ಸಿದ್ದಾಪುರ, ಅ. 1: ಮಾಲ್ದಾರೆ ಗ್ರಾಮ ಪಂಚಾಯಿತಿಯ ಬಾಣಂಗಾಲ ಮಠ ಹಾಗೂ ಹುಂಡಿ ಗ್ರಾಮದಲ್ಲಿ ಸದಸ್ಯರ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಜಿ.ಪಂ. ಸದಸ್ಯೆ ಲೀಲಾವತಿ ಚಾಲನೆ ನೀಡಿದರು

ಕಳೆದ ಹಲವು ವರ್ಷಗಳಿಂದ ಗ್ರಾಮೀಣ ರಸ್ತೆಗಳು ಹದಗೆಟ್ಟ ಹಿನ್ನೆಲೆ ಗ್ರಾಮಸ್ಥರ ಮನವಿಗೆ ಸ್ವಂದಿಸಿ ಮಠ ಗ್ರಾಮದ ಮುಖ್ಯ ರಸ್ತೆಗೆ ರೂ. 2 ಲಕ್ಷ ಹಾಗೂ ಹುಂಡಿ ಗ್ರಾಮದ ಮಸೀದಿಗೆ ತೆರಳುವ ಮುಖ್ಯ ರಸ್ತೆಗೆ ರೂ. 3 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಕಾಂಗ್ರೆಸ್ ಹಿರಿಯ ಮುಖಂಡ ಪಿ.ಸಿ. ಹಸೈನಾರ್ ಹಾಜಿ ಮಾತನಾಡಿ, ಗ್ರಾಮಾಭಿವೃದ್ಧಿಗೆ ಪಕ್ಷ ಭೇದ ಮರೆತು ಅಭಿವೃದ್ಧಿಗೆ ಶ್ರಮಿಸಬೇಕೆಂದು ಹೇಳಿದರು. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಗ್ರಾಮಸ್ಥರು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ನಿಯೋಗ ತೆರಳಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಹೆಚ್ಚು ಅನುದಾನ ತರಲು ಮುಂದಾಗುವದಾಗಿ ಹೇಳಿದರು

ಈ ಸಂದರ್ಭ ತಾ.ಪಂ. ಸದಸ್ಯೆಯರಾದ ಚಿನ್ನಮ್ಮ, ಕಾವೇರಮ್ಮ, ಗ್ರಾ.ಪಂ. ಸದಸ್ಯರುಗಳಾದ ಮುತ್ತಪ್ಪ, ಉಮೇಶ್, ಸೇವಾದಳದ ಕಾರ್ಯದರ್ಶಿ ಗಾಯಿತ್ರಿ, ವಲಯ ಕಾಂಗ್ರೆಸ್ ಅಧ್ಯಕ್ಷ ವಾಟೇರಿರ ಸುರೇಶ್ ಸೋಮಯ್ಯ, ಜಿಲ್ಲಾ ಕಾಂಗ್ರೆಸ್ ಮುಖಂಡ ಪೋಕುಟ್ಟಿ ಹಾಜಿ, ಪರಿಶಿಷ್ಟ ವರ್ಗದ ಅಧ್ಯಕ್ಷ ಲೋಕೇಶ್ ಕುಮಾರ್, ಸ್ಥಳೀಯರಾದ ಸಿ.ಎ. ಹಂಸ, ಹೇಮಚಂದ್ರ, ಸೋಮಯ್ಯ, ಅಜ್ಜಿನಿಕಂಡ ರಾಜು ಅಪ್ಪಯ್ಯ, ಅಬೂಬಕರ್, ಮೊಹಮ್ಮದಾಲಿ, ಬಾವ ಮಾಲ್ದಾರೆ, ಅದ್ರಮಾನ್ ಸೇರಿದಂತೆ ಮತ್ತಿತರರು ಹಾಜರಿದ್ದರು.