ಸೋಮವಾರಪೇಟೆ, ಆ. 31: ತಾ. 2 ರಂದು ಅಖಿಲ ಭಾರತ ಕಾರ್ಮಿಕರ ಮುಷ್ಕರದೊಂದಿಗೆ ಕಾರ್ಮಿಕ ಶಕ್ತಿಯನ್ನು ಪ್ರದರ್ಶಿಸಲು ಕಾರ್ಮಿಕರು ಕೈಜೋಡಿಸಬೇಕು ಎಂದು ಐಎನ್‍ಟಿಯುಸಿ ಜಿಲ್ಲಾ ಕಾರ್ಯದರ್ಶಿ ಎನ್.ಎನ್. ಧರ್ಮಪ್ಪ ಮನವಿ ಮಾಡಿದರು.
ಸೋಮವಾರಪೇಟೆ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಚಾರ ಭಾಷಣ ಮಾಡಿದ ಅವರು, ನಯವಂಚಕ, ನವ-ಉದಾರವಾದಿ ನೀತಿಗಳ ವಿರುದ್ಧ ರಾಜೀ ಇಲ್ಲದೆ ಹೋರಾಟ ಮಾಡಬೇಕಾಗಿದೆ.
ತಾ. 2 ರಂದು ಮಡಿಕೇರಿ ಜಿಲ್ಲಾ ಕೇಂದ್ರದಲ್ಲಿ ನಡೆಯುವ ಮುಷ್ಕರದಲ್ಲಿ ಜಿಲ್ಲೆಯ ಕಾರ್ಮಿಕರು ಭಾಗವಹಿಸಬೇಕು ಎಂದರು.
ಈ ಸಂದರ್ಭ ಕಾರ್ಮಿಕ ಮುಖಂಡರುಗಳಾದ ಭರತ್, ಡಿ.ಎಸ್. ನಿರ್ವಾಣಪ್ಪ, ಹೆಚ್.ಎಂ. ಸೋಮಪ್ಪ, ಹೆಚ್.ಬಿ. ರಮೇಶ್, ಟಿ.ಪಿ. ಹಮೀದ್ ಮತ್ತಿತರರು ಉಪಸ್ಥಿತರಿದ್ದರು.