ಗೋಣಿಕೊಪ್ಪಲು, ಆ. 15: ಗೋಣಿಕೊಪ್ಪ ಕಾವೇರಿ ಕಾಲೇಜಿನ ಎನ್.ಸಿ.ಸಿ. ಘಟಕಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕರ್ನಲ್ ಸಂಜಯ್ ದತ್ತ ಎನ್.ಸಿ.ಸಿ.ಯು ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ಮೂಡಿಸುವದರ ಜೊತೆಗೆ, ಸೈನ್ಯಕ್ಕೆ ಸೇರುವವರಿಗೆ ಹಲವಾರು ಅವಕಾಶಗಳನ್ನು ಒದಗಿಸಿಕೊಡುತ್ತದೆ. ಹೆಣ್ಣು ಮಕ್ಕಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಆಯ್ಕೆಯಲ್ಲಿ ಕಾವೇರಿ ಪದವಿ, ಪದವಿಪೂರ್ವ ಹಾಗೂ ಕಾಪ್ಸ್ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಸಂದರ್ಭ ಸುಬೇದಾರ್ ಮೇಜರ್, ಸುಬೇದಾರ್ ತಿಮ್ಮಯ್ಯ, ಎನ್‍ಸಿಸಿ ಅಧಿಕಾರಿಗಳಾದÀ ಲೆಫ್ಟಿನೆಂಟ್ ಬೀನಾ, ಕ್ಯಾಪ್ಟನ್ ಬ್ರೈಟಕುಮಾರ್, ಕಾಪ್ಸ್ ಕಾಲೇಜಿನ ಗಣೇಶ್ ಉಪಸ್ಥಿತರಿದ್ದರು.