ನಾಪೆÇೀಕ್ಲು, ಜ. 10: ಜಿಲ್ಲೆಯಲ್ಲಿ ಕೃಷಿ ಕಾರ್ಯ ಭರದಿಂದ ಆರಂಭಗೊಂಡಿದೆ. ಯಾವ ಬೆಳೆಗಾರ, ಕೃಷಿಕನನ್ನು ಮಾತನಾಡಿಸಿದರೂ ಕಾರ್ಮಿಕರ ಸಮಸ್ಯೆಯದೇ ಮಾತು. ವರ್ಷಂಪ್ರತಿ ಈ ಸಮಯದಲ್ಲಿ ಮೋಡ ತುಂಬಿದ ವಾತಾವರಣ ಮಧ್ಯೆ ಮಧ್ಯೆ ಬೀಳುವ ಮಳೆಯಿಂದ ರೈತರು ಹೆಚ್ಚಿನ ಆತಂಕ ಅನುಭವಿಸುತ್ತಿದ್ದರು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಳೆ, ತುಂತುರು ಮಳೆ ಮತ್ತು ಮೋಡ ತುಂಬಿದ ವಾತಾವರಣ ರೈತರಿಗೆ ಹೆಚ್ಚಿನ ಸಮಸ್ಯೆಯನ್ನು ನೀಡಿದೆ. ಕಾಫಿ ತೋಟಗಳಲ್ಲಿ ತೋಟದ ಕೆಲಸ, ಕಾಫಿ ಕುಯ್ಲು ಆರಂಭಗೊಂಡರೆ, ಭತ್ತದ ಗದ್ದೆಗಳಲ್ಲಿ ಭತ್ತದ ಬೆಳೆ ಹಣ್ಣಾಗಿ ನಿಂತಿದೆ. ಹಲವು ಕಡೆಗಳಲ್ಲಿ ಕೆಲಸ ಕಾರ್ಯಗಳು ಭರದಿಂದ ಸಾಗಿವೆÉ.

ಸಹಜವಾಗಿಯೇ ಗದ್ದೆ ಕೆಲಸಗಳನ್ನು ಬೇಗ ಬೇಗ ಪೂರೈಸಿ, ಕಾಫಿ ಕುಯ್ಲು ಆರಂಭಿಸುವ ಧಾವಂತ ರೈತರದು. ಆದರೆ ಗದ್ದೆ ಕೆಲಸಗಳಿಗೆ ಬಹಳವಾಗಿ ಕಾಡುತ್ತಿರುವ ಕಾರ್ಮಿಕರ ಸಮಸ್ಯೆ, ಕಾರ್ಮಿಕರು ಸಿಕ್ಕಿದರೂ ಗದ್ದೆ ಕೆಲಸಗಳ ಅನುಭವದ ಕೊರತೆ ಅವರನ್ನು ಕಾಡುತ್ತಿದೆ.

ಈ ಸಮಸ್ಯೆಗಳನ್ನು ನಿವಾರಿಸಲು ಹಲವು ಸಂಸ್ಥೆಗಳು ಭತ್ತದ ಕೃಷಿಗೆ ಸಹಾಯಕವಾಗುವ ಕೃಷಿ ಯಂತ್ರೋಪಕರಣಗಳನ್ನು ಮಾರುಕಟ್ಟೆಗೆ ತಂದಿವೆ. ಇವುಗಳ ಉಪಯೋಗವನ್ನು ರೈತರು ಪಡೆಯುವ ಉದ್ದೇಶದಿಂದ ಸರಕಾರ, ಕೃಷಿ ಇಲಾಖೆ ಇವುಗಳಿಗೆ ರಿಯಾಯಿತಿ ದರ ನೀಡಿ ಪೆÇ್ರೀತ್ಸಾಹಿಸುತ್ತಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಉಳುಮೆ ಯಂತ್ರ, ನಾಟಿ ಯಂತ್ರ, ಕುಯ್ಲು ಯಂತ್ರ ಮತ್ತು ಭತ್ತವನ್ನು ಹುಲ್ಲಿನಿಂದ ಬೇರ್ಪಡಿಸಿ ಒಕ್ಕಣೆ ಮಾಡುವ ಯಂತ್ರಗಳ ಬಳಕೆ ಹೆಚ್ಚುತ್ತಿದೆ.

ಭತ್ತದ ಕಟಾವು ಯಂತ್ರದಿಂದ ಬಹಳ ಉಪಯೋಗಗಳಾಗುತ್ತಿದೆ. ಈ ಯಂತ್ರವು ಭತ್ತವನ್ನು ಹುಲ್ಲಿನಿಂದ ಬೇರ್ಪಡಿಸಿ ಒಕ್ಕಣೆ ಮಾಡುವದಲ್ಲದೆ, ಇದರ ಭತ್ತದ ಶೇಖರಣ ಸಾಮಥ್ರ್ಯ 540 ಕ್ವಿಂಟಾಲ್ ಆಗಿದೆ. ಅದಲ್ಲದೆ 1 ಗಂಟೆಯಲ್ಲಿ 1 ಏಕರೆ ಗದ್ದೆಯ ಭತ್ತವನ್ನು ಬೇರ್ಪಡಿಸುತ್ತದೆ. ಹಿಂದೆ ಗದ್ದೆಯಿಂದ ತಂದು ಕಣದಲ್ಲಿ ಸಂಗ್ರಹಿಸಿದ ಭತ್ತದ ಬೆಳೆಯನ್ನು ಯಂತ್ರಕ್ಕೆ ಹಾಕುತ್ತಾ ಹೋದರೆ ಹುಲ್ಲಿನಿಂದ ಭತ್ತ ಬೇರ್ಪಟ್ಟು ಶುದ್ಧ ಭತ್ತ, ಜಳ್ಳು, ಹುಲ್ಲು, ಹುಡಿ ಹುಲ್ಲು ಬೇರೆ ಬೇರೆಯಾಗಿ ಸಂಗ್ರಹವಾಗುವ ಯಂತ್ರದ ಬಳಕೆ ಹೆಚ್ಚಾಗಿ ಚಾಲ್ತಿಯಲ್ಲಿತ್ತು.

ಆದರೆ ಈ ವರ್ಷ ಹೊಸ ಆವಿಷ್ಕಾರದ ಬೇಗ ಕೆಲಸ ಪೂರೈಸುವ ಯಂತ್ರದತ್ತ ರೈತರ ಒಲವು ಹೆಚ್ಚಾಗಿ ಕಂಡು ಬರುತ್ತಿದೆ.

- ಪಿ.ವಿ. ಪ್ರಭಾಕರ್