ಮಡಿಕೇರಿ, ನ. 1: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೋಟೆ ಆವರಣದಲ್ಲಿರುವ ಪರಿಷತ್ತು ಕಚೇರಿಯಲ್ಲಿ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಡಾ. ಸುಭಾಶ್ ನಾಣಯ್ಯ, ಕೆ.ಎಸ್. ರಮೇಶ್, ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ಕಾರ್ಯದರ್ಶಿ ಕೂಡಕಂಡಿ ದಯಾನಂದ, ಪರಿಷತ್ ಪದಾಧಿಕಾರಿಗಳಾದ ಅಶ್ವತ್ಥ, ನಾಗರಾಜ ಶೆಟ್ಟಿ, ಫಿಲಿಪ್ ವಾಸ್, ಪರ್ಲಕೋಟಿ ಸುನಿತ, ಕೋಡಿ ಚಂದ್ರಶೇಖರ್, ಅಲ್ಲಾರಂಡ ವಿಠಲ್ ನಂಜಪ್ಪ, ಅಬ್ದುಲ್ಲ, ಪರಿಷತ್ ಪದಾಧಿಕಾರಿಗಳು, ಸಿಬ್ಬಂದಿಗಳಾದ ತನುಶ್ರೀ, ಪಮಿತ ಇನ್ನಿತರರು ಪಾಲ್ಗೊಂಡಿದ್ದರು.