ಮಡಿಕೇರಿ, ಸೆ.18 : ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ನೂತನ ಕಾಫಿ ಕಾಯ್ದೆಯ ಕುರಿತು ಜನ ಸಮುದಾಯದ ಚರ್ಚೆ ಮತ್ತು ಅಭಿಪ್ರಾಯಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿರುವ ಭಾರತ ಕಮ್ಯೂನಿಸ್ಟ್ ಪಕ್ಷ(ಮಾಕ್ರ್ಸ್ ವಾದಿ)ದ ಕೊಡಗು ಜಿಲ್ಲಾ ಘಟಕ, ಈ ಬಗ್ಗೆ ವ್ಯಾಪಕ ‘ಪ್ರಚಾರಾಂದೋಲನ’ವನ್ನು ಹಮ್ಮಿಕೊಳ್ಳುವದಾಗಿ ತಿಳಿಸಿದೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಕಾರ್ಯದರ್ಶಿ ಡಾ|ಇ.ರ. ದುರ್ಗಾಪ್ರಸಾದ್ ಜನಪರವಲ್ಲದ ಮತ್ತು ನೌಕರ ಶಾಹಿಯನ್ನು ಓಲೈಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 1942 ರ ಕಾಫಿ ಕಾಯ್ದೆಯನ್ನು ರದ್ದುಗೊಳಿಸಿ, 2016ರ ಕಾಫಿ ಕಾಯ್ದೆಯನ್ನು ಜಾರಿಗೊಳಿಸುವ ಪ್ರಯತ್ನಕ್ಕೆ ಮುಂದಾಗಿದೆ. ಆ ಮೂಲಕ ಮತ್ತೆ ಸಣ್ಣ ಕಾಫಿ ಬೆಳೆಗಾರರನ್ನು ಸಂಪೂರ್ಣವಾಗಿ ತೆರಿಗೆ ವ್ಯಾಪ್ತಿಗೆ ಒಳಪಡಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ನೂತನ ಕಾಫಿ ಕಾಯ್ದೆಯ ಕರಡನ್ನು ಪ್ರಸಕ್ತ ಸಾಲಿನ ಮಾರ್ಚ್ 23 ರಂದು ಕೇಂದ್ರದ ವಾಣಿಜ್ಯ ಸಚಿವಾಲಯದ ವೆಬ್‍ಸೈಟ್‍ನಲ್ಲಿ ಪ್ರಕಟಿಸಿ, ಆಕ್ಷೇಪಗಳನ್ನು ಸಲ್ಲಿಸಲು 30 ದಿನಗಳ ಕಾಲಾವಕಾಶವನ್ನು ಒದಗಿಸಲಾಗಿತ್ತು. ಆದರೆ, ದೂರಗಾಮಿ ಪರಿಣಾಮಗಳನ್ನು ಬೀರಬಹುದಾದ ಕಾಯ್ದೆಯನ್ನು ಚರ್ಚೆಗೆ ಒಳಪಡಿಸುವ ಪ್ರಯತ್ನಗಳನ್ನು ನಡೆಸಲಿಲ್ಲ, ಈ ವಿಭಾಗದ ಸಂಸದರ ಮುಖೇನ ವಿಚಾರವನ್ನು ಬೆಳೆಗಾರರಿಗೆ ಗಮನಕ್ಕೆ ತರವ ಪ್ರಯತ್ನವನ್ನು ಕೇಂದ್ರ ಮಾಡಿಲ್ಲ ಮತ್ತು ಅದರ
