ಕುಶಾಲನಗರ, ಡಿ. 22: ಕುಶಾಲನಗರದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಆಹಾರ ಸಮಿತಿಯ ಪೂರ್ವಭಾವಿ ಸಭೆ ಆಹಾರ ಸಮಿತಿ ಅಧ್ಯಕ್ಷ ಕೆ.ಸಿ. ನಂಜುಂಡಸ್ವಾಮಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಎರಡು ದಿನಗಳ ಕಾಲ ಸಮ್ಮೇಳನದ ಭೋಜನ ವ್ಯವಸ್ಥೆ ಬಗ್ಗೆ ಚರ್ಚೆ ನಡೆಯಿತು. ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕÀ ಕೆ.ಟಿ ಅರುಣ್ ಕುಮಾರ್ ಮಾತನಾಡಿ, ಹಾಸನ ಹಾಲು ಒಕ್ಕೂಟದಿಂದ ಸಮ್ಮೇಳನದ ಆಹಾರ ಸಮಿತಿಗೆ ಹಾಲನ್ನು ಒದಗಿಸುವ ಭರವಸೆ ನೀಡಿದರು.
ಸಭೆಯಲ್ಲಿ ಸಮಿತಿಯ ನಿರ್ದೇಶಕರುಗಳಾದ ಮಣಿಯಮ್ಮ, ಕಾವೇರಿ ಕಲಾ ಪರಿಷತ್ತಿನ ಅಧ್ಯಕ್ಷ ಕೆ.ಜೆ ಸತೀಶ್, ಶನಿವಾರಸಂತೆ ಕ.ಸಾ.ಪದ ಸದಸ್ಯ ಶಿವಣ್ಣ, ಮುಳ್ಳುಸೋಗೆ ಗ್ರಾ.ಪಂ ಸದಸ್ಯ ಜಗದೀಶ್, ದೊಡ್ಡಣ್ಣ, ಪ್ರಮುಖರಾದ ಎಂ.ಕೆ ಹನುಮರಾಜ್, ನವನೀತ್, ಜೆ.ಎನ್ ಪಳಂಗಪ್ಪ, ಸಿ.ವಿ ವಿಶ್ವನಾಥ್, ಕೆ. ರಾಮ್‍ದಾಸ್, ವಿ.ಡಿ ಪುಂಡರೀಕಾಕ್ಷ, ಸುನಿಲ್ ಮಂಜುನಾಥ್, ಜಿಲ್ಲಾ ಸಮಿತಿಯ ನಿರ್ದೇಶಕರುಗಳು ಉಪಸ್ಥಿತರಿದ್ದರು.