ಶನಿವಾರಸಂತೆ, ಅ. 17: ಜಿಲ್ಲಾಮಟ್ಟದ ವೀರಶೈವ ಧಾರ್ಮಿಕ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ತಾ. 18ರಂದು (ಇಂದು) ಬೆಳಿಗ್ಗೆ 10.30 ಗಂಟೆಗೆ ಕಿರಿಕೊಡ್ಲಿ ಮಠದ ಶ್ರೀ ಗುರುಸಿದ್ದ ಸ್ವಾಮಿ ವಿದ್ಯಾ ಪೀಠದ ಶಾಲಾ ಆವರಣ, ಕೊಡ್ಲಿಪೇಟೆ ಶ್ರೀಮಾನ್ ನಿರಂಜನ ಪ್ರಣವ ಸ್ವರೂಪಿ ಹಾನಗಲ್ಲು ಕುಮಾರ ಸ್ವಾಮೀಜಿ ವೇದಿಕೆಯಲ್ಲಿ ನಡೆಯಲಿದೆ.
ನಗರಾಭಿವೃದ್ಧಿ ಮತ್ತು ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಅವರು, ಶ್ರೀ ವೀರರಾಜೇಂದ್ರ ದ್ವಾರ ಉದ್ಘಾಟನೆ ಮಾಡಲಿರುವರು.
ಕರ್ನಾಟಕ ರಾಜ್ಯ ಸರಕಾರದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮಾರಂಭದ ಉದ್ಘಾಟನೆ ಮಾಡಲಿರುವರು. ಕೊಡಗು ಜಿಲ್ಲಾ ಅ.ಭಾ.ವೀ. ಮಹಾಸಭಾ ಅಧ್ಯಕ್ಷ ಡಿ.ಬಿ. ಧರ್ಮಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಡಾ. ಶಾಮನೂರು ಶಿವ ಶಂಕರಪ್ಪ, ರಾಜ್ಯ ಘಟಕದ ಅ.ಭಾ.ವೀ. ಮಹಾಸಭಾ ಪ್ರಧಾನ ಕಾರ್ಯದರ್ಶಿ ಧರ್ಮಭೂಷಣ ಬಿ.ಎಸ್. ವಾಗೀಶ್ ಪ್ರಸಾದ್, ಬೆಂಗಳೂರು ರಾಜ್ಯ ಘಟಕದ ಅ.ಭಾ.ವೀ. ಮಹಾಸಭಾದ ಅಧ್ಯಕ್ಷ ಎನ್. ತಿಪ್ಪಣ್ಣ, ಉಪಾಧ್ಯಕ್ಷ ಕೆ.ಎಸ್. ನಾಗರಾಜಪ್ಪ, ಕೇಂದ್ರ ಸಮಿತಿ ಕಾರ್ಯದರ್ಶಿ ಸುವರ್ಣ ಚಿನ್ನಣ್ಣ, ಮಾಜಿ ಶಾಸಕ ಬಿ.ಬಿ. ಶಿವಪ್ಪ ಹಾಗೂ ಇತರ ಪ್ರಮುಖರು ಹಾಜರಿರುವರು.
ಶ್ರೀ ಸಿದ್ಧಲಿಂಗ ಸ್ವಾಮೀಜಿ ಊರುಮಠ, ಮಹಾಂತ ಸ್ವಾಮೀಜಿ ಕಲ್ಲುಮಠ, ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅರಮೇರಿ ಕಲಂಚೇರಿ ಮಠ, ವಿಶ್ವೇಶ್ವರ ಸ್ವಾಮೀಜಿ ವಿರಕ್ತಮಠ, ಸದಾಶಿವ ಸ್ವಾಮೀಜಿ ಕಿರಿಕೊಡ್ಲಿಮಠ, ಸಿದ್ದಮಲ್ಲಿಕಾರ್ಜುನ ಸ್ವಾಮೀಜಿ ಹುಲುಸೆ, ಮಲ್ಲೇಶ ಸ್ವಾಮೀಜಿ ವಿರಕ್ತಮಠ, ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಕಲ್ಲಳ್ಳಿಮಠ, ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮುದ್ದಿನಕಟ್ಟೆಮಠ, ಇಮ್ಮುಡಿ ಶಿವಲಿಂಗ ಸ್ವಾಮೀಜಿ ಶಿಡಗಳಲೆ ಮಠ, ಮಹಾಂತ ಸ್ವಾಮೀಜಿ ಶ್ರೀ ಕ್ಷೇತ್ರ ತಪೋವನ ಮನೆಹಳ್ಳಿಮಠ, ದಿವ್ಯಸಾನ್ನಿಧ್ಯ ವಹಿಸಲಿರುವರು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ತಿಳಿಸಿದೆ.