ಮಡಿಕೇರಿ, ಅ. 1: ಎಲ್ಲ ಉಪ ಸಮಿತಿಗಳು, ಹಿರಿಯರು, ಪಕ್ಷ, ಜಾತಿ ಬೇಧ ಮರೆತು ನಾಡಹಬ್ಬ ದಸರಾ-ಜನೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವಂತೆ ತೀರ್ಮಾ ನಿಸಲಾಯಿತು.ಇಲ್ಲಿನ ಕಾವೇರಿ ಕಲಾಕ್ಷೇತ್ರದಲ್ಲಿ ದಸರಾ ಸಮಿತಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಪೂರ್ವ ತಯಾರಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು, ನಾಳೆಯಿಂದಲೇ ಕರಗ ಉತ್ಸವ ದೊಂದಿಗೆ ದಸರಾಗೆ ಚಾಲನೆ ದೊರಕಲಿದ್ದು, ಉತ್ಸವದ ಯಶಸ್ವಿಗೆ ಎಲ್ಲರೂ ಕೈಜೊಡಿಸಬೇಕೆಂದು ಕೋರಿದರು. ಕಾರ್ಯಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಎಲ್ಲರೂ ಒಂದೇ ಎಂಬ ಭಾವನೆಯಿಂದ ಉತ್ಸವದಲ್ಲಿ ಪಾಲ್ಗೊಳ್ಳಬೇಕು. ಎಲ್ಲ ಉಪ ಸಮಿತಿಗಳು ದಸರಾ ಸಮಿತಿಯೊಂದಿಗೆ ಸಂಪರ್ಕವಿರಿಸಿ ಕೊಂಡು ಪ್ರೋತ್ಸಾಹ ನೀಡಬೇಕೆಂದು ಹೇಳಿದರು. ಮಳೆ ದೂರವಾಗಿದ್ದು, ದಸರಾವನ್ನು
(ಮೊದಲ ಪುಟದಿಂದ) ವಿಜೃಂಭಣೆಯಿಂದ ಆಚರಿಸೋಣ ಎಂದರು. ಮಾಜಿ ಕಾರ್ಯಾಧ್ಯಕ್ಷ ಕೆ.ಎಂ. ಗಣೇಶ್ ಮಾತನಾಡಿ, ಎಲ್ಲ ಸಮಿತಿಗಳಿಗೂ ಜವಾಬ್ದಾರಿಯಿದ್ದು, 10 ದಿನಗಳ ಕಾಲ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಪರಸ್ಪರ ಸಹಕಾರದೊಂದಿಗೆ ಕೈಜೊಡಿಸಬೇಕು. ಆಹ್ವಾನಿತರಿಗೆ, ಅತಿಥಿಗಳಿಗೆ ಸಮಿತಿ ಪದಾಧಿಕಾರಿಗಳ ಸಂಬಂಧಿಕರಿಗೆ ಆಸನದ ವ್ಯವಸ್ಥೆ ಮಾಡಿಕೊಡಬೇಕು. ವೇದಿಕೆ ಹಾಗೂ ಸ್ವಾಗತ ಸಮಿತಿ ಹೊಂದಾಣಿಕೆಯಿಂದ ಕೆಲಸ ಮಾಡಬೇಕೆಂದು ಹೇಳಿದರು.
ಗೌರವ ಅಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಎಲ್ಲರೂ ಒಮ್ಮನಸ್ಸಿನಿಂದ ಕೈಜೋಡಿಸಿದರೆ 9 ದಿನಗಳ ಕಾರ್ಯಕ್ರಮಗಳನ್ನು ಸುಲಲಿತವಾಗಿ ಮಾಡಬಹುದು. ಅಧಿಕಾರಿಗಳು ಹಿಡಿತದಲ್ಲಿರಿಸಿಕೊಂಡು ಜನೋತ್ಸವ ಸರಕಾರದ ಉತ್ಸವವಾಗಿದೆ. ಎಲ್ಲರೂ ಸಹಕರಿಸುವಂತೆ ಕೋರಿದರು.
