ಮಡಿಕೇರಿ, ಸೆ. 1: ಮಡಿಕೇರಿ ತಾಲೂಕು ಒಕ್ಕಲಿಗರ ಸಂಘದ 2ನೇ ಮಹಾಸಭೆ ಕಾಲೇಜು ರಸ್ತೆಯಲ್ಲಿ ಹೊಟೇಲ್ ರಾಜ್ ರೆಸಿಡೆನ್ಸಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಎಂ.ಆರ್. ಗೋಪಿನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಗೌರವ ಅಧ್ಯಕ್ಷ ವಕೀಲ ಎಂ.ಎ. ನಿರಂಜನ್ ಸ್ವಾಗತಿಸಿದರು. ಕಳೆದ ಸಭೆಯ ವರದಿಯನ್ನು ಪ್ರಧಾನ ಕಾರ್ಯದರ್ಶಿ ಬಿ.ಡಿ. ಪುಟ್ಟರಾಜು ವಾಚಿಸಿದರು. ಖಜಾಂಚಿ ಕೆ. ರಮೇಶ್ ಲೆಕ್ಕಪತ್ರ ಮಂಡಿಸಿದರು. ಮುಂದಿನ 1 ವರ್ಷಕ್ಕೆ ಸಂಘದ ಕಾರ್ಯ ಕಲಾಪಗಳನ್ನು ನಡೆಸುವಲ್ಲಿ ನೂತನ ಸಮಿತಿಯನ್ನು ಒಮ್ಮತದಿಂದ ರಚಿಸಲಾಯಿತು. ಅಧ್ಯಕ್ಷರಾಗಿ ಎಂ.ಪಿ. ಕೃಷ್ಣರಾಜ್ , ಕಾರ್ಯಾಧ್ಯಕ್ಷರಾಗಿ ವಿ.ಪಿ. ಸುರೇಶ್, ಉಪಾಧ್ಯಕ್ಷರಾಗಿ ಬಿ.ಡಿ. ಮಂಜುನಾಥ್, ವಿಜಯಕುಮಾರ್, ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾಗಿ ಬಿ.ಡಿ. ಪುಟ್ಟರಾಜು, ಸಹ ಕಾರ್ಯದರ್ಶಿ ವಿ.ಎ. ಮಂಜುನಾಥ್, ವಿ.ಎಸ್. ಮನುಕುಮಾರ್, ಖಜಾಂಚಿಯಾಗಿ ಕೆ. ರಮೇಶ್ ಹಾಗೂ 12 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನು ನೇಮಕ ಮಾಡಲಾಯಿತು.
ಗೌರವ ಪೋಷಕರುಗಳಾಗಿ ಎಂ.ಪಿ. ರಾಮರಾಜು, ಡಾ. ನವೀನ್ ಕುಮಾರ್ ಬಿ.ಸಿ., ಎಂ.ಎ. ನಿರಂಜನ್, ವಿ.ಜೆ. ದೇವೇಂದ್ರ ಇವರುಗಳನ್ನು ನೇಮಿಸಿಕೊಳ್ಳಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ದೀರ್ಘಕೇಶಿ ಶಿವಣ್ಣನವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸಂಘದ ಬಲವರ್ಧನೆಗೆ ಒಗ್ಗಟ್ಟು ಪ್ರದರ್ಶಿಸಲು ಕೋರಿದರು. ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಒಕ್ಕಲಿಗ ಸಮಾಜದ ಇಬ್ಬರು ಯುವತಿಯರಿಗೆ ಪ್ರೋತ್ಸಾಹ ಧನ ನೀಡಲಾಯಿತು. ಸಮಾಜದ ಮಕ್ಕಳು ಹಾಗೂ ಮಹಿಳೆಯರಿಗೆ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸ ಲಾಯಿತು. ಯಶಿಕಾ ಪ್ರಾರ್ಥಿಸಿದರೆ, ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಎಲ್. ಬಸವರಾಜು ಕಾರ್ಯಕ್ರಮ ನಿರೂಪಿಸಿ, ವಿ.ಎ. ಮಂಜುನಾಥ್ ವಂದಿಸಿದರು.