ಶ್ರೀಮಂಗಲ, ಅ. 17 : ಮೊದಲು ಸಾಂಪ್ರದಾಯಕ ಕೃಷಿ ಪದ್ಧತಿಯಿಂದ ನೆಮ್ಮದಿಯ ಬದುಕು ಸಾಗಿಸುತ್ತಿದ್ದ ರೈತ ಇದೀಗ ಒತ್ತಡದ ಕೃಷಿಯಲ್ಲಿ ತೊಡಗಿಸಿಕೊಂಡು ಸಂಕಷ್ಟ ಎದುರಿಸು ವಂತಾಗಿದೆ ಎಂದು ಪ್ರಗತಿಪರ ಕೃಷಿಕ ತೀತೀರ ಕುಶಾಲಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪೊನ್ನಂಪೇಟೆ ಹಾಗೂ ಟಿ.ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ಟಿ.ಶೆಟ್ಟಿಗೇರಿಯಲ್ಲಿ ನಡೆದ ಕೃಷಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು ಹಿಂದಿನ ಕಾಲದಲ್ಲಿ ಸಾವಯವ ಕೃಷಿ ಪದ್ಧತಿಯೊಂದಿಗೆ ತಾವೇ ದುಡಿದು ಭತ್ತದ ಕೃಷಿಯಲ್ಲಿ ಉತ್ತಮ ಫಸಲು ಪಡೆಯುತ್ತಿದ್ದರು. ಆದರೆ ಇತ್ತೀಚೆನ ದಿನಗಳಲ್ಲಿ ವಾಣಿಜ್ಯ ಬೆಳೆಗಳಿಗೆ ಹೆಚ್ಚು ಒತ್ತು ಕೊಡುವದರಿಂದ ಹಾಗೂ ನಿರ್ವಹಣಾ ವೆಚ್ಚದ ಹೆಚ್ಚಳ, ಕಾಡು ಪ್ರಾಣಿಗಳ ಉಪಟಳದಿಂದ ಭತ್ತ ಕೃಷಿ ಕಡಿಮೆಯಾಗಿದೆ ಇದರೊಂದಿಗೆ ರಾಸಾಯನಿಕ ಗೊಬ್ಬರ ಬಳಕೆಗೆ ಅವಲಂಬಿತವಾಗಿದ್ದು, ಆರೋಗ್ಯಕರ ಫಸಲು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿ.ಪಂ. ಮಾಜಿ ಅಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ ಮಾತನಾಡಿ ಕೃಷಿ ಪ್ರಧಾನ ಜಿಲ್ಲೆ ಕೊಡಗಿನಲ್ಲಿ ಜನರು ಕೃಷಿಯಿಂದ ಅಭಿವೃದ್ಧಿ ಹೊಂದಬೇಕು. ಮಹಿಳೆ ಯರು ಸಬಲರಾಗಬೇಕೆಂಬ ಉದ್ದೇಶ ದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಳವಡಿಸಿಕೊಂಡಿರುವ ಕಾರ್ಯಕ್ರಮದ ಪ್ರಯೋಜನವನ್ನು ಎಲ್ಲರೂ ಪಡೆದುಕೊಂಡು ಆತ್ಮ ಗೌರವದಿಂದ ಬದುಕಲು ಪ್ರಯತ್ನಿ¸ Àಬೇಕು. ಇಂದಿಗೂ ಯಾವೊಬ್ಬ ರೈತನ ಪೋಷಕರು ವೃದ್ಧಾಶ್ರಮ ಸೇರದೇ ಇರುವದು ರೈತನ ಸ್ವಾಭಿಮಾನಿ ಬದುಕಿಗೆ ಸಾಕ್ಷಿಯಾಗಿದೆ ಎಂದರು.

