ಕರಿಕೆ, ಆ. 1: ಕೊಡಗು-ಕೇರಳ ಗಡಿ ಪ್ರದೇಶವಾದ ಕರಿಕೆಯಲ್ಲಿ ಕೋಟ್ಯಂತರ ಮೌಲ್ಯದ ಬೀಟಿ ಮರ ಹನನವಾಗಿದ್ದು ಆರೋಪಿಗಳು ರಾತೋರಾತ್ರಿ ಮರಗಳನ್ನು ಕಡಿದು ಕೇರಳಕ್ಕೆ ಒಯ್ದಿದ್ದಾರೆ. ಈ ಸಂಬಂಧ ಭಾಗಮಂಡಲ ವಿಭಾಗದ ಅರಣ್ಯಾಧಿಕಾರಿಗಳು ಜಾಗೃತರಾಗಿದ್ದು, ಮರ ಹಾಗೂ ಆರೋಪಿಗಳ ವಶಕ್ಕೆ ಕಾರ್ಯ ಪ್ರವೃತ್ತರಾಗಿದ್ದು, ಕೇರಳಕ್ಕೆ ದೌಡಾಯಿಸಿದ್ದಾರೆ.
ಕರಿಕೆಯ ಚೆತ್ತುಕಾಯ ಪಚ್ಚೆ ತಿಲಾವು ಎಂಬಲ್ಲಿ ಸ.ನಂ 425/1 ಪಿ 2 ರ 4 ಎಕರೆ ಜಾಗ ಕಂದಾಯ ಇಲಾಖೆಗೆ ಸೇರಿದ್ದು ಈ ಜಾಗವನ್ನು ಕರಿಕೆ ಪಂಚಾಯ್ತಿಯು ಕಸ ವಿಲೇವಾರಿ ಹಾಗೂ ಸಾರ್ವಜನಿಕ ಸ್ಮಶಾನ ನಿರ್ಮಾಣಕ್ಕೆ ಬಳಸಿಕೊಳ್ಳಲು ಕೇಳಿದ್ದು ಈ ಸಂಬಂಧ ಕಂದಾಯಾಧಿಕಾರಿಗಳಿಂದ ಪಂಚಾಯ್ತಿಗೆ ಜಾಗ ಮಂಜೂರಾತಿಗಾಗಿ ಕಡತಗಳ ಪರಿಶೀಲನಾ ಕಾರ್ಯ ನಡೆಯುತ್ತಿದೆ. ಈ ನಡುವೆ ಇದೇ ಜಾಗದಲ್ಲಿದ್ದ ಬೆಲೆ ಬಾಳುವ ಬೀಟಿ ಮರಗಳನ್ನು ರಾತೋರಾತ್ರಿ ಕಡಿದು ಕೇರಳಕ್ಕೆ ಸಾಗಾಟ ಮಾಡಲಾಗಿದೆ. ಈ ಜಾಗದ ಸನಿಹದಲ್ಲಿಯೇ ವೈಟ್ ಓಷನ್ ಪ್ಲಾಂಟೇಶನ್ ಲಿಮಿಟೆಡ್ ಗೆ ಸೇರಿದ 44 ಎಕರೆ ರಬ್ಬರ್ ತೋಟವಿದೆ. ಇದೀಗ ಈ ಸಂಸ್ಥೆಯ ವಿಜು ಮ್ಯಾಥಿವ್ ಹಾಗೂ ಅಬ್ರಹಾಂ ಎಂಬವರುಗಳು ಸನಿಹದ ಕಂದಾಯ ಇಲಾಖಾ ಜಾಗದಲ್ಲಿ ಬೆಳೆದಿದ್ದ ಬೀಟಿ ಮರಗಳನ್ನು ಕಡಿದು ಕೇರಳದ ತಳಿ ಪರಂಬುವಿಗೆ ಸಾಗಾಟಗೊಳಿಸಿರುವದಾಗಿ ಆರೋಪಿಸಲಾಗಿದೆ. ಅರಣ್ಯ ವಲಯಾಧಿಕಾರಿ ಚೆÀಂಗಪ್ಪ್ಪ ಹಾಗೂ ಉಪ ವಲಯ ಅರಣ್ಯಾಧಿಕಾರಿ ಪಿ.ಟಿ.ಶಶಿ ಅವರುಗಳು ಈ ಸಂಬಂಧ ಕಾರ್ಯೋನ್ಮುಖರಾಗಿದ್ದಾರೆ. ಅರಣ್ಯ ಸಿಬ್ಬಂದಿ ಕೇರಳಕ್ಕೆ ತೆರಳಿದ್ದು ಸಾಗಾಟಗೊಳಿಸಿದÀ ಮರಗಳನ್ನು ವಶಪಡಿಸಿಕೊಳ್ಳಲು ಹಾಗೂ ಆರೋಪಿಗಳ ಬಂಧನಕ್ಕೆ ಪ್ರಯತ್ನ ನಡೆದಿದೆ.