(ಮೊದಲ ಪುಟದಿಂದ) ಅವಶ್ಯಕತೆಯೂ ಕೇಂದ್ರಕ್ಕೆ ಕಾಣಲಿಲ್ಲವೆಂದು ತೀಕ್ಷ್ಣವಾಗಿ ನುಡಿದರು. ನೂತನ ಕಾಫಿ ಕಾಯ್ದೆಯಲ್ಲಿ ಕಾಫಿ ಮಂಡಳಿಯ 29 ಸ್ಥಾನಗಳನ್ನು 20ಕ್ಕೆ ಇಳಿಸಲಾಗಿದೆ. ಇದರಲ್ಲಿ 15 ಸ್ಥಾನಗಳಲ್ಲಿ ಯಾವೆಲ್ಲಾ ವಿಭಾಗಗಳಿಗೆ ಒದಗಿಸಲಾಗುತ್ತದೆಂದು ವಿವರಗಳನ್ನು ನೀಡಲಾಗಿದ್ದರು, ಕಾಫಿ ಉದ್ಯಮದ ಆಧಾರ ಸ್ತಂಭವೇ ಆಗಿರುವ ಶೇ.98 ರಷ್ಟಿರುವ
ನೂತನ ಕಾಫಿ ಕಾಯ್ದೆಯಲ್ಲಿ ಕಾಫಿ ಬೆಳೆಗಾರರು ಮತ್ತು ವರ್ತಕರನ್ನು ಒಂದೆಡೆ ತರುವ ಪ್ರಯತ್ನಗಳ ಮೂಲಕ ವಿರೋಧಾ ಬಾಸವನ್ನು ಸೃಷ್ಟಿಸಲಾಗಿದೆ. ಬೆಳೆಗಾರರು ಮತ್ತು ವ್ಯಾಪಾರಿಗಳನ್ನು ಒಳಗೊಂಡ ಮಧ್ಯವರ್ತಿಗಳ ಹಿತಾಸಕ್ತಿ ಯಾವತ್ತೂ ತದ್ವಿರುದ್ಧ ವಾದದ್ದು, ಬೆಳೆಗಾರ ತಾನು ಬೆಳೆದ ಬೆಳೆಗೆ ಹೆಚ್ಚಿನ ಬೆಲೆ ಸಿಗಬೇಕೆಂದು ಚಿಂತಿಸಿದರೆ, ಮತ್ತೊಂದೆಡೆ ಬೆಳೆಗಾರನಿಗೆ ಕಡಿಮೆ ಧಾರಣೆ ನೀಡಿದರಷ್ಟೆ ಮಧ್ಯವರ್ತಿಗಳು ಹೆಚ್ಚಿನ ಲಾಭ ಗಳಿಸಲು ಸಾಧ್ಯ. ಇದೀಗ ಮಂಡಳಿಯಲ್ಲಿ ವ್ಯಾಪಾರಿ ವಿಭಾಗಕ್ಕೆ ಹೆಚ್ಚಿನ ಸ್ಥಾನವನ್ನು ನೀಡಿ, ಬೆಳೆÉಗಾರರಿಗೆ ಸ್ಥಾನವೇ ಇಲ್ಲದಂತೆ ಮಾಡುವ ಮೂಲಕ ವ್ಯಾಪಾರಿ ವಿಭಾಗದೊಂದಿಗೆ ಬೆಳೆಗಾರರ ಹಿತ ಕಾಪಾಡಲು ಹೇಳುವದು ಸಮರ್ಪಕವಲ್ಲವೆಂದು ದುರ್ಗಾ ಪ್ರಸಾದ್ ತಿಳಿಸಿದರು.
ನೂತನ ಕಾಫಿ ಕಾಯ್ದೆಯಲ್ಲಿ ಹೆಚ್ಚಿನ ಅಧಿಕಾರವನ್ನು ಕಾರ್ಯದರ್ಶಿಗೆ ನೀಡಲಾಗಿದ್ದು, ಅಧ್ಯಕ್ಷರು ಎನ್ನುವದು ಇಲ್ಲಿ ಲೆಕ್ಕಕ್ಕಷ್ಟೇ ಎಂಬಂತಾಗುತ್ತದೆ. ಕನಿಷ್ಟ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಸಭೆ ನಡೆಸಲು ಅವಕಾಶ ಹೊಂದಿದ್ದ ಉಪಾಧ್ಯಕ್ಷರಿಗೆ ಆ ಅಧಿಕಾರವು ಇಲ್ಲದಿರುವದರಿಂದ ಉಪಾಧ್ಯಕ್ಷ ಸ್ಥಾನ ಕೇವಲ ಉತ್ಸವ ಮೂರ್ತಿಯೆಂದು ಲೇವಡಿ ಯಾಡಿದರು.
