ವೀರಾಜಪೇಟೆ,ಆ.31: ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅರಸುನಗರದಲ್ಲಿ ಮೆಟ್ಟಿಲು ನಿರ್ಮಾಣದ ಕಾಮಗಾರಿ ಗುಣಮಟ್ಟ ದಿಂದ ಕೂಡಿದ್ದು, ಕಳಪೆಯಾಗಿಲ್ಲ ಎಂದು ಅರಸುನಗರದ ನಿವಾಸಿಗಳ ಪರವಾಗಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಎನ್. ವೀರಭದ್ರಯ್ಯ ತಿಳಿಸಿದ್ದಾರೆ.
ಇಲ್ಲಿನ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ವೀರಭದ್ರಯ್ಯ ಅವರು, ಗುತ್ತಿಗೆದಾರರು ಹಾಗೂ ಅಲ್ಲಿನ ನಿವಾಸಿ ನಿತಿನ್ ಎಂಬವರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ವಿವಾದ ಉಂಟಾಗಿದ್ದು, ಇದರ ದ್ವೇóಷ ಸಾಧನೆಗಾಗಿ ನಿತಿನ್ ವೀರಾಜಪೇಟೆಗೆ ಉಸ್ತುವಾರಿ ಸಚಿವರು ಬಂದಿದ್ದಾಗ ಕಾಮಗಾರಿ ಕಳಪೆಯಾಗಿದೆ ಎಂದು ದೂರು ನೀಡಿದ ನಂತರ ತಾಂತ್ರಿಕ ತಜ್ಞರಿಂದ ಪರಿಶೀಲನೆ ನಡೆಸಲಾಯಿತು.
ಅರಸು ನಗರದ ನಿವಾಸಿಗಳು ಎಂದಿಗೂ ಅಭಿವೃದ್ಧಿ ಕಾಮಗಾರಿಗೆ ಉತ್ತೇಜನ ನೀಡುತ್ತಾರೆಯೇ ವಿನ: ಹಿನ್ನಡೆಗೆ ಅವಕಾಶ ನೀಡುವದಿಲ್ಲ ಎಂದು ತಿಳಿಸಿದರು. ಗೋಷ್ಠಿಯಲ್ಲಿ ದಲಿತ ಸಂಘಟನೆಯ ಪರವಾಗಿ ಎಚ್.ಕೆ.ಗಣೇಶ್, ನಿವಾಸಿಗಳ ಪರವಾಗಿ ಕೃಷ್ಣ, ಜೋಸೆಫ್ ಮತ್ತಿತರರು ಹಾಜರಿದ್ದರು.