ಭಾಗಮಂಡಲ, ಅ. 4: ಭಾಗಮಂಡಲ ಭಗಂಡೇಶ್ವರ ದೇವಾಲಯದಲ್ಲಿ ಇಂದು ಬೆಳಿಗ್ಗೆ ದೇವಸ್ಥಾನದ ತಕ್ಕರು, ಸ್ಥಳೀಯರು ಹಾಗೂ ಸಿಬ್ಬಂದಿ ವರ್ಗದವರು ಸೇರಿ ವಿಶೇಷ ಪೂಜೆ ಸಲ್ಲಿಸಿ, ವಾದ್ಯ ಗೋಷ್ಠಿಯೊಂದಿಗೆ ಸ್ಥಳೀಯರಾದ ರವಿ ಹೆಬ್ಬಾರ್ ಅವರ ಮನೆಗೆ ಮೆರವಣಿಗೆಯಲ್ಲಿ ತೆರಳಿ ಬಾಳೆಗೊನೆ ಕಡಿಯುವದರೊಂದಿಗೆ ಆಜ್ಞಾ ಮುಹೂರ್ತ (ಕಟ್ಟುಪಾಡು) ನಡೆಯಿತು. ಬಳಿಕ ದೇವಾಲಯಕ್ಕೆ ಬಂದು ಕಟ್ಟಪ್ಪಣೆ ಮಾಡಲಾಯಿತು.