ವೀರಾಜಪೇಟೆ, ಆ. 25: ಕೇರಳದ ಕ್ಯಾಲಿಕಟ್‍ನಲ್ಲಿ ಇತ್ತೀಚೆಗೆ ನಡೆದ 22ನೇ ಅಖಿಲ ಭಾರತ ಶಿಟೋರಿಯೋ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ವೀರಾಜಪೇಟೆ ಕಾವೇರಿ ಶಾಲೆಯ ವಿದ್ಯಾರ್ಥಿಗಳಾದ ಕೆ.ಸಿ. ಪೊನ್ನಣ್ಣ ಬೆಳ್ಳಿ ಪದಕ ಹಾಗೂ ಪಿ.ಎ. ಅಯ್ಯಪ್ಪ, ಪಿ.ಎಸ್. ಪೂವಣ್ಣ, ಕೆ.ಜೆ. ತನುಷ್ ಕಂಚಿನ ಪದಕ ಗಳಿಸಿರುತ್ತಾರೆ. ಇವರು ಕರಾಟೆ ಪಟು ಕೆ.ಪಿ. ಸೋಮಣ್ಣ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಮುಖ್ಯ ಶಿಕ್ಷಕಿ ಬಿ.ಯು. ಪೊನ್ನಮ್ಮ ಹಾಗೂ ಸಹ ಶಿಕ್ಷಕಿ ಪಿ.ಯು. ಪಾರ್ವತಿ ಹಾಜರಿದ್ದರು.