ಮಡಿಕೇರಿ, ಅ. 15: ರಾಯಚೂರಿನಲ್ಲಿ ಡಿಸೆಂಬರ್ ತಿಂಗಳ 2, 3, 4 ರಂದು 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದ್ದು, ಈ ಸಮ್ಮೇಳನಕ್ಕೆ ಆಗಮಿಸಲಿಚ್ಚಿಸುವ ಜಿಲ್ಲೆಯ ಪ್ರತಿನಿಧಿಗಳು ನವೆಂಬರ್ 1 ರೊಳಗಾಗಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬಹುದಾಗಿದೆ.
ಪ್ರತಿನಿಧಿ ಶುಲ್ಕ 250 ರೂ.ಗಳಿದ್ದು, ಪೂರ್ಣ ವಿಳಾಸದೊಂದಿಗೆ ಖುದ್ದಾಗಿ ಅಥವಾ ಅಂಚೆ ಮುಖಾಂತರ ಕನ್ನಡ ಸಾಹಿತ್ಯ ಪರಿಷತ್, ಕೋಟೆ ಆವರಣ, ಮಡಿಕೇರಿ ಅಥವಾ ಬಿ.ಎಸ್. ಲೋಕೇಶ್ ಸಾಗರ್, ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ದೂರವಾಣಿ ಸಂಖ್ಯೆ-8277066123 ಅನ್ನು ಸಂಪರ್ಕಿಸಬಹುದು.