ನೂತನ ಕಾಫಿ ಕಾಯ್ದೆಯಡಿ ಕಾಫಿ ತೋಟಗಳಿಗೆ ತೆರಳಿ ಪರಿಶೀಲಿಸುವ ಅಧಿಕಾರಿಯನ್ನು ನಿಯುಕ್ತಿಗೊಳಿಸಲು ಅಧಿಕಾರವನ್ನು ಕಾರ್ಯದರ್ಶಿಗಳಿಗೆ ನೀಡಲಾಗಿದೆ. ಮಂಡಳಿ ಕಾಫಿ ಖರೀದಿ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ಇಲ್ಲದಿರುವ ಹಂತದಲ್ಲಿ ಇಂತಹ ಗುಣಮಟ್ಟ ಪರಿಶೀಲನೆಯ ಅಗತ್ಯತೆ ಏನೆಂಬದು ಸ್ಪಷ್ಟವಿಲ್ಲ. ಮಂಡಳಿಯಲ್ಲಿ ಕಾರ್ಯದರ್ಶಿ ಸ್ಥಾನ ಸರ್ವಸ್ವವಾಗಿದ್ದು, ಕೇವಲ ಗುಣಮಟ್ಟದ ಕಾರಣವನ್ನು ನೀಡಿ ಕಾಫಿ ರಫ್ತನ್ನು ತಡೆಗಟ್ಟುವ ಅಧಿಕಾರವನ್ನು ಕಾರ್ಯದರ್ಶಿಗೆ ಒದಗಿಸಲಾಗಿದೆ ಎಂದು ಡಾ.ದುರ್ಗಾಪ್ರಸಾದ್ ತಿಳಿಸಿದರು.
ಕಾಫಿ ಮಂಡಳಿಯ ಮೂಲಕ ಅಂತಿಮವಾಗಿ ಕಾಫಿ ಬೆಳೆಗಾರರನ್ನು ತಮ್ಮ ಹಿಡಿತಕ್ಕೆ ಪಡೆÀಯುವ ಪ್ರಯತ್ನಗಳು ನಡೆÀದಿದೆ. ಇಂತಹ ನೂತನ ಕಾಯ್ದೆಯನ್ನು ಈಗಾಗಲೆ ಬಿಜೆಪಿ ಮುಖಂಡರು ಸಮರ್ಥಿಸಿ ಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ ಅವರು ನೂತನ ಕಾಫಿ ಕಾಯ್ದೆಯ ವಿಚಾರವನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸುವದು ಅತ್ಯವಶ್ಯ. ಇಂತಹ ವಿಚಾರಗಳನ್ನು ಕಡೆಗಣಿಸಿರುವ ಕೇಂದ್ರದ ಬೆಳೆಗಾರ ವಿರೋಧಿ ವರ್ತನೆಯನ್ನು ಸಂಘಟಿತ ಹೋರಾಟದ ಮೂಲಕ ಮಾತ್ರ ಸೋಲಿಸಲು ಸಾಧ್ಯ ಎನ್ನುವದನ್ನು ಮನಗಂಡು ಬೆಳೆಗಾರರು ಸಂಘÀಟಿತರಾಗಬೇಕೆಂದು ಡಾ.ದುರ್ಗಾಪ್ರಸಾದ್ ಹೇಳಿದರು. ಗೋಷ್ಠಿಯಲ್ಲಿ ಸಿಪಿಐಎಂ ಪಕ್ಷದ ಬೈಜು ಉಪಸ್ಥಿತರಿದ್ದರು.