ಕರಿಕೆಯಲ್ಲಿ 11 ಸಾವಿರ ಎಕರೆ ಅರಣ್ಯ ಪ್ರದೇಶವಿದೆ. ಆದರೆ, ಇಲ್ಲಿ ಬೆರಳೆಣಿಕೆÀಯ ಅರಣ್ಯ ಸಿಬ್ಬಂದಿಯಿದ್ದು ಇವರಿಗೆ ಅರಣ್ಯ ಸಂರಕ್ಷಣಾ ಕಾರ್ಯ ಅಸಾಧ್ಯವಾದ ಮಾತು.
ಕಡಿದ ಮರಗಳ ತಲಾ 7 ಅಡಿ ಉದ್ದದ ತುಂಡಿಗೆ ಕೇರಳದಲ್ಲಿ ರೂ. 15 ಲಕ್ಷ ದರ ದೊರಕುತ್ತದೆ. ಈಗಾಗಲೇ ಆರೋಪಿಗಳು ಕಡಿದ ಎಲ್ಲ ಮರಗಳನ್ನು ಮಾರಾಟಮಾಡಿರುವದಾಗಿಯೂ ಶಂಕಿಸಲಾಗಿದೆ. ಸಾಗಾಟಗೊಳಿಸಲಾದ ಭಾರೀ ಮೌಲ್ಯದ ಮರಗಳನ್ನು ವಶಪಡಿಸಿಕೊಳ್ಳಲು ಹಾಗೂ ಆರೋಪಿಗಳಿಬ್ಬರ ಶೀಘ್ರ ಬಂಧನಕ್ಕೆ ಕ್ರಮ ಕೈಗೊಂಡಿರುವದಾಗಿ ಅಧಿಕಾರಿಗಳು ‘ಶಕ್ತಿ” ಗೆ ತಿಳಿಸಿದ್ದಾರೆ.
ಕರಿಕೆಯಲ್ಲಿ ಅರಣ್ಯ ಗÉೀಟ್ ಒಂದಿದ್ದು ಇಲ್ಲಿಯೂ ಕೇವಲ ಓರ್ವ ಸಿಬ್ಬಂದಿ ಮಾತ್ರÀ ನಿಯೋಜಿತವಾಗಿದ್ದು, ಈ ಗೇಟಿನಲ್ಲಿಯೇ ರಾತ್ರಿ ವೇಳೆ ಮರಗಳು ರಾಜಾರೋಷವಾಗಿ ಲಾರಿಗಳಲ್ಲಿ ಸಾಗಾಟವಾಗಿರುವದೇ ಇದಕ್ಕೆ ಸಾಕ್ಷಿಯಾಗಿದೆ. ಈ ಹಿಂದೆ ಅನುಚೇತ್ ಅವರು ಜಿಲ್ಲೆಯ ಎಸ್.ಪಿಯಾಗಿದ್ದಾಗ ಕರಿಕೆಯಲ್ಲಿನ ಅಕ್ರಮ ಚಟುವಟಿಕೆಗಳನ್ನು ಹತ್ತಿಕ್ಕಲು ಮುಂಡ್ರೋಟು ಪ್ರದೇಶದಲ್ಲಿ ಒಂದು ಕೆ.ಎಸ್. ಆರ್. ಪಿ. ತುಕಡಿಯನ್ನು ನೆಲೆಗೊಳಿಸಿದ್ದರು. ಅಲ್ಲದೆ,ಅರಣ್ಯ ಗೇಟಿನಲ್ಲಿ ಸಿ.ಸಿ.ಟಿ.ವಿ ಅಳವಡಿಸಿದ್ದರು. ಇದರಿಂದಾಗಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿತ್ತು. ಅನುಚೇತ್ ಅವರು ವರ್ಗಾವಣೆಗೊಂಡ ಬಳಿಕ ಕೆ.ಎಸ್. ಆರ್.ಪಿ ಯನ್ನೂ ಹಿಂತೆÉಗೆದುಕೊಳ್ಳಲಾಗಿದೆ. ಅಲ್ಲದೆ, ಅರÀಣ್ಯ ಗೇಟಿನಲ್ಲಿ ಅಳವಡಿಸಲಾಗಿದ್ದ ಸಿ.ಸಿ.ಟಿ.ವಿಯನ್ನೂ ತೆಗೆದು ಹಾಕಲಾಗಿದೆÀ. ಇದರಿಂದಾಗಿ ಕರಿಕೆ ಗಡಿ ಪ್ರದೇಶದಲ್ಲಿ ಮರಗಳ ಹನÀನ, ಅರಣ್ಯ ಸಂಪತ್ತು ಲೂಟಿ ನಿರಂತರವಾಗಿ ನಡೆಯುತ್ತಿರುವದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ.