ಮಡಿಕೇರಿ, ಜೂ. 18: ಕನ್ನಡ ಸಾಹಿತ್ಯ ಪರಿಷತ್ ಕುಶಾಲನಗರ ಹೋಬಳಿ ಘಟಕದ ವತಿಯಿಂದ ತಾ.19 ರಂದು (ಇಂದು) ಕಾವೇರಿ ನಿಸರ್ಗಧಾಮದಲ್ಲಿ ಜಿಲ್ಲೆಯ ಕವಿಗಳಿಗಾಗಿ ಜಿಲ್ಲಾ ಮಟ್ಟದ “ಕಾವೇರಿ ಒಡಲಲ್ಲಿ ಮುಂಗಾರು ಕವಿಗೋಷ್ಠಿ” ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಕವಿಗೋಷ್ಠಿಯನ್ನು ಹಿರಿಯ ಸಾಹಿತಿ ಶÀ.ಗಾ. ನಯನತಾರ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕ.ಸಾ.ಪ. ಕುಶಾಲನಗರ ಹೋಬಳಿ ಘಟಕದ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ ವಹಿಸಲಿದ್ದಾರೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕೂಡಿಗೆ ಉಪನ್ಯಾಸಕರು ಹಾಗೂ ಸಾಹಿತಿ ಡಾ. ಪ್ರಕಾಶ್ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಲೋಕೇಶ್‍ಸಾಗರ್, ಕುಶಾಲನಗರ ವಲಯ ಅರಣ್ಯಾಧಿಕಾರಿ ಎಂ.ಎಸ್. ಚಿಣ್ಣಪ್ಪ, ವಿಶೇಷ ಆಹ್ವಾನಿತರಾಗಿ ಪಿರಿಯಾಪಟ್ಟಣ ಮನೆ ಮನೆ ಕವಿಗೋಷ್ಠಿ ಬಳಗದ ಸಂಸ್ಥಾಪಕ ಕಂಪಲಾಪುರ ಮೋಹನ್ ಆಗಮಿಸಲಿದ್ದಾರೆ.