ಸುಂಟಿಕೊಪ್ಪ, ಜು. 16: ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಜನತಾ ಕಾಲೋನಿಯಲ್ಲಿ ನಿರ್ಮಿಸಲಾಗಿರುವ ತಡೆಗೋಡೆಯ ಕಾಮಗಾರಿಯನ್ನು ಗ್ರಾ.ಪಂ.ಯ ಅಭಿವೃದ್ಧಿ ಅಧಿಕಾರಿ ಮತ್ತು ಸದಸ್ಯರು ತಡೆಗೋಡೆಯ ಪರಿಶೀಲನೆ ಮಾಡಿ ನಡೆಸಿದರು.
1ನೇ ವಿಭಾಗದ ಜನತಾ ಕಾಲೋನಿಯಲ್ಲಿ ಸುಮಾರು 25 ವಾಸದ ಮನೆಗಳಿದ್ದು, ಮನೆಗಳ ಹಿಂಭಾಗದಲ್ಲಿ ಬರೆ ನಿರಂತರವಾಗಿ ಕುಸಿಯುತ್ತಿರುತ್ತದೆ. ಕೆಲವು ತಿಂಗಳುಗಳ ಹಿಂದೆ 5 ಮನೆಗಳ ಮೇಲೆ ಮೇಲ್ಭಾಗದ ಬರೆ ಕುಸಿದು ಅಲ್ಪ ಪ್ರಮಾಣದ ಹಾನಿ ಸಂಭವಿಸಿತ್ತು. ಇದನ್ನು ಮನಗಂಡ ಗ್ರಾ.ಪಂ. ಪರಿಶಿಷ್ಟ ಜಾತಿಯ ಅನುದಾನದಿಂದ ರೂ.1 ಲಕ್ಷ ವೆಚ್ಚದಲ್ಲಿ ತಡೆಗೋಡೆಯನ್ನು ನಿರ್ಮಿಸಲಾಯಿತು.
ಈ ತಡೆಗೋಡೆ ಕಾಮಗಾರಿಯನ್ನು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯಣ್ಣ, ಗ್ರಾ.ಪಂ. ಸದಸ್ಯ ಎ. ಶ್ರೀಧರ್ ಕುಮಾರ್, ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಎಸ್.ರವಿ, ಗುತ್ತಿಗೆದಾರ ದೊರೈಮೇಸ್ತ್ರಿ ಅವರುಗಳು ಪರಿಶೀಲಿಸಿದರು.