ಮಡಿಕೇರಿ, ಡಿ. 4: ಜಿಲ್ಲೆಯ ಕೆಲವು ಕಡೆ ಅಶಾಂತಿಯ ವಾತಾವರಣ ಮರುಕಳಿಸುತ್ತಿದ್ದು, ಕಾನೂನÀನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಕಿಡಿಗೇಡಿಗಳು ಮತ್ತಷ್ಟು ದುಷ್ಕøತ್ಯಗಳನ್ನು ನಡೆಸುವ ಸಾಧ್ಯತೆಗಳಿದೆ ಎಂದು ಜಿಲ್ಲಾ ಕಾಂಗ್ರೆಸ್‍ನ ಕಾರ್ಮಿಕ ಘಟಕದ ಅಧ್ಯಕ್ಷ ವಿ.ಪಿ. ಶಶಿಧರ್ ಆತಂಕ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರಪೇಟೆ ತಾಲೂಕಿನ ಹೊಸತೋಟದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಬಗ್ಗೆ ಪೊಲೀಸ್ ಇಲಾಖೆ ತಕ್ಷಣ ಎಚ್ಚೆತ್ತುಕೊಳ್ಳಬೇಕೆಂದು ಒತ್ತಾಯಿಸಿದರು. ಗ್ರಾಮದಲ್ಲಿ ಮತೀಯ ಸೂಕ್ಷ್ಮ ವಿಚಾರಗಳು ಬಿಗಡಾಯಿಸುತ್ತಿದ್ದು, ಇದಕ್ಕೆ ದುಷ್ಕøತ್ಯವೆಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವದೆ ಕಾರಣವೆಂದು ಅಭಿಪ್ರಾಯಪಟ್ಟರು.

ಐಗೂರು ಗ್ರಾಮದ ಮಸೀದಿಯಲ್ಲಿ ಕುರ್‍ಆನ್ ಸುಟ್ಟ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾದ ಕಾರಣ ಶಾಂತಿಯನ್ನು ಕದಡುವ ಅಟ್ಟಹಾಸ ಮುಂದುವರಿದಿದೆ. ಹೊಸತೋಟದಲ್ಲಿ ಎರಡು ಸಮುದಾಯಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳು ಭಿತ್ತಿಪತ್ರ ಅಂಟಿಸಿದ ಘಟನೆಗೆ ಸಂಬಧಿಸಿದಂತೆ ಅಲ್ಲಿನ ಗ್ರಾಮ ಪಂಚಾಯಿತಿ ಸದಸ್ಯ ಕೆ.ಪಿ. ದಿನೇಶ್ ಪೊಲೀಸರಿಗೆ ದೂರು ಸಲ್ಲಿಸುವ ಮೂಲಕ ಸಾಮಾಜಿಕ ಜವಾಬ್ದಾರಿಯ ಕೆಲಸವನ್ನು ಮಾಡಿದ್ದಾರೆ. ಆದರೆ ದಿನೇಶ್ ಅವರ ಮೇಲೆ ಅಕ್ರಮ ಕೂಟ ಕಟ್ಟಿಕೊಂಡ ಗುಂಪು ಪೂರ್ವಾಗ್ರಹ ಪೀಡಿತವಾಗಿ ಹಲ್ಲೆ ನಡೆಸಿರುವದು ಖಂಡನೀಯ. ಬಿಜೆಪಿ ಪಕ್ಷದಲ್ಲಿನ ಜನಾಂಗೀಯ ಆಧಾರದ ಹಿಂದೂ ಮಲೆಯಾಳಿ ಮೋರ್ಚಾದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಹಲ್ಲೆಗೆ ಸಂಬಂಧಿಸಿದಂತೆ ದಿನೇಶ್ ಅವರು ಪೊಲೀಸರಿಗೆ ದೂರು ನೀಡಿದ ಒಂದು ಗಂಟೆಯ ಬಳಿಕ ಮತ್ತೊಬ್ಬಾತ ದಿನೇಶ್ ಅವರಿಂದ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಪ್ರತಿ ದೂರು ದಾಖಲಿಸಿದ್ದಾರೆ. ವರ್ಗ ಸಂಘರ್ಷ ತಪ್ಪಿಸುವ ನಿಟ್ಟಿನಲ್ಲಿ ಗ್ರಾ.ಪಂ. ಸದಸ್ಯ ದಿನೇಶ್ ಅವರ ರಕ್ಷಣೆಗೆ ಪೊಲೀಸ್ ಇಲಾಖೆ ಬಂದಿಲ್ಲವೆಂದು ಶಶಿಧರ್ ಟೀಕಿಸಿದರು.

