ಮಡಿಕೇರಿ, ಜ. 21: ಕಾವೇರಿ ಪದವಿಪೂರ್ವ ಕಾಲೇಜು ಹಾಗೂ ಪದವಿ ಕಾಲೇಜು ವೀರಾಜಪೇಟೆಯಲ್ಲಿ ಕ್ರೀಡಾ ದಿನಾಚರಣೆಯನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮವನ್ನು ಮೂಳ್ಳೇರ ಸುಬ್ಬಯ್ಯ ನಿವೃತ್ತ ದೈಹಿಕ ಶಿಕ್ಷಕರು ಸೆಂಟ್ ಜೋಸೆಫ್ ಕಾಲೇಜು ಇವರು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಬಹುದು. ಕ್ರೀಡೆ ಜೀವನದಲ್ಲಿ ಶಿಸ್ತುನ್ನು ಬೆಳೆಸುತ್ತದೆ ಎಂದರು.

ಈ ಸಂದರ್ಭ ಇವರನ್ನು ಸನ್ಮಾನಿಸಲಾಯಿತು. ಕಾಲೇಜಿನಿಂದ ಮಂಗಳೂರು ವಿಶ್ವ ವಿದ್ಯಾನಿಲಯವನ್ನು ಪ್ರತಿನಿಧಿಸಿದ ಕ್ರೀaಡಾಪಟುಗಳಾದ ವಿ.ಎಂ. ಮೊಣ್ಣಪ್ಪ, ಪಿ.ಬಿ. ದೇವಯ್ಯ, ಎಂ.ಎಸ್. ವಿಶಾಲ್, ಸನತ್ ಕುಮಾರ್, ಯೋಗೇಶ್, ಬಿ.ಕೆ. ಲೋಹಿತ್ ಹಾಗೂ ಹಾಕಿಯಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ ಬೋಪಣ್ಣ ಅವರುಗಳಿಗೆ ಗೌರವಿಸಲಾಯಿತು.

ಕ್ರೀಡಾ ದಿನಾಚರಣೆಯ ಪ್ರಯುಕ್ತ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಗೆ ಕ್ರಿಕೆಟ್, ಥ್ರೋಬಾಲ್ ಹಾಗೂ ಹಗ್ಗ ಜಗ್ಗಾಟವನ್ನು ಆಯೋಜಿಸಿದ್ದರು. ಪ್ರಾಂಶುಪಾಲ ಎನ್.ಎಂ. ನಾಣಯ್ಯ ಹಾಗೂ ಸಿ.ಎಂ. ನಾಚಪ್ಪ ಉಪಸ್ಥಿತರಿದ್ದರು. ದೈಹಿಕ ನಿರ್ದೇಶಕರುಗಳಾದ ನಾಚಪ್ಪ, ಎ.ಎ. ಕುಶಾಲಪ್ಪ ಹಾಗೂ ಇತಿಹಾಸ ಉಪನ್ಯಾಸಕ ಜೀವನ್ ಕ್ರೀಡಾಕೂಟ ಸಂಯೋಜಿಸಿದ್ದರು.