ಮಡಿಕೇರಿ, ಡಿ. 25: ಪ್ರತಿಯೊಬ್ಬರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿದರೆ ವಿವಿಧ ರಂಗದಲ್ಲಿ ಯಶಸ್ಸು ಸಾಧಿಸಬಹುದು ಎಂದು ನಗರಸಭೆ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಅಭಿಪ್ರಾಯ ಪಟ್ಟರು. ನಗರದ ಗೌಡ ವಿದ್ಯಾಸಂಘದ ಸಭಾಂಗಣದಲ್ಲಿ ನಡೆದ ಸುದರ್ಶನ ಗೌಡಕೂಟದ 11ನೇ ವಾರ್ಷಿಕ ಸಭೆ ಮತ್ತು ಸಾಂಸ್ಕøತಿಕ ಸಂತೊಷಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಸಮುದಾಯ ಬಾಂಧವರು ಒಟ್ಟಾಗಿ ವಿಶಾಲ ದೃಷ್ಟಿಯಿಟ್ಟುಕೊಂಡು ಕೆಲಸ ನಿರ್ವಹಿಸಬೇಕಿದೆ. ಸಮುದಾಯ ಬಾಂಧವರು ಒಟ್ಟಾಗಿ ಕಾರ್ಯ ನಿರ್ವಹಿಸಿದ್ದಲ್ಲಿ ಆರ್ಥಿಕ, ಸಾಮಾಜಿಕ, ರಾಜಕೀಯ ರಂಗ ಸೇರಿದಂತೆ ವಿವಿಧ ರಂಗದಲ್ಲಿ ಉತ್ತಮ ಕಾರ್ಯ ಮಾಡಬಹುದು ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ

(ಮೊದಲ ಪುಟದಿಂದ) ರಾಜ್ಯ ನೌಕರರ ಸಂಘದ ಅಧ್ಯಕ್ಷ ಕರ್ಣಯ್ಯನ ರವಿ ಮಾತನಾಡಿ, ಒತ್ತಡದ ಜೀವನಗಳ ನಡುವೆಯೂ ಸಂತೋಷ ಕೂಟವನ್ನು ಹಮ್ಮಿಕೊಂಡಿರುವದು ಸಂತಸದ ವಿಚಾರ. ಪ್ರತಿಯೊಬ್ಬರು ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು.

ಯುವಜನತೆ ಕಡಿಮೆ ಇದ್ದು, ನಮ್ಮ ಸಂಸ್ಕøತಿ ಆಚಾರ-ವಿಚಾರ ತಿಳಿಯುವಲ್ಲಿ ಯುವ ಜನತೆ ಪ್ರಾಮುಖ್ಯತೆ ಮಹತ್ವ ಪಡೆದಿದೆ ಎಂದರು. ಸಂಘದ ನಿರ್ದೇಶಕ ಪರಿವಾರ ಅಪ್ಪಾಜಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ಬಳಪದ ಮಂದಣ್ಣ ಸಂಘದ ವಾರ್ಷಿಕ ವರದಿಯನ್ನು ವಾಚಿಸಿದರು. ಬೋಪಯ್ಯ ಲೆಕ್ಕಪತ್ರ ಮಂಡಿಸಿದರು.

ಸಂತೋಷ ಕೂಟದ ಅಂಗವಾಗಿ ಜನಾಂಗ ಬಾಂಧವರಿಂದ ವಿವಿಧ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.