ಭಾರತೀಯ ಜನತಾ ಪಕ್ಷದೊಂದಿಗೆ ಸೈದ್ಧಾಂತಿಕ ಸಂಘರ್ಷ ಮಾಡುವದರಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗುತ್ತಿರುವದೇ ಇಂತಹ ಅಹಿತಕರ ಘಟನೆಗಳಿಗೆ ಕಾರಣವೆಂದು ವಿಷಾದಿಸಿದÀರು.

ಇನ್ನಾದರು ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳದಿದ್ದಲ್ಲಿ ಅಲ್ಪಸಂಖ್ಯಾತ ಸಮುದಾಯ ದೂರವಾಗುವುದರಲ್ಲಿ ಆಶ್ಚರ್ಯವಿಲ್ಲ. ಜಾತ್ಯತೀತತೆಯ ಛಾಪು ಹೊಂದಿರುವ ಕಾಂಗ್ರೆಸ್ ಅಲ್ಪಸಂಖ್ಯಾತರ ಸಂಕಷ್ಟಗಳಿಗೆ ಸ್ಪಂದಿಸಿ ಅವರನ್ನು ಸಮಾಧಾನಪಡಿಸುವ ನಿಟ್ಟಿನಲ್ಲಿ ಸರಿಯಾಗಿ ನಡೆದುಕೊಂಡಿಲ್ಲವೆಂದು ಟೀಕಿಸಿದರು.

ಐಗೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಆಗ್ರಹಿಸಿದ ಅವರು, ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದರು.

ಇತ್ತೀಚೆಗೆ ಸುಂಟಿಕೊಪ್ಪ ವ್ಯಾಪ್ತಿಯ ನಿವೃತ್ತ ಕಾರ್ಮಿಕರಿಗೆ ಅವರ ನಿವೃತ್ತಿ ವೇತನ ಪಡೆಯಲು ಕುಶಾಲನಗರ ಕೆನರಾ ಬ್ಯಾಂಕ್‍ಗೆ ತೆರಳುವಂತೆ ಸುಂಟಿಕೊಪ್ಪ ಕೆನರಾ ಬ್ಯಾಂಕ್ ಪ್ರಮುಖರು ತಿಳಿಸಿದ್ದಾರೆ. ಇದರಿಂದ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದು, ಸುಂಟಿಕೊಪ್ಪ ಕೆನರಾ ಬ್ಯಾಂಕ್‍ನಲ್ಲಿ ನಿವೃತ್ತಿ ವೇತನ ಪಡೆಯಲು ಅಗತ್ಯ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದಲ್ಲಿ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸುವದಾಗಿ ಶಶಿಧರ್ ತಿಳಿಸಿದರು.

ಗೋಷ್ಠಿಯಲ್ಲಿ ಮಡಿಕೇರಿ ತಾಲೂಕು ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್, ಕುಶಾಲನಗರ ಯುವ ಕಾಂಗ್ರೆಸ್‍ನ ಚಂದನ್, ಏಳನೇ ಹೊಸಕೊಟೆ ಗ್ರಾ.ಪಂ. ಸದಸ್ಯ ಅಬ್ದುಲ್ ಅವಲಕುಟ್ಟಿ, ಸುನಿಲ್ ಉಪಸ್ಥಿತರಿದ್ದರು.