ಸೋಮವಾರಪೇಟೆ,ನ.28: ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ಕ್ರಮದಿಂದಾಗಿ ದೇಶದಲ್ಲಿ ಕಪ್ಪು ಹಣಕ್ಕೆ ಕಡಿವಾಣ ಬೀಳುತ್ತಿದೆ. ಈ ಸಮಯದಲ್ಲಿ ಕ್ಷುಲ್ಲಕ ವಿಚಾರವನ್ನು ಇಟ್ಟುಕೊಂಡು ಕಾಂಗ್ರೆಸ್ನವರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಪ್ಪು ಹಣವನ್ನು ಇಟ್ಟುಕೊಂಡವರು ಆಕ್ರೋಶ್ ದಿವಸ್ ಆಚರಿಸುತ್ತಿದ್ದಾರೆ ಎಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಟೀಕಿಸಿದರು.ನಗರದಲ್ಲಿ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಆಯೋಜಿಸ ಲಾಗಿದ್ದ ಸಂಭ್ರಮ್ ದಿವಸ್ ಪ್ರಯುಕ್ತ ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಬಿಜೆಪಿ ಕಾರ್ಯ ಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ದೇಶದಲ್ಲಿ ರೂ. 500 ಮತ್ತು 1000 ಮೌಲ್ಯದ ನೋಟುಗಳನ್ನು ಅಪಮೌಲ್ಯಗೊಳಿಸಿದ ನಂತರ ದೇಶದಲ್ಲಿ
(ಮೊದಲ ಪುಟದಿಂದ) ಭಯೋತ್ಪಾದಕ ಕೃತ್ಯಗಳು ತಗ್ಗಿವೆ. ನೋಟು ನಿಷೇಧದಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂನ ವ್ಯವಹಾರವೂ ಮಂಕಾಗಿದೆ. ನೋಟು ನಿಷೇಧದಿಂದ ಇಡೀ ದೇಶವೇ ನರೇಂದ್ರ ಮೋದಿ ಅವರ ಕ್ರಮಕ್ಕೆ ಹೆಮ್ಮೆ ಪಡುತ್ತಿದ್ದರೆ, ಕಾಂಗ್ರೆಸ್ನ ಕೆಲವರು ಪ್ರತಿಭಟನೆ ಮಾಡುತ್ತಿರುವದು ಖಂಡನೀಯ ಎಂದು ರಂಜನ್ ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ನರೇಂದ್ರ ಮೋದಿ ಅವರು ಚುನಾವಣಾ ಪೂರ್ವದಲ್ಲಿ ಕಪ್ಪುಹಣ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವದಾಗಿ ಘೋಷಿಸಿದ್ದರು. ಅದರಂತೆ ಇಂದು ದಿಟ್ಟ ಕ್ರಮ ಕೈಗೊಂಡಿದ್ದು, ಇದಕ್ಕೆ ದೇಶದ ಪ್ರತಿಯೋರ್ವರೂ ಕೈಜೋಡಿ¸ Àಬೇಕಿದೆ. ಮೋದಿ ಅವರ ಕ್ರಮದಿಂದ ಬಡವರ ಮೊಗದಲ್ಲಿ ಹರ್ಷ ಮೂಡಿದ್ದು, ದೇಶದಲ್ಲಿ ಆರ್ಥಿಕ ಸಮಾನತೆ ಕಾಣುವ ಸ್ಪಷ್ಟ ಸೂಚನೆ ಸಿಕ್ಕಿದೆ. ಆದರೆ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಪರವಾಗಿ ಪ್ರತಿಭಟನೆ ನಡೆಸುತ್ತಿದೆ ಎಂದು ದೂರಿದರು.
ಇದಕ್ಕೂ ಮುನ್ನ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಮೆರವಣಿಗೆ ನಡೆಸಿ, ನರೇಂದ್ರ ಮೋದಿ ಪರವಾಗಿ ಜಯಘೋಷ ಮೊಳಗಿಸಿದರು. ಬ್ಯಾಂಕ್ ಶಾಖೆಗಳಿಗೆ ತೆರಳಿ ಅಲ್ಲಿನ ವ್ಯವಸ್ಥಾಪಕರು, ಸಿಬ್ಬಂದಿಗಳಿಗೆ ಗುಲಾಬಿ ಹೂವು ಹಾಗೂ ಸಿಹಿ ವಿತರಿಸಿದರು.
ಈ ಸಂದರ್ಭ ಬಿಜೆಪಿ ಪ್ರಮುಖರುಗಳಾದ ಶುಂಠಿ ಸುರೇಶ್, ಮನುಕುಮಾರ್ ರೈ, ನಳಿನಿ ಗಣೇಶ್, ಸುಮಾ ಸುದೀಪ್, ಸೋಮೇಶ್, ರಮೇಶ್, ಮಹೇಶ್, ಕಿಬ್ಬೆಟ್ಟ ಮಧು, ಕೊಮಾರಿ ಸತೀಶ್, ಕೆ.ಕೆ. ಸುಧಾಕರ್ ಸೇರಿದಂತೆ ಇತರರು ಭಾಗವಹಿಸಿದ್ದರು.