ಗೌರವ ಅಧ್ಯಕ್ಷ ಸತೀಶ್ ಪೈ, ಪ್ರಧಾನ ಕಾರ್ಯದರ್ಶಿ ಹಲವು ಸಲಹೆಗಳನ್ನು ನೀಡಿದರು. ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. 9 ದಿನಗಳ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ವಿಶೇಷ ಆಕರ್ಷಣೆ ಯಾಗಿರುವ ತಾ. 7 ರಂದು ಮಹಿಳಾ ದಸರಾದಲ್ಲಿ ಮಹಿಳೆಯರ ಹುಲಿವೇಶ, ಚಂಡೆ, ಇನ್ನಿತರ ಕಾರ್ಯಕ್ರಮಗಳಿವೆ. ತಾ. 9 ರಂದು ಮಕ್ಕಳ ದಸರಾದಂದು ಮಕ್ಕಳ ಸಂತೆ, ಮಕ್ಕಳ ಆರ್ಕೆಸ್ಟ್ರಾ ಕಾರ್ಯಕ್ರಮ ಗಮನ ಸಳೆಯಲಿದೆ. ಸಮಿತಿಗೆ ವೇದಿಕೆಯಲ್ಲಿ ಎಲ್ಲ ರೀತಿಯ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಆದಷ್ಟು ಭಾಷಣ ಹಾಗೂ ವೇದಿಕೆ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡುವಂತೆ ಕೋರಿದರು.
ಕವಿಗೋಷ್ಠಿ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ತಾ. 8 ರಂದು ಕವಿಗೋಷ್ಠಿ ಆಯೋಜನೆ ಮಾಡಲಾಗಿದ್ದು, ಈ ಬಾರಿ ವಿಭಿನ್ನವಾಗಿ ರಾಜಾಸೀಟ್ ಅಥವಾ ಸೂಕ್ತ ಕಡೆಯಲ್ಲಿ ಆಯೋಜನೆ ಮಾಡಲು ಚಿಂತಿಸಲಾಗಿದೆ ಎಂದರು. ರಾಜಾಸೀಟ್ನಲ್ಲಿ ಆಯೋಜನೆ ಮಾಡುವ ಬಗ್ಗೆ ಸಮಿತಿಯವರು ಸಲಹೆ ನೀಡಿದರು.
ಕ್ರೀಡಾ ಸಮಿತಿ ಅಧ್ಯಕ್ಷ ಸದಾ ಮುದ್ದಪ್ಪ ತಾ. 5-6 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಗುವದು. ತಾ. 8 ರಂದು ಗಾಂಧಿ ಮೈದಾನದಲ್ಲಿ ಕಬಡ್ಡಿ ಪಂದ್ಯಾಟ ಆಯೋಜಿಸ ಲಾಗುವದೆಂದು ತಿಳಿಸಿದರು. ಇನ್ನುಳಿದಂತೆ ಇತರ ಉಪ ಸಮಿತಿಗಳ ಅಧ್ಯಕ್ಷರುಗಳು ತಮ್ಮ ವ್ಯಾಪ್ತಿಯ ಕಾರ್ಯ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು.
ಸಮಿತಿ ಪ್ರಮುಖ ಟಿ.ಹೆಚ್. ಉದಯಕುಮಾರ್ ತಾ. 2 ರಂದು ಕರಗ ಹೊರಡುವ ಸಂದರ್ಭ ಮಹದೇವಪೇಟೆ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸುವಂತೆ ಅಧಿಕಾರಿ ಗಳಲ್ಲಿ ಮನವಿ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಉಪ ಸಮಿತಿಗಳ ಪದಾಧಿಕಾರಿಗಳು, ಸದಸ್ಯರುಗಳು ಇದ್ದರು. ಸಮಿತಿ ಕಾರ್ಯದರ್ಶಿ ಗಿಲ್ಬರ್ಟ್ ಲೋಬೋ ವಂದಿಸಿದರು.