ಜಿಲ್ಲಾ ಮಟ್ಟದ ಉತ್ತಮ ಕೃಷಿ ಮಹಿಳೆ ಪ್ರಶಸ್ತಿ ಪಡೆದ ತಡಿಯಂಗಡ ಸೌಮ್ಯ ಕರುಂಬಯ್ಯ ಮಾತನಾಡಿ ಗೃಹಿಣಿಯರು ಕೃಷಿಯಲ್ಲಿ ತಮ್ಮ ಭಾಗವಹಿಸುವಿಕೆಯನ್ನು ತೋರ್ಪಡಿಸಿ ಕೊಳ್ಳುವದರೊಂದಿಗೆ ವಿಸ್ತøತವಾಗಿ ತೊಡಗಿಸಿಕೊಂಡು ನೈಸರ್ಗಿಕವಾಗಿ ಸಿಗುವ ಕಚ್ಚಾ ವಸ್ತುಗಳನ್ನು ಹಾಗೂ ಸಾವಯವ ಗೊಬ್ಬರವನ್ನು ಬಳಸಿಕೊಂಡು ತಮ್ಮ ವಿರಾಮದ ವೇಳೆಯಲ್ಲಿ ಕೃಷಿ ಮಾಡಿ ಲಾಭ ಗಳಿಸಬಹುದು. ವಿದ್ಯಾವಂತರು ಹೊರ ಜಿಲ್ಲೆಗೆ ಹೋಗಿ ಬೇರೆ ಉದ್ಯೋಗ ಮಾಡುವದರ ಬದಲು ನಮ್ಮ ಮಣ್ಣಲ್ಲಿ ಕೃಷಿಮಾಡಿ ಸ್ವಾವಲಂಭಿ ಬದುಕು ಕಟ್ಟಿಕೊಳ್ಳುವದರಲ್ಲಿ ನೆಮ್ಮದಿ ಕಾಣಬಹುದು. ಮಿತವ್ಯಯದಿಂದ ಅಧಿಕ ಲಾಭ ಪಡೆಯುವ ಕೃಷಿಯನ್ನು ರೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೀರಾಜಪೇಟೆ ತಾಲೂಕು ಯೋಜನಾಧಿಕಾರಿ ಸದಾಶಿವ ಮಾತನಾಡಿ, ಕೃಷಿ ಪೂರಕ ವಿಚಾರ ಸಂಕಿರಣ ಕೃಷಿ ಪ್ರಧಾನ ಜಿಲ್ಲೆಗೆ ಅತ್ಯಗತ್ಯವಾಗಿರುವದರಿಂದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದ್ದು, ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟಿ.ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಎನ್ ಸುಮಂತ್ ಮಾತನಾಡಿ, ಬದುಕಲ್ಲಿ ಅನಿವಾರ್ಯ ವಾಗಿ ಪುರುಷರನ್ನು ಅವಲಂಬಿಸಿ ಬದುಕುತಿದ್ದ ಮಹಿಳೆಯರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮ ಗಳಿಂದ ಆರ್ಥಿಕ ಸಬಲತೆಯೊಂದಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳು ವಂತಾಗಿರುವದು ಶ್ಲಾಘನೀಯ. ಇದನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಸಲಹೆ ನೀಡಿದರು.

ಈ ಸಂದರ್ಭ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಕೇಂದ್ರದ ಪ್ರಧಾನ ವಿಜ್ಞಾನಿ ಡಾ. ಎಸ್.ಜೆ ಅಂಕೇಗೌಡ, ಕಾಳುಮೆಣಸು ಕೃಷಿಯಲ್ಲಿ ರೋಗ ಹಾಗೂ ಕೀಟ ಭಾದೆಯ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟಿ.ಶೆಟ್ಟಿಗೇರಿ ಎ ಮತ್ತು ಬಿ ಒಕ್ಕೂಟದ ಅಧ್ಯಕ್ಷೆÀ ಬೊಳ್ಳಜಿರ ಸುಶೀಲಾ ಅಶೋಕ್, ಕಟ್ಟೇರ ಅಚ್ಚಪ್ಪ ಹಾಗೂ ಸಂಘದ ಸೇವಾ ಕಾರ್ಯಕರ್ತರು ಕಾರ್ಯಕ್ರಮದ ಮೇಲುಸ್ತುವಾರಿ ವಹಿಸಿದ್ದರು.