ಸುಂಟಿಕೊಪ್ಪ, ನ. 10: ಕನ್ನಡ ಭಾಷೆ ಸಂಸ್ಕøತಿ ಆಚಾರ-ವಿಚಾರಗಳ ಬಗ್ಗೆ ಹಿಂದಿನ ತಲೆ ಮಾರಿನ ಸಾಹಿತ್ಯಾಸಕ್ತರು ಕನ್ನಡಾಭಿಮಾನಿಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಇಂದಿನ ಯುವ ಪೀಳಿಗೆ ಮುನ್ನಡೆದರೆ ಕನ್ನಡಭಾಷೆ ಉಚ್ಚ್ರಾಯ ಸ್ಥಿತಿಗೆ ತಲಪಲಿದೆ ಎಂದು ಸುಂಟಿಕೊಪ್ಪ ಕಸಾಪ ಅಧ್ಯಕ್ಷ ಎಂ.ಎಸ್. ಸುನಿಲ್ ಹೇಳಿದರು.
ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕನ್ನಡ ಚಿಗುರು ಹಾಗೂ ಕನ್ನಡ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ಕನ್ನಡ ಭಾಷೆಯ ಅಳಿವು-ಉಳಿವು ಯುವ ಜನಾಂಗದ ಮೇಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಯುವಕ-ಯುವತಿಯರು ಚಿಂತನ ಮಂಥನ ನಡೆಸಬೇಕಾದ ಅಗತ್ಯತೆ ಇದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದೆಹಲಿ ಕನ್ನಡ ಸಂಘದ ಅಧ್ಯಕ್ಷ ನಿಡ್ಯಮಲೆ ಮಾಧವ ಮಾತನಾಡಿ, ಇತರ ಭಾಷೆಗಳಿಗೆ ಎಷ್ಟು ಮಹತ್ವ ನಮ್ಮ ದೇಶದಲ್ಲಿದೆಯೋ ಅಷ್ಟೇ ಮಹತ್ವ ಕನ್ನಡ ಭಾಪೆಗೂ ಇದೆ. ನಾಗರಿಕ ಸೇವಾ ಪರೀಕ್ಷೆಗಳು ಕನ್ನಡದಲ್ಲೇ ನಡೆಯುವದು ಅದಕ್ಕೆ ಸಾಕ್ಷಿಯಾಗಿದೆ ಎಂದರು.
ಸೋಮವಾರಪೇಟೆ ತಾಲೂಕು ಕಸಾಪ ಸದಸ್ಯ ಪಿ.ಎಫ್. ಸಬಾಸ್ಟಿನ್ ಮಾತನಾಡಿ, ಕನ್ನಡ ಭಾಷೆಗೆ ತನ್ನದೇ ಆದ ಮಹತ್ವ ಇದೆ. ಕನ್ನಡ ಹಳೆಯ ಶಾಸನಗಳು ಕವಿವರ್ಯರ ಕೃತಿಗಳೇ ಇದನ್ನು ಸಾಬೀತು ಪಡಿಸಿದೆ ಎಂದರು.
ಸುಂಟಿಕೊಪ್ಪ ಹೋಬಳಿ ಕಸಾಪ ಮಾಜಿ ಅಧ್ಯಕ್ಷ ಚುಟುಕು ಸಾಹಿತ್ಯ ಅಧ್ಯಕ್ಷರಾದ ವಹೀದ್ ಜಾನ್ ಮಾತನಾಡಿ, ಕನ್ನಡ ಸಂಘದ ‘ಚಿಗುರು’ ಕವಲೊಡೆಯುತ್ತಿದ್ದು ಕನ್ನಡ ಭಾಷೆ ಬೆಳೆವಣಿಗೆಗೆ ಪೂರಕ ವೇದಿಕೆ ಕಲ್ಪಿಸಿದೆ ಎಂದರು.
ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಂಕನ ವೈ. ಕರುಂಬಯ್ಯ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕಿ ಸುಕನ್ಯಾ ಪ್ರಾಸ್ತಾವಿಕ ನುಡಿಯಾಡಿದರು. ಕನ್ನಡ ಏಕೀಕರಣಗೊಂಡು 60 ವರ್ಷ ತುಂಬಿದೆ. ಇದಕ್ಕೆ ಹಲವು ನಾಯಕರು, ಕನ್ನಡಿಗರು ಕಾರಣರಾಗಿದ್ದಾರೆ. ಆದರೆ ಇಂದು ಕನ್ನಡ ನಶಿಸಿ ಹೋಗುತ್ತಿದೆ. ಅದಕ್ಕೆ ಯುವಕರು ಜೀವ ತುಂಬಬೇಕು. ಕನ್ನಡದ ಸಾಹಿತ್ಯ, ಕಾದಂಬರಿಗಳನ್ನು ಓದುವದರ ಮೂಲಕ ಕನ್ನಡವನ್ನು ಉಳಿಸಿ-ಬೆಳೆಸಬೇಕು ಎಂದು ಸುನಿಲ್ ಹೇಳಿದರು.
ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸದಸ್ಯ ಪಿ.ಎಫ್. ಸಭಾಸ್ಟೀನ್ ಮಾತನಾಡಿ, ಕನ್ನಡಕ್ಕೆ ತನ್ನದೇ ಆದ ಮಹತ್ವವಿದೆ. ದೊರೆತಿರುವ ಹಲವಾರು ಶಾಸನಗಳು, ಕವಿವರ್ಯರಿಗೆ ದೊರಕಿರುವ ಪ್ರಶಸ್ತಿಗಳೆ ಕನ್ನಡಕ್ಕೆ ಎಷ್ಟೊಂದು ಇತಿಹಾಸವಿದೆ ಎಂಬದನ್ನು ಸಾಕ್ಷೀಕರಿಸುತ್ತದೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವೈ.ಎಂ. ಕರುಂಬಯ್ಯ, ಕನ್ನಡ ಉಪನ್ಯಾಸಕಿ ಸುಕನ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಸೋಮಚಂದ್ರ ವಹಿಸಿದ್ದರು.
ಕನ್ನಡ ಸಂಘದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಕೊಡಗು ಜಿಲ್ಲಾ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೋಮಶೇಖರ್, ಕೊಡಗು ಜಿಲ್ಲಾ ಕಸಾಪ ಸದಸ್ಯ ಫಿಲಿಪ್ ವಾಸ್ ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡಿದರೆ, ನಿಕ್ಷಿತಾ ಸ್ವಾಗತಿಸಿ, ದೀಪ ವಂದಿಸಿ, ಐಶ್ವರ್ಯ ನಿರೂಪಿಸಿದರು.