ಸೋಮವಾರಪೇಟೆ, ಡಿ. 7: ಸಮೀಪದ ಕಲ್ಕಂದೂರು ಕೆಸಿಸಿ ಕ್ರಿಕೆಟರ್ಸ್ ವತಿಯಿಂದ ಯಡೂರಿನ ಬಿಟಿಸಿಜಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಮುಕ್ತ ಟಿನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಸುಂಟಿಕೊಪ್ಪ ತಂಡವನ್ನು ಮಣಿಸಿದ ಐಗೂರು ಸತೀಶ್ ಫ್ರೆಂಡ್ಸ್ ತಂಡ ಕೆಸಿಸಿ ಕಪ್ ಅನ್ನು ತನ್ನದಾಗಿಸಿಕೊಂಡಿತು.

ಫೈನಲ್ ಪಂದ್ಯದಲ್ಲಿ ಸುಂಟಿಕೊಪ್ಪ ತಂಡವನ್ನು ಪರಾಭವಗೊಳಿಸಿದ ಐಗೂರು ತಂಡ ಪ್ರಸಕ್ತ ವರ್ಷದ ಕಪ್ ಅನ್ನು ತನ್ನದಾಗಿಸಿಕೊಂಡಿತು. ಆಕರ್ಷಕ ಟ್ರೋಫಿಯೊಂದಿಗೆ ರೂ. 11 ಸಾವಿರ ನಗದು ಬಹುಮಾನ ಪಡೆಯಿತು. ದ್ವಿತೀಯ ಸ್ಥಾನಗಳಿಸಿದ ಸುಂಟಿಕೊಪ್ಪ ತಂಡ ಟ್ರೋಫಿಯೊಂದಿಗೆ ರೂ. 5,500 ನಗದು ಬಹುಮಾನ ಪಡೆಯಿತು.

ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಯನ್ನು ಸುಂಟಿಕೊಪ್ಪದ ಅಮಥ್ರ್ಯ, ಮ್ಯಾನ್ ಆಫ್ ದ ಸೀರಿಸ್ ಮತ್ತು ಬೆಸ್ಟ್ ಬ್ಯಾಟ್ಸ್‍ಮನ್ ಪ್ರಶಸ್ತಿಯನ್ನು ಐಗೂರು ತಂಡದ ಸಂತೋಷ್, ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಯತೀಶ್, ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ಕಲ್ಕಂದೂರು ತಂಡದ ಅಸ್ಪದ್, ಹಿರಿಯ ಆಟಗಾರ ಪ್ರಶಸ್ತಿಯನ್ನು ಕಲ್ಕಂದೂರಿನ ನಾಗರಾಜ್ ಅವರುಗಳು ಪಡೆದುಕೊಂಡರು.

ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ದೀಪಕ್, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಸುರೇಶ್ ಶೆಟ್ಟಿ, ಗ್ರಾ.ಪಂ. ಸದಸ್ಯೆ ವನಜಾಕ್ಷಿ ತಿಮ್ಮಯ್ಯ, ಪ್ರಮುಖರಾದ ಬಜೆಗುಂಡಿಯ ವೆಂಕಟೇಶ್, ಪ್ರವೀಣ್, ಕಲ್ಕಂದೂರಿನ ಷರೀಫ್ ಅವರುಗಳು ಭಾಗವಹಿಸಿ ಬಹುಮಾನ ವಿತರಿಸಿದರು.

ಕೆಸಿಸಿ ಕ್ರಿಕೆಟ್ ಕ್ಲಬ್‍ನ ನಾಗರಾಜು, ಅಬ್ದುಲ್ ಸಲಾಂ, ಉಮ್ಮರ್, ಸಿದ್ದಿಕ್, ರಿಯಾಜ್ ಸೇರಿದಂತೆ ಪದಾಧಿಕಾರಿಗಳು ಪಂದ್ಯಾವಳಿಯನ್ನು ಆಯೋಜಿಸಿದ್ದರು.