ಕುಶಾಲನಗರ, ಸೆ. 6: ಹಾರಂಗಿ ಅಣೆಕಟ್ಟೆ ಉದ್ಯಾನವನಕ್ಕೆ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಲಾಗಿದೆ. ಕಾವೇರಿ ಜಲವಿವಾದದ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು ಮಂಗಳವಾರದಿಂದ ಮುಂದಿನ ಆದೇಶ ಹೊರಬೀಳುವ ತನಕ ಪ್ರವಾಸಿಗರಿಗೆ ಉದ್ಯಾನವನ ವೀಕ್ಷಣೆಗೆ ಅವಕಾಶ ಇರುವದಿಲ್ಲ ಎಂದು ತಿಳಿಸಿದ್ದಾರೆ.
ಅಣೆಕಟ್ಟೆ ಭದ್ರತೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಣೆಕಟ್ಟೆ ವಿಭಾಗದ ಕಾರ್ಯಪಾಲಕ ಅಭಿಯಂತರ ಧರ್ಮರಾಜು ಮಾಹಿತಿ ನೀಡಿದ್ದಾರೆ.