ಸುಂಟಿಕೊಪ್ಪ, ನ. 29: ಇತ್ತೀಚೆಗಿನ ಕೆಲವು ದಿನಗಳಿಂದ ಐಗೂರು ಗ್ರಾಮ ಸದಾ ಸುದ್ದಿಯಲ್ಲಿದೆ. ಕೊಡಗಿನ ಕೆಲವೇ ಸೂಕ್ಷ್ಮ ಪ್ರದೇಶಗಳಲ್ಲಿ ಐಗೂರು ಗ್ರಾಮ ಒಂದಾಗಿದೆ. ರಾಜಕೀಯ ಜಿದ್ದಾಜಿದ್ದಿಗೆ ಹೆಸರಾದ ಈ ಗ್ರಾಮದಲ್ಲಿ ಘಟಾನುಘಟಿ ರಾಜಕಾರಣಿಗಳಿಗೆ ಆಶ್ರಯ ಕಲ್ಪಿಸಿದೆ. ಆದರೆ ಇಂದು ಯಾರೂ ಊಹಿಸದೆ ಇರುವ ಅಹಿತಕರ ಘಟನೆ ಸಂಭವಿಸಿರುವದರಿಂದ ಗ್ರಾಮದ ಜನತೆ ಆತಂಕದಲ್ಲಿದ್ದಾರೆ.

ಐಗೂರು ಗ್ರಾಮ ಪಂಚಾಯಿತಿ ಮಾಜಿ ಮುಖ್ಯಮಂತ್ರಿ ದಿ. ದೇವರಾಜ್ ಅರಸು, ಮಾಜಿ ಮುಖ್ಯಮಂತ್ರಿ ದಿ. ಗುಂಡೂರಾವ್ ಅವರ ಆಡಳಿತ ಅವಧಿಯಿಂದಲೂ ಕಾಂಗ್ರೆಸ್ ಹಿಡಿತದಲ್ಲಿತ್ತು. ಆನಂತರ ಗುಂಡೂರಾವ್ ಸರಕಾರ ಪತನಗೊಂಡು ರಾಮಕೃಷ್ಣ ಹೆಗಡೆ ಅವರ ಸರಕಾರ 1983 ರಲ್ಲಿ ಅಸ್ತಿತ್ವಕ್ಕೆ ಬಂದಾಗ ಆಗ ಸಚಿವ ಸಂಪುಟದಲ್ಲಿ ಅರಣ್ಯ ಸಚಿವರಾಗಿದ್ದ ಈ ಗ್ರಾಮದ ಸಮೀಪದ ಕಿರಗಂದೂರಿನ ಬಿ.ಎ. ಜೀವಿಜಯ ಅವರ ಪ್ರಾಬಲ್ಯದಿಂದ ಜನತಾ ಪಕ್ಷ ಆನಂತರ ಜನತಾದಳ ಹಿಡಿತಕ್ಕೆ ಬಂದಿತ್ತು. ಆನಂತರ ಜಿಲ್ಲಾ ಪರಿಷತ್, ತಾಲೂಕು ಪಂಚಾಯಿತಿ, ಮಂಡಲ ಪಂಚಾಯಿತಿಯ ಎಲ್ಲಾ ಆಡಳಿತವೂ ಜನತಾದಳ ತೆಕ್ಕೆಗೆ ಬಂತು.

1988 ರಲ್ಲಿ ನಡೆದ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಐಗೂರು ಕ್ಷೇತ್ರದಿಂದ ಈಗ ಸುಂಟಿಕೊಪ್ಪ ಜಿ.ಪಂ. ಕ್ಷೇತ್ರದ ಸದಸ್ಯೆ ಕೆ.ಪಿ. ಚಂದ್ರಕಲಾ ಜಯಭೇರಿ ಸಾಧಿಸಿದ್ದ ಹಿರಿಯ ಸಹಕಾರಿ ರಾಜಕೀಯದ ‘ಕಿಂಗ್’ ಮೇಕರ್ ಖ್ಯಾತಿಯ ದಿವಂಗತ ಕೆ.ಟಿ. ಪೂವಯ್ಯ ರಾಜಕೀಯ ಖಾರಸ್ತಾನ ಐಗೂರು ಆಗಿತ್ತು. 1990 ರಲ್ಲಿ ಅಯೋದೆsÀ್ಯಯಲ್ಲಿ ರಾಮಮಂದಿರ ನಿರ್ಮಾಣದಲ್ಲಿ ಆದ ರಾಷ್ಟ್ರವ್ಯಾಪಿ ಆಂದೋಲನದ ಸಂದರ್ಭ ಐಗೂರಿನ ಮಸೀದಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ನಂತರ ಐಗೂರು ಗ್ರಾಮಕ್ಕೆ ಕಪ್ಪುಚುಕ್ಕಿ ತಗುಲಿತು. ಆನಂತರ ನಡೆದ ಲೋಕಸಭೆ, ವಿಧಾನಸಭೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಚುನಾವಣೆ ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಜನತಾದಳ ಬಿಜೆಪಿ ಪಕ್ಷದವರ ರಾಜಕೀಯ ಘರ್ಷಣೆಗೂ ಕಾರಣವಾಯಿತು.

ಇತ್ತೀಚೆಗೆ ಐಗೂರು ಮಸೀದಿಗೆ ರಾತ್ರಿ ವೇಳೆ ನುಗ್ಗಿದ್ದ ದುಷ್ಕರ್ಮಿಗಳು ಮಸೀದಿಯಲ್ಲಿದ್ದ ಕುರಾನ್‍ಗೆ ಬೆಂಕಿ ಹಚ್ಚಿ ಕುಚೇಷ್ಟೆ ತೋರಿಸಿದ್ದು, ಆನಂತರ ಅದೇ ಗ್ರಾಮದ ನಿವಾಸಿ ವಕೀಲರೂ ಹಿಂದೂ ಸಂಘಟನೆಯ ಪ್ರಮುಖ ಕೆ.ಎಸ್. ಪದ್ಮನಾಭ ಅವರ ಕಾರಿಗೆ ಬೆಂಕಿ ಹಚ್ಚಿ ನಾಶಪಡಿಸಿದ್ದ ಅಹಿತಕರ ಘಟನೆ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ.

ದನ-ಕರುಗಳನ್ನು ಸಾಗಿಸಲು ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು