ಮಡಿಕೇರಿ, ಅ. 30: ಎಲ್ಲೆಲ್ಲೂ ದೀಪಾವಳಿ ಸಂಭ್ರಮ... ಮೂರು ದಿನಗಳ ಕಾಲ ಮನೆ-ಮನಗಳನ್ನು ಬೆಳಗುವ ದೀಪಗಳ ಹಬ್ಬ ದೀಪಾವಳಿ ಪ್ರಯುಕ್ತ ನಿನ್ನೆ ನರಕ ಚತುರ್ದಶಿ ಹಾಗೂ ಇಂದು ಲಕ್ಷ್ಮಿ ಪೂಜೆಯನ್ನು ಜನತೆ ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಅಲಂಕಾರದೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಲಕ್ಷ್ಮಿಯನ್ನು ಆರಾಧಿಸದರು. ಶ್ರೀ ವಿಷ್ಣುವು ಲಕ್ಷ್ಮಿ ಸಹಿತ ಎಲ್ಲ ದೇವತೆಗಳನ್ನು ಬಲಿಯ ಚಕ್ರವರ್ತಿಯ ಸೆರೆಮನೆಯಿಂದ ಮುಕ್ತಗೊಳಿಸಿದರು.