*ಗೋಣಿಕೊಪ್ಪ, ನ. 11: ಕಾರಿನಲ್ಲಿ ಸಾಗಿಸುತ್ತಿದ್ದ ರೂ. 41 ಲಕ್ಷ 90 ಸಾವಿರದ 500 ನೋಟ್‍ಗಳನ್ನು ಪೊನ್ನಂಪೇಟೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಟಿಪ್ಪು ಜಯಂತಿ ಆಚರಣೆ ಹಿನ್ನೆಲೆ ತಪಾಸಣೆ ನಡೆಸುತ್ತಿದ್ದ ಸಂದÀರ್ಭ ಬಾಳೆಲೆ, ಕಾರ್ಮಾಡು ಗೇಟಿನ ಬಳಿ ಕಾರಿನಲ್ಲಿದ್ದ ಹಣ ಪೊಲೀಸರಿಗೆ ಪತ್ತೆಯಾಗಿದೆ. ಮೈಸೂರಿನಿಂದ ಶಿಫ್ಟ್ (ಕೆ.ಎ.01-ಎಂ.ಸಿ2803) ಕಾರಿನಲ್ಲಿ ಹಣ ಸಾಗಿಸಲಾಗುತ್ತಿತ್ತು. ಕುಟ್ಟ ಸುಬ್ಬಲಕ್ಷ್ಮಿ ಕಾಫಿ ಮಿಲ್ಲಿನ ಮಾಲಿಕ ಜಕ್ರಿ ಅವರಿಗೆ ಸೇರಿದ ಹಣ ಇದಾಗಿದ್ದು, ಮೈಸೂರಿನ ಪ್ರಸನ್ನ ಅವರಿಂದ ಹಣ ತರಲಾಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದರು. ಕಾರಿನಲ್ಲಿ ಹಣ ಸಾಗಿಸುತ್ತಿದ್ದ ಸೋಹೆಬ್, ಮಜೀದ್, ಮಣಿ ಅವರನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸಿದ್ದಾರೆ.