ಮಡಿಕೇರಿ, ಅ. 10: ಮಡಿಕೇರಿಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಾರ್ಷಿಕ ಸಂಚಿಕೆಯ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಿಮ್ಯರಿಂದ ಪ್ರಾರ್ಥನೆ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಕೀಲೆ ಅನಿತಾ ಪೂವಯ್ಯ ಅವರಿಂದ ಉದ್ಘಾಟನೆ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಜೆನಿಫರ್ ರೊಲೀಟಾ ವಹಿಸಿದ್ದರು. ಸಾಂಸ್ಕøತಿಕ ವೇದಿಕೆಯ ಸಂಚಾಲಕಿ ನಮಿತ ಬಿ. ಹಾಗೂ ಕಾಲೇಜಿನ ವ್ಯವಸ್ಥಾಪಕ ರವಿಕಿರಣ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪದ್ಮಾವತಿ ಸ್ವಾಗತಿಸಿ, ಜೀವಿತ ಎನ್. ನಿರೂಪಣೆ ಹಾಗೂ ಜ್ಯೋತಿ ವಂದನಾರ್ಪಣೆ ಮಾಡಿದರು.