ವೀರಾಜಪೇಟೆ, ಜ. 5: ಪವಿತ್ರ ಕಾವೇರಿ ಮೂಲೆ ಮೂಲೆಗಳಲ್ಲೂ ಹರಿಯುತ್ತಿದೆ. ಇಂದು ಕೊಡಗಿನಲ್ಲಿ ಹುಟ್ಟುವ ಮಕ್ಕಳು, ಸಂಘ-ಸಂಸ್ಥೆಗಳು ವ್ಯವಹಾರಿಕವಾಗಿಯೂ ಮಾತೆ ಕಾವೇರಿಯ ಹೆಸರನ್ನು ಬಳಸುತ್ತಾರೆ. ಆದರೆ ಕಾವೇರಿ ನೀರು ಕಲುಷಿತಗೊಳ್ಳುತ್ತಿರುವ ಬಗ್ಗೆಯೂ ಜಾಗೃತಿ ಇರಬೇಕು ಎಂದು ಕೊಡಗು ಜಾನಪದ ಪರಿಷತ್‍ನ ಜಿಲ್ಲಾ ಸಂಚಾಲಕರು, ಹೋರಾಟಗಾರ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೊಡಗು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ, ಕಾವೇರಿ ವಿದ್ಯಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಕಾವೇರಿ ಕಾಲೇಜಿನ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ "ಜೀವನದಿ ಕಾವೇರಿ ನೀರಿನ ಬಳಕೆ ಮತ್ತು ಪರಿಸರ ಸಂರಕ್ಷಣೆ" ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ನೇತೃತ್ವದ ತಂಡ ಕಾವೇರಿ ನದಿ ಸ್ವಚ್ಛತೆಗೆ ಹಗಲಿರುಳು ಶ್ರಮಿಸುತ್ತಿರುವದನ್ನು ಸ್ವಾಗತಾರ್ಹ. ಕಾವೇರಿ ಸ್ವಚ್ಛತೆ ಬಗ್ಗೆ ಇದೇ ತಂಡ ಪ್ರಧಾನ ಮಂತ್ರಿ ಅವರ ಗಮನಕ್ಕೆ ತಂದು ಅವರಿಂದ ಪ್ರತಿಕ್ರಿಯೆ ಪಡೆದಿದೆ. ಕಾವೇರಿ ಸಂರಕ್ಷಣೆಗಾಗಿ ಯೋಜನೆ ರೂಪಿಸಲು ಆಗ್ರಹಿಸಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಅಂಚೆಕಾರ್ಡ್ ಚಳವಳಿ ಮೂಲಕ ಮನವಿ ಸಲ್ಲಿಸಲಿರುವದು ಒಂದು ಉತ್ತಮ ಕಾರ್ಯಕ್ರಮ. ಕಾವೇರಿ ನೀರು, ಪರಿಸರದ ಕಾಳಜಿ ಪ್ರತಿಯೊಬ್ಬರಲ್ಲ್ಲೂ ಇರಬೇಕು. ನದಿ ಸ್ವಚ್ಛತೆಯ ತಂಡವನ್ನು ಎಲ್ಲರೂ ಸೇರಿ ಬೆಂಬಲಿಸಬೇಕು. ಅಭಿವೃದ್ಧಿ ಹಾಗೂ ಪ್ರವಾಸೋಧ್ಯಮದ ಹೆಸರಿನಲ್ಲಿ ಜೀವನದಿ ಕಾವೇರಿಯ ಉಪನದಿಗಳು ನಶಿಸಿ ಹೋಗುತ್ತಿರುವದನ್ನು ಸಾರ್ವತ್ರಿಕವಾಗಿ ಯೋಜನೆ ರೂಪಿಸಿ ತಡೆಯುವಂತಾಗಬೇಕು. ವಿದ್ಯಾರ್ಥಿ ಸಮೂಹ ಸೇರಿದಂತೆ ದೇಶದ ಯುವ ಶಕ್ತಿ ಕಾವೇರಿ ನದಿ ಜಲ ಮೂಲ ಸಂರಕ್ಷಣೆಗೆÉ ಸರ್ವ ರೀತಿಯಲ್ಲಿಯೂ ಆಂದೋಲನದ ಮೂಲಕ ಜನ ಜಾಗೃತಿಯ ಮೂಲಕ ಕಾರ್ಯಮಗ್ನ ರಾಗಬೇಕು ಎಂದು ಹೇಳಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜೀವನದಿ ಕಾವೇರಿಯ ರಕ್ಷಣೆ ಎಲ್ಲರಿಗೂ ಸೇರಿದ್ದು. ನದಿ ನೀರಿನಲ್ಲಿ ತ್ಯಾಜ್ಯಗಳನ್ನು ಎಸೆಯುವದರಿಂದ ನೀರಿನ ಪಾವಿತ್ರ್ಯತೆಗೆ ಧಕ್ಕೆ ಬರುತ್ತಿದೆ. ಸಂಘಟನೆಗಳು ಹೆಚ್ಚಿನ ಆಸಕ್ತಿ ವಹಿಸಿ ಕಾವೇರಿ ನೀರಿನ ಸಂರಕ್ಷಣೆ ಮಾಡಬೇಕೆಂದರು.

ಅತಿಥಿಯಾಗಿ ಭಾಗವಹಿಸಿದ್ದ ಮಡಿಕೇರಿ ಅರಣ್ಯ ವಿಭಾಗಾಧಿಕಾರಿ ಸೂರ್ಯ ಕುಮಾರ್ ಸಿನ್ನಾ ಮಾತನಾಡಿ, ಸಮಾಜದಲ್ಲಿ ಇಂದು ಪರಿಸರ ಜಾಗೃತಿ ಅತಿ ಮುಖ್ಯವಾ ದದ್ದು. ಕಾವೇರಿ ನೀರನ್ನು ಮಾತ್ರ ಬಳಸಿದರೆ ಸಾಲದು. ತ್ಯಾಜ್ಯ ವಸ್ತುಗ ಳಿಂದ ಮುಕ್ತಗೊಳಿಸಿ ಕಾವೇರಿಯನ್ನು ಶುದ್ಧಗೊಳಿಸಬೇಕು. ಈ ನಿಟ್ಟಿನಲ್ಲಿ ಸರಕಾರದ ರೆವಿನ್ಯೂ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಹೇಳಿದರು.

ಮೈಸೂರಿನ ವಲಯ ಕಚೇರಿಯ ಹಿರಿಯ ಪರಿಸರ ಅಧಿಕಾರಿ ಕೆ.ಎಂ.ಲಿಂಗರಾಜು ಮಾತನಾಡಿ ಕಾವೇರಿ ಜಲ ಸಂರಕ್ಷಣೆ.