ಮಡಿಕೇರಿ, ಜು. 15: ಮೈಸೂರಿನಲ್ಲಿರುವ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲೆ ಕಾಲೇಜಿನಲ್ಲಿ ಪ್ರಥಮ ಎಂ.ಎಫ್.ಎ. ತರಗತಿಗಳ ಪ್ರವೇಶಕ್ಕಾಗಿ 2016-17ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರಥಮ ಎಂ.ಎಫ್.ಎ. ಯಲ್ಲಿ ಚಿತ್ರಕಲೆ ವಿಭಾಗ, ಶಿಲ್ಪಕಲೆ ವಿಭಾಗ, ಗ್ರಾಫಿಕ್ಸ್ ವಿಭಾಗ, ವಿದ್ಯಾರ್ಹತೆ ಮೈಸೂರು ವಿಶ್ವ ವಿದ್ಯಾನಿಲಯ ಪ್ರದಾನ ಮಾಡುವ ಬಿ.ಎಫ್.ಎ. ಪದವಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಪ್ರವೇಶದ ಬಗ್ಗೆ ಅರ್ಜಿ ಮತ್ತು ವಿವರಣಾ ಪತ್ರವನ್ನು ಪಡೆಯಲು ರೂ. 250, ಖುದ್ದಾಗಿ ಪಾವತಿಸಿ ಅಥವಾ ರೂ. 275, ಡಿ.ಡಿ.ಯನ್ನು ಡೀನ್, ಕಾವಾ, ಮೈಸೂರು ಇವರ ಹೆಸರಿನಲ್ಲಿ ಪಡೆದು ಡೀನ್ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲೆ ಕಾಲೇಜು (ಕಾವಾ) ಭಾರತ ಸರ್ಕಾರ ಪಠ್ಯಪುಸ್ತಕ ಮುದ್ರಣಾಲಯದ ಆವರಣ, ಟಿ.ಎನ್. ಪುರ ರಸ್ತೆ, ಮೈಸೂರು-570011 ಈ ವಿಳಾಸಕ್ಕೆ ಕಳುಹಿಸಿ ಪಡೆಯಬಹು ದಾಗಿದೆ.

ಅರ್ಜಿ ಸಲ್ಲಿಸಲು ಮತ್ತು ಅರ್ಹತಾ ಪರೀಕ್ಷೆ ಕುರಿತು ಮಾಹಿತಿ ಇಂತಿದೆ

ಪ್ರಥಮ ಎಂ.ಎಫ್.ಎ. ತರಗತಿಗೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ಜುಲೈ 20 ಆಗಿರುತ್ತದೆ. ಅರ್ಹತಾ ಪರೀಕ್ಷೆಯು ಜುಲೈ 22 ರಂದು ಬೆಳಿಗ್ಗೆ 11 ಗಂಟೆಗೆ ಆಯಾಯ ವಿಭಾಗದಲ್ಲಿ ಮತ್ತು ಡೀನ್ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲೆ ಕಾಲೇಜು (ಕಾವಾ) ಭಾರತ ಸರ್ಕಾರ ಪಠ್ಯ ಪುಸ್ತಕ ಮುದ್ರಣಾಲಯದ ಆವರಣ, ಟಿ.ಎನ್. ಪುರ ರಸ್ತೆ ಮೈಸೂರಿನಲ್ಲಿ ನಡೆಯಲಿದೆ. ಶುಲ್ಕ ಪಾವತಿಸಲು ತಾ. 28 ಕಡೆ ದಿನವಾಗಿದೆ. ತರಗತಿಯು ಆಗಸ್ಟ್ 1 ರಂದು ಪ್ರಾರಂಭವಾಗಲಿದೆ.ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ದೃಢೀಕರಣ ಅಂಕಪಟ್ಟಿಗಳ ಪ್ರತಿ, ಪ್ರಥಮ ಮೂಲ ತರಗತಿ ದೃಢೀಕರಿಸಿದ ಅಂಕಪಟ್ಟಿಗಳ ಪ್ರತಿ, ಬಿ.ಎಫ್.ಎ. ಅಥವಾ ತತ್ಸಮಾನ ಪದವಿಯ ದೃಢೀಕರಿಸಿದ ಅಂಕಪಟ್ಟಿಗಳ ಪ್ರತಿ, ಪ್ರಮಾಣ ಪತ್ರ, ವರ್ಗಾವಣೆ ಪತ್ರ, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ವಲಸೆ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಲಗತ್ತಿಸುವದು, ಕಲಾಕೃತಿಗಳ ಪೋರ್ಟ್‍ಪೋಲಿಯೋ ತರುವದು ಮತ್ತು ಸಂದರ್ಶನದ ಸಮಯದಲ್ಲಿ ಮೂಲ ದಾಖಲಾತಿ ಗಳನ್ನು ಹಾಜರು ಪಡಿಸುವಂತೆ ತಿಳಿಸಿದ್ದಾರೆ.