ಮಡಿಕೇರಿ, ನ. 12: ಮಡಿಕೇರಿ ತಾಲೂಕು ಯುವ ಒಕ್ಕೂಟ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಕಾವೇರಿ ಯುವಕ ಸಂಘ, ಈಶ್ವರಿ ಮಹಿಳಾ ಸಮಾಜ ಇದರ ಸಂಯುಕ್ತಾಶ್ರಯದಲ್ಲಿ ಕಗ್ಗೋಡ್ಲು ಗ್ರಾಮದ ದವಸ ಭಂಡಾರದ ಮೈದಾನದಲ್ಲಿ ಬಡ್ಡನ ಕೆ. ಲೋಕೇಶ್ ಕುಟ್ಟಪ್ಪ ಅವರು ಉದ್ಘಾಟನೆ ಮಾಡುವ ಮೂಲಕ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.ಹಲವು ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳಿಗೆ ಶಿಶು ಪ್ರದರ್ಶನ, ಕಾಳು ಹೆಕ್ಕುವದು, ಕಪ್ಪೆ ಕುಪ್ಪಳಿಸುವದು, 50 ಮೀ. ಓಟ, 100 ಮೀ. ಓಟ, ಸಾರ್ವಜನಿಕ ಮಹನೀಯರಿಗೆ 1000 ಮೀ. ಓಟ, ವಯಸ್ಕ ಮಹನೀಯರು ಹಾಗೂ ಮಹಿಳೆಯರಿಗೆ 100 ಮೀ. ಓಟ, ಮಹಿಳೆಯರಿಗೆ ವಿಷದ ಚೆಂಡು ಎಸೆತ, ಮ್ಯೂಸಿಕಲ್ ಬಸ್, ಯುವಕರಿಗೆ ಕೋಳಿ ಜಗಳ, ಹಗ್ಗಜಗ್ಗಾಟ ಆಟೋಟಗಳೊಂದಿಗೆ ಶಾಲಾ ಮಕ್ಕಳಿಗೆ ಪ್ರಬಂಧ ಹಾಗೂ ಚಿತ್ರ ಕಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಕ್ಕಳಿಂದ, ಛದ್ಮವೇಷ, ಕೋಲಾಟ ನೃತ್ಯಗಳು ಗ್ರಾಮಸ್ಥರ ಮನರಂಜಿಸಿದವು. ವೇದಿಕೆಯಲ್ಲಿ ಅಧ್ಯಕ್ಷತೆಯನ್ನು ಮಣವಟ್ಟಿರ ಸಿ. ಕಾವೇರಪ್ಪ ವಹಿಸಿ, ಕ್ರೀಡಾಕೂಟದ ಬಗ್ಗೆ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕೃಷಿ ಪಂಡಿತ ಮಂದ್ರೀರ ತೇಜಸ್, ತಾ.ಪಂ. ಸದಸ್ಯ ಮಂಞÂೀರ ಸಾಬು ತಿಮ್ಮಯ್ಯ, ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ, ಗ್ರಾ.ಪಂ. ಅಧ್ಯಕ್ಷೆ ಮಂದ್ರೀರ ಶಾರದ, ಸದಸ್ಯರಾದ ಪಿಯೂಶ್ ಪೆರೇರಾ ಹಾಗೂ ಹೇಮಾವತಿ ಹಾಜರಿದ್ದರು.

ಇಂದ್ರಕುಮಾರ್ ಸ್ವಾಗತಿಸಿ, ವಂದಿಸಿದರೆ, ಗ್ರಾ.ಪಂ. ಸದಸ್ಯ ಪಿಯೂಶ್ ಪೆರೇರಾ ನಿರೂಪಿಸಿದರು.

-ಚೇತನ್.