ವೀರಾಜಪೇಟೆ, ನ. 20: ಲೋಕ ಕಲ್ಯಾಣ ಹಾಗೂ ಸರ್ಪ ದೋಷಗಳಿಂದ ಮುಕ್ತಿ ಪಡೆಯಲು ಕಾಕೋಟುಪರಂಬು ಪ್ರಾಥಮಿಕ ಶಾಲಾ ಮೈದಾನದಲ್ಲಿ ದ್ವಾದಶ ಮಹಾ ಕಾಳ ಸರ್ಪ ಯಾಗವನ್ನು ನಡೆಸಲಾಯಿತು. ಬೆಂಗಳೂರಿನ ಶ್ರೀ ಶಿರಡಿ ಸಾಯಿ ಭಿಕ್ಷಾ ಕೇಂದ್ರದ ಸಂಸ್ಥಾಪಕ ಲಕ್ಷ್ಮಿ ಶ್ರೀನಿವಾಸ ಗುರೂಜಿ ನೇತೃತ್ವದಲ್ಲಿ ಪೂರ್ವಹ್ನ 5.30 ಗಂಟೆಗೆ ಅಗ್ನಿಹೊತ್ರಿಯ ಮೂಲಕ ಕಾರ್ಯಕ್ರ ಮಕ್ಕೆ ಚಾಲನೆ ನೀಡಲಾಯಿತು. ಆರಿದ್ರಾ ಗಣಪತಿ ಹೋಮಾ, ಪ್ರತ್ಯಾಹ ಪೂಜೆ, 12 ಕಾಳಸರ್ಪ ಮಹಾ ಸಂಕಲ್ಪ ಪೂಜೆಗಳನ್ನು ನಡೆಸಲಾ ಯಿತು. ಬೃಹದಾಕಾರದ ಹೋಮ ಕುಂಡಲಿಯಲ್ಲಿ ಮಹಾಯಾಗವನ್ನು ನಡೆಸಲಾಯಿತು. ಈ ಯಾಗದಿಂದ ನಾಗದೋಷದಿಂದ ನಿವಾರಣೆ ಹೊಂದಬಹುದಾಗಿದೆ. ಪ್ರತ್ಯೇಕವಾಗಿ ಹಿರಿಯ ನಾಗರಿಕರಿಗೆ, ದಂಪತಿಗಳಿಗೆ, ಪುರುಷರು ಹಾಗೂ ಮಹಿಳೆಯರಿಗೆ ಆಸನದ ವ್ಯವಸ್ಥೆ
(ಮೊದಲ ಪುಟದಿಂದ) ಮಾಡಲಾಗಿತ್ತು. ಯಾಗದಲ್ಲಿ ಜರ್ಮನಿ, ಆಸ್ಟ್ರೇಲಿಯಾ, ವಿವಿಧ ರಾಜ್ಯ ಹಾಗೂ ಕರ್ನಾಟಕದ ಮಂಗಳೂರು, ಬೆಂಗಳೂರು, ಪುತ್ತೂರು ಸೇರಿದಂತೆ ವಿವಿಧೆಡೆಗಳಿಂದ ಭಕ್ತರು ಪಾಲ್ಗೊಂಡಿದ್ದರು. ಪ್ರಪಂಚದಲ್ಲಿಯೆ ಇದು ಎರಡನೆ ಮಹಾ ಕಾಳ ಸರ್ಪ ಯಾಗವಾಗಿದೆ. ಕಳೆದ ಬಾರಿ ಘಾಟಿ ಸುಬ್ರಮಣ್ಯದಲ್ಲಿ ನಡೆಸಲಾಗಿತ್ತು.
ಇದೇ ಸಂದರ್ಭದಲ್ಲಿ ನಾಗದೋಷ ಪರಿಹಾರ ಸರ್ಪಮುದ್ರೆ ಮಂತ್ರ ಪುಸ್ತಕವನ್ನು ಅರಮೇರಿ ಕಳಂಚೇರಿ ಮಠಾಧೀಶ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಬಿಡುಗಡೆಗೊಳಿಸಿದರು. ಸಾಯಿ ಭಿಕ್ಷಾ ಕೇಂದ್ರದ ಅರ್ಚಕ ಹರಿಪ್ರಸಾದ್ ಶಾಸ್ತ್ರಿ, ಪ್ರಧಾನ ಕಾರ್ಯದರ್ಶಿ ಕಾಕಮಾಡ ರವಿ ಸುಬ್ಬಯ್ಯ, ಜಿಲ್ಲಾ ಪ್ರಾದೇಶಿಕ ಪ್ರಮುಖ ಕೊಕ್ಕೇಂಗಡ ವಿಕ್ಕಿ ಚಂಗಪ್ಪ, ಕಾಳಬೈರವೇಶ್ವರ ದೇವಾಲಯದ ಭಕ್ತಾಧಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.