ. ಈ ಮೂಲಕ ಯೋಜನೆ ನೆನೆಗುದಿಗೆ ಬಿದ್ದಿದ್ದು ಸರಕಾರ ತಕ್ಷಣ ತೂಗು ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳ ಬೇಕಾಗಿದೆ ಎನ್ನುವದು ಸ್ಥಳೀಯರ ಆಗ್ರಹವಾಗಿದೆ.
ದುಬಾರೆ ಸಾಕಾನೆ ಶಿಬಿರಕ್ಕೆ ತೆರಳುವ ಸಂಪರ್ಕ ರಸ್ತೆ ಕೂಡ ಸಮರ್ಪಕವಾಗಿಲ್ಲದೆ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ. ಕೋಟಿಗಟ್ಟಲೆ ಆದಾಯ ನೀಡುತ್ತಿ ರುವ ಪ್ರವಾಸಿ ಕೇಂದ್ರವೊಂದರ ಅಭಿವೃದ್ಧಿಯತ್ತ ಗಮನಹರಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ದುಬಾರೆಯಲ್ಲಿ ನದಿ ಕೊರೆತ ತಪ್ಪಿಸಿ, ಮುಂದೆ ಉಂಟಾಗಲಿರುವ ಅನಾಹುತಗಳನ್ನು ತಪ್ಪಿಸುವದ ರೊಂದಿಗೆ ಪ್ರವಾಸಿ ಕೇಂದ್ರದ ಅಭಿವೃದ್ಧಿಗೆ ಯೋಜನೆ ರೂಪಿಸುವಲ್ಲಿ ಸಂಬಂಧಿಸಿದ ಜಿಲ್ಲಾಡಳಿತ ತಕ್ಷಣ ಗಮನಿಸಿ ಕಾರ್ಯೋನ್ಮುಖವಾಗಬೇಕಾಗಿದೆ. ಸರಕಾರದ ಕೈತಪ್ಪಿ ಹೋಗುತ್ತಿರುವ ಕೋಟಿಗಟ್ಟಲೆ ರೂ.ಗಳ ಆದಾಯ ಸರಕಾರದ ಬೊಕ್ಕಸ ಸೇರುವಲ್ಲಿ ಚಿಂತನೆ ಹರಿಸಬೇಕಾಗಿದೆ.
ಪ್ರವಾಸಿಗರಿಗೆ ಮತ್ತು ಸರಕಾರಕ್ಕೆ ವಂಚನೆ ನಡೆಯುತ್ತಿದೆ. ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ತಿಳಿದಿದ್ದರೂ ಯಾವದೇ ಕ್ರಮ ಕೈಗೊಳ್ಳದೆ ಅಕ್ರಮದಲ್ಲಿ ಶಾಮೀಲಾಗಿರುವ ಬಗ್ಗೆ ಆರೋಪ ವ್ಯಕ್ತಗೊಂಡಿದೆ. ತಕ್ಷಣ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವದಾಗಿ ಸಂಘ-ಸಂಸ್ಥೆಗಳ ಪ್ರಮುಖರು ಶಕ್ತಿ ಮೂಲಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.