ಮಡಿಕೇರಿ, ಆ. 1: ಚೆಟ್ಟಳ್ಳಿಯ ವಿನಾಯಕ ರಿಕ್ರಿಯೇಶನ್ನ್ ಕ್ಲಬ್‍ನ ವತಿಯಿಂದ ಆಗಸ್ಟ್ 7ನೇ ಭಾನುವಾರ “ಕಕ್ಕಡ ಸಂತೋಷ ಕೂಟ” ವನ್ನು ಪೂರ್ವಾಹ್ನ 10 ಗಂಟೆಯಿಂದ ಸಂಘದ ಕಚೇರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.ದಿನಾಂಕ 27ರ ಸಂಜೆ 5ಗಂಟೆಗೆ ಕ್ಲಬ್ ಹಾಲ್‍ನಲ್ಲಿ ನಡೆದ ಮಾಸಿಕ ಸಭೆಯಲ್ಲಿ ಪ್ರತೀ ವರ್ಷದಂತೆ ಕಕ್ಕಡ ತಿಂಗಳಲ್ಲಿ ಸಂಘದ ಸದಸ್ಯರೆಲ್ಲ ಸೇರಿ ನಡೆಸಿಕೊಂಡು ಬರುತ್ತಿರುವ ಕಕ್ಕಡ ಸಂತೋಷ ಕೂಟವನ್ನು ಈ ವರ್ಷವೂ ತಾ. 7ರಂದು ನಡೆಸಲು ತೀರ್ಮಾನಿಸಿ ಅಂದು ಸಂಘದಲ್ಲಿ ಸದಸ್ಯರಿಗೆ ಒಳಾಂಗಣ ಕ್ರೀಡೆ ಹಾಗು ಕಕ್ಕಡದ ವಿಶೇಷ ಭೋಜನ ವ್ಯವಸ್ಥೆ ಏರ್ಪಡಿಸಲಾಗಿದೆ.

ಸಭೆಯಲ್ಲಿ ಕ್ಲಬ್‍ನ ಪದಾಧಿಕಾರಿಗಳಾದ ಮುಳ್ಳಂಡ ರತ್ತುಚಂಗಪ್ಪ, ದಂಬೆಕೋಡಿ ಹರೀಶ್, ಕೆಚ್ಚೆಟ್ಟೀರ ಡಿಕ್ಕಿಅಪ್ಪಯ್ಯ, ಬಲ್ಲಾರಂಡ ಹರೀಶ್ ತಮ್ಮಯ್ಯ, ಪುತ್ತರಿರ ಕಾಳಯ್ಯ, ಪೇರಿಯನ ಘನಶ್ಯಾಂ, ಪುತ್ತರಿರ ರಾಬಿನ್ ಚಂಗಪ್ಪ, ಕೊಳಂಬೆ ವಿನುಕುಮಾರ್, ಪುತ್ತರಿರ ಪಪ್ಪುತಿಮ್ಮಯ್ಯ ಹಾಜರಿದ್